ಬೆಂಗಳೂರು: ‘ಆರ್ಥಿಕ ಪ್ರಗತಿಗೆ ಕಾಲಕ್ಕೆ ಅನುಗುಣವಾಗಿ ಆರ್ಥಿಕ ನೀತಿಗಳನ್ನುಪರಿಷ್ಕರಿಸುವುದು ಅವಶ್ಯಕ’ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ (ಐಸೆಕ್) ಸಂದರ್ಶಕ ಪ್ರಾಧ್ಯಾಪಕ ಎಂ.ವಿ.ನಾಡಕರ್ಣಿ ಹೇಳಿದರು.

ಐಸೆಕ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಪ್ರೊ.ಬಿ.ಎಸ್.ಶ್ರೀಕಂಠಾರಾಧ್ಯ ಅವರಿಗೆ ಅಭಿನಂದನೆ ಹಾಗೂ ‘ಪಬ್ಲಿಕ್ ಪಾಲಿಸಿ ಇನ್ ಇಂಡಿಯಾ’ (ಭಾರತದಲ್ಲಿ ಸಾರ್ವಜನಿಕ ನೀತಿಗಳು) ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪುಸ್ತಕದಲ್ಲಿ ಪ್ರಸ್ತುತ ಆರ್ಥಿಕ ಪದ್ಧತಿಯ ಬದಲಾವಣೆಗಳಿಗೆ ಪೂರಕವಾದ ನೀತಿಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ’ ಎಂದರು.

ಐಸೆಕ್ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಅಬ್ದುಲ್ ಅಜೀಜ್,‘ಆರ್ಥಿಕ ನೀತಿಗಳ ನಿರೂಪಣೆ ಕುರಿತ ಈ ಪುಸ್ತಕ ಹೆಚ್ಚು ಪ್ರಸ್ತುತತೆಯಿಂದ ಕೂಡಿದೆ’ ಎಂದು ಹೇಳಿದರು.

ಐಸೆಕ್ ವತಿಯಿಂದ ಸನ್ಮಾನಿತರಾದ ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಬಿ.ಎಸ್.ಶ್ರೀಕಂಠಾರಾಧ್ಯ ಅವರು, ಸಂಸ್ಥೆ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.

‘ಪಬ್ಲಿಕ್ ಪಾಲಿಸಿ ಇನ್ ಇಂಡಿಯಾ’ ಪುಸ್ತಕವನ್ನುಐಸೆಕ್ ಸಂಸ್ಥೆಯ ಪ್ರೊ.ಕೃಷ್ಣ ರಾಜ್ ಪ್ರಕಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.