ಕರ್ನಾಟಕ ಹಿಂದೆ ಸರ್ವಜನಾಂಗದ ಶಾಂತಿಯ ತೋಟವಾಗಿತ್ತು. ಅದನ್ನು ಹೊಸ ತಲೆಮಾರಿನವರಿಗೆ ತಿಳಿಸಬೇಕಿದೆ. ಆ ಕೆಲಸವನ್ನು ಮಾಡುತ್ತಿದ್ದೇವೆ ।
ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಊರಿನ ಹೆಸರು ಉಳಿಸುವ ಅಭಿಯಾನ
ಮರೆಯಾಗುತ್ತಿರುವ ಊರಿನ ಹೆಸರುಗಳನ್ನು ಉಳಿಸುವ ಅಭಿಯಾನ ಹಮ್ಮಿಕೊಳ್ಳಲು ಪ್ರಾಧಿಕಾರವು ಮುಂದಾಗಿದೆ. ಕನ್ನಡದಲ್ಲಿ ಸುಮಾರು 65 ಸಾವಿರ ಊರಿನ ಹೆಸರುಗಳಿವೆ ಎಂಬುದನ್ನು ಪ್ರಾಧಿಕಾರ ಗುರುತಿಸಿದ್ದು ಆ ಹೆಸರನ್ನು ಶಾಶ್ವತವಾಗಿ ಉಳಿಸಲು ಕ್ರಮವಹಿಸಿದೆ. ಇದಕ್ಕೆ ಎನ್‌ಎಸ್‌ಎಸ್ ಘಟಕಗಳಲ್ಲಿ ಸಕ್ರಿಯವಾಗಿರುವ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಿದೆ. ಅವರ ನೆರವಿನಿಂದ ಸರ್ಕಾರಿ ಕಚೇರಿಗಳು ಶಾಲೆಗಳು ಅಂಗಡಿಗಳು ಸೇರಿ ವಿವಿಧೆಡೆ ನಾಮಫಲಕಗಳಲ್ಲಿ ಆಯಾ ಊರುಗಳ ಹೆಸರನ್ನು ಅಳವಡಿಕೆ ಮಾಡಲಿದೆ.