ಬೆಂಗಳೂರು: ನಾಡಿನ ಶ್ರೇಷ್ಠ ದಾಸಪರಂಪರೆಯ ಕನಕ-ಪುರಂದರ ದಾಸರ ಸಾಹಿತ್ಯವನ್ನು ಮನೆ, ಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ಹೆಜ್ಜೆ ಇಟ್ಟಿದ್ದು, ಸಂಘದಿಂದ 15ನೇ ವರ್ಷದ ಕನಕ ಪುರಂದರ ಸಂಗೀತ ಉತ್ಸವಕ್ಕೆ ಶ್ರೀ ರಾಮಮಂದಿರ ಸಭಾಂಗಣದಲ್ಲಿ ಚಾಲನೆ ದೊರೆಯಿತು.

ಮೂರು ದಿನ ನಡೆಯಲಿರುವ ಈ ಸಂಗೀತ ಉತ್ಸವಕ್ಕೆ ಯೋಗರತ್ನ ಡಾ.ಎಸ್.ಎನ್.ಓಂಕಾರ್, ಹರಿದಾಸ ಸಂಘದ ಅಧ್ಯಕ್ಷ ಡಾ.ಹಾ.ರಾ.ನಾಗರಾಜಾಚಾರ್ಯ, ಸಮಾಜ ಸೇವಕರಾದ ಎಸ್.ರಘುನಾಥ್, ಮಾಜಿ ಮಹಾನಗರ ಪಾಲಿಕೆ ಸದಸ್ಯ ಮೋಹನ್ ಕುಮಾರ್, ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಎಸ್.ಶ್ರೀಧರ್, ಖಜಾಂಚಿ ಎಸ್. ಮಹೇಶ್ ಚಾಲನೆ ನೀಡಿದರು.

ನೃತ್ಯದಲ್ಲಿ ಸಾಧನೆ ಮಾಡಿದ ಡಾ.ಮಾಲಾ ಶಶಿಕಾಂತ್ ಮತ್ತು ಸಂಗೀತ ಸಾಧಕ ಡಾ.ಸುವರ್ಣ ಮೋಹನ್ ಅವರಿಗೆ ಇದೇ ವೇಳೆ ಗಾನ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನಕ ಮತ್ತು ಪುರಂದರ ದಾಸರು ದಾಸಶೇಷ್ಠರು. ದಾಸ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ದಾಸ ಶೇಷ್ಠರ ವಿಚಾರ ಚಿಂತನೆ ಸಾಹಿತ್ಯ ಇಂದಿನ ಯುವ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ 15 ವರ್ಷಗಳಿಂದ ಸಂಗೀತ ಉತ್ಸವ ಆಯೋಜಿಸಲಾಗುತ್ತಿದೆ. ದಾಸ ಸಾಹಿತ್ಯ ಎಲ್ಲರ ಮನೆ, ಮನಗಳಿಗೆ ತಲುಪಿಸಲು ಕನಕ-ಪುರಂದರ ಬಾವಚಿತ್ರದೊಂದಿಗೆ ಕಲಾ ತಂಡಗಳ ಜೊತೆಯಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡಿ, ದಾಸ ಶೇಷ್ಠರ ಚಿಂತನೆಗಳನ್ನು ಮನೆಮನೆಗಳಿಗೆ ತಲುಪಿಸಲಾಗುತ್ತಿದೆ ಎಂದು ಕೆ.ಎಸ್.ಶ್ರೀಧರ್ ಹೇಳಿದ್ದಾರೆ.

ಸಂಘದ ಪದಾಧಿಕಾರಿಗಳಾದ ಡಾ.ಮಂಜುನಾಥ್, ಜಯರಾಮ್, ಸುದರ್ಶನ್, ಮದನ್ ರಾವ್, ಬಸವರಾಜ್, ವಿಜಯರಾಘವನ್, ಪದ್ಮನಾಭ, ರವೀಂದ್ರ, ವಿಠ್ಠಲ್, ಗಂಗಾಧರ್, ರಾಜ, ವೆಂಕಟೇಶ್ ಬಾಬು, ಕೃಷ್ಣಮೂರ್ತಿ, ರಂಗರಾಜು, ಅಶೋಕ್, ಚಂದ್ರಶೇಖರ್ ಓ.ಟಿ., ಎನ್.ಬಾಬು, ಕುಪೇಂದ್ರ, ನಾಗೇಂದ್ರ ವಿರೇಶ್, ಹೆಚ್.ಎಲ್.ಕೃಷ್ಣ, ಶಾರದಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.