ಬೆಂಗಳೂರು: ವಿಕ್ಟೋರಿಯಾ ಸೇರಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನೆ ಸಂಸ್ಥೆಯ (ಬಿಎಂಸಿಆರ್ಐ) ಅಧೀನ ಆಸ್ಪತ್ರೆಗಳಲ್ಲಿನ ಶುಲ್ಕಗಳನ್ನು ಪರಿಷ್ಕರಿಸಲಾಗಿದ್ದು, ಚಿಕಿತ್ಸೆ, ಪ್ರಯೋಗಾಲಯದ ಶುಲ್ಕಗಳಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ.

ನ.1ರಿಂದಲೇ ಪರಿಷ್ಕೃತ ದರ ಅನ್ವಯವಾಗಿದೆ. ಬಿಎಂಸಿಆರ್ಐ ಅಧೀನದಲ್ಲಿ ವಿಕ್ಟೋರಿಯಾ, ವಾಣಿವಿಲಾಸ, ಮಿಂಟೊ ಕಣ್ಣಿನ ಆಸ್ಪತ್ರೆ, ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್ಎಸ್ವೈ) ಆಸ್ಪತ್ರೆ ಹಾಗೂ ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಈ ಆಸ್ಪತ್ರೆಗಳ ಅಭಿವೃದ್ಧಿಯ ದೃಷ್ಟಿಯಿಂದ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

‘5–6 ವರ್ಷಗಳ ಬಳಿಕ ದರ ಪರಿಷ್ಕರಣೆ ಮಾಡಲಾಗಿದೆ. ರೋಗಿಗಳ ಹಿತದೃಷ್ಟಿ ಹಾಗೂ ಆಸ್ಪತ್ರೆಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡೇ ಪರಿಷ್ಕರಿಸಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರಿ ಆರೋಗ್ಯ ವಿಮೆಗಳಡಿ ವಿವಿಧ ಪರೀಕ್ಷೆ ಹಾಗೂ ಚಿಕಿತ್ಸೆಗಳು ಉಚಿತವಾಗಿಯೇ ಲಭ್ಯವಾಗಲಿವೆ. ಬಿಪಿಎಲ್ ಕಾರ್ಡ್ ಹೊಂದಿರದವರು ಮಾತ್ರ ಈ ಮೊದಲಿಗಿಂತ ಶೇ 20ರಷ್ಟು ಹೆಚ್ಚು ಹಣ ಪಾವತಿಸಬೇಕಾಗುತ್ತದೆ’ ಎಂದು ಸಂಸ್ಥೆಯ ವೈದ್ಯಾಧಿಕಾರಿಗಳು ತಿಳಿಸಿದರು.

ಪರಿಷ್ಕೃತ ದರದ ಪ್ರಕಾರ ಹೊರ ರೋಗಿಗಳ ನೋಂದಣಿ ಶುಲ್ಕ ₹ 10ರಿಂದ ₹ 20, ಒಳ ರೋಗಿಗಳ ದಾಖಲಾತಿ ನೋಂದಣಿ ಶುಲ್ಕ ₹ 25ರಿಂದ ₹ 50, ರಕ್ತ ಪರೀಕ್ಷೆಯ ಶುಲ್ಕ ₹ 70ರಿಂದ ₹ 120, ವಾರ್ಡ್ ಶುಲ್ಕ ₹ 25ರಿಂದ ₹ 50, ತ್ಯಾಜ್ಯ ನಿರ್ವಹಣೆ ದರ ₹ 10ರಿಂದ ₹ 50ಕ್ಕೆ ಹೆಚ್ಚಳ ಮಾಡಲಾಗಿದೆ. ಇದೇ ರೀತಿ, ಪ್ರಮಾಣ ಪತ್ರ ಸೇರಿ ವಿವಿಧ ಶುಲ್ಕಗಳನ್ನು ಹೆಚ್ಚಳ ಮಾಡಲಾಗಿದ್ದು, ಬೆಡ್ ಸೇರಿ ಕೆಲ ಶುಲ್ಕಗಳನ್ನು ಶೇ 20ಕ್ಕಿಂತ ಅಧಿಕ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

ತಲಾ ಎರಡು ಬೆಡ್ಗಳ ವಿಶೇಷ ವಾರ್ಡ್ನ ಶುಲ್ಕವನ್ನು ₹ 750ರಿಂದ ₹ 1 ಸಾವಿರ, ತಲಾ ಒಂದು ಬೆಡ್ನ ವಿಶೇಷ ವಾರ್ಡ್ನ ಶುಲ್ಕವನ್ನು ₹ 750ರಿಂದ ₹ 2 ಸಾವಿರಕ್ಕೆ ಏರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.