ಬೆಂಗಳೂರು: ವೈಯಕ್ತಿಕ ವರ್ಚಸ್ಸು ಹಾಗೂ ಪಕ್ಷಗಳ ಸಿದ್ಧಾಂತಕ್ಕೆ ಅಂಟಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿರುವ ರಾಜಧಾನಿಯ ಮತದಾರರು, ಮತ್ತೆ ಅದೇ ಪಕ್ಷ ಹಾಗೂ ವ್ಯಕ್ತಿಗಳಿಗೆ ಮಣೆ ಹಾಕಿದ್ದಾರೆ. ಈ ನಿಟ್ಟಿನಲ್ಲಿ ಸ್ಥಾನಗಳ ಸಂಖ್ಯೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನು ಹೆಚ್ಚಿಸಿಕೊಂಡಿದ್ದರೆ, ಕಾಂಗ್ರೆಸ್ ಯಥಾಸ್ಥಿತಿ ಕಾಯ್ದುಕೊಂಡಿದೆ. ಜೆಡಿಎಸ್ ಇದ್ದ ಒಂದು ಸ್ಥಾನವನ್ನೂ ಕಳೆದುಕೊಂಡು ಶೂನ್ಯವಾಗಿದೆ.

ನಗರದ 28 ವಿಧಾನಸಭೆ ಕ್ಷೇತ್ರಗಳಲ್ಲಿ ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ, ಹ್ಯಾಟ್ರಿಕ್ ಗೆಲುವು ಸಾಧಿಸಿದವರಿಂದ ಹಿಡಿದು ಮತ್ತೆ ಕಣದಲ್ಲಿದ್ದವರಿಗೆ ಗೆಲುವು ಸುಲಭವಾಗಿರಲ್ಲ. ನೂರಾರು ಕೋಟಿ ಅಭಿವೃದ್ಧಿ ಕಾರ್ಯಗಳು ಮುಂದಿದ್ದರೂ ಮತದಾರ ಸುಲಭವಾಗಿ ವಿಜಯಮಾಲೆಯನ್ನು ಹಾಕಿಲ್ಲ. ಜಿದ್ದಾಜಿದ್ದಿಯ ಹೋರಾಟದಲ್ಲಿ ಅಂತಿಮವಾಗಿ ಗೆದ್ದು ನಗೆಬೀರುವ ಮುನ್ನ ಸಾಕಷ್ಟು ಆತಂಕ ಮನೆ ಮಾಡಿತ್ತು. ಪ್ರಧಾನಿಯವರ ದೀರ್ಘ ರ್ಯಾಲಿ, ಎಐಸಿಸಿ ಮುಖಂಡರ ರ್ಯಾಲಿಗಳು ಮತದಾರರ ಮೇಲೆ ಪ್ರಭಾವ ಬೀರಿಲ್ಲ.

ರಾಜಧಾನಿ ಬೆಂಗಳೂರು ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಜಿಲ್ಲೆ. ಇಲ್ಲಿ ಪ್ರತಿಬಾರಿಯೂ ರಾಷ್ಟ್ರೀಯ ಪಕ್ಷಗಳು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ. ವೈಯಕ್ತಿಕ ಪ್ರಭಾವಳಿಯನ್ನೇ ನಂಬಿಕೊಂಡಿರುವ ಪಕ್ಷಗಳು ಅಂತಹ ವ್ಯಕ್ತಿಗಳಿಗೇ ಮತ್ತೆ ಟಿಕೆಟ್ ನೀಡುವ ಮೂಲಕ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿವೆ.

ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಹಾಗೂ ಕಾಂಗ್ರೆಸ್ ಪರವಾದ ಅಲೆ ಬೆಂಗಳೂರಿನ ಮತದಾರರ ಮೇಲೆ ಅಂತಹ ಪ್ರಭಾವ ಬೀರಿಲ್ಲ. ವ್ಯಕ್ತಿ ಪ್ರಭಾವಳಿಗೆ ಮತ್ತೆ ಇಲ್ಲಿ ಅವಕಾಶ ಸಿಕ್ಕಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಗಳ ಹಾಲಿ ಶಾಸಕರೇ ಗೆಲುವು ಸಾಧಿಸಿದ್ದಾರೆ. ಇವರಿಗೆ ಗೆಲುವು ಅಷ್ಟು ಸುಲಭವಾಗಿರಲ್ಲ. ಆದರೂ, ಜಯ ದಾಖಲಿಸುವಷ್ಟು ಮತಗಳು ಅವರ ಖಾತೆಗೆ ಬಂದಿವೆ.

ಕಾಂಗ್ರೆಸ್ನ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಎಂ. ಕೃಷ್ಣಪ್ಪ, ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್ ತಮ್ಮ ಗೆಲುವನ್ನು ಮುಂದುವರಿಸಿದ್ದಾರೆ. ಅದೇ ರೀತಿ, ಬಿಜೆಪಿಯ ಆರ್. ಅಶೋಕ, ಸುರೇಶ್ ಕುಮಾರ್, ಅಶ್ವತ್ಥನಾರಾಯಣ, ರಘು, ರವಿ ಸುಬ್ರಮಣ್ಯ, ಸತೀಶ್ ರೆಡ್ಡಿ, ಎಸ್.ಆರ್. ವಿಶ್ವನಾಥ್, ಎಸ್.ಟಿ. ಸೋಮಶೇಖರ್, ಎಂ. ಕೃಷ್ಣಪ್ಪ ಅವರ ಜಯಕ್ಕೆ ಅಡ್ಡಿಯಾಗಿಲ್ಲ.

ಪುಲಕೇಶಿನಗರದಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಅಖಂಡ ಶ್ರೀನಿವಾಸಮೂರ್ತಿ ಬಿಎಸ್ಪಿಯಿಂದ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್ ಶ್ರೀನಿವಾಸ್ ಅವರನ್ನು ಕಣಕ್ಕಿಳಿಸಿ, ಭಾರಿ ಜಯಗಳಿಸುವ ಮೂಲಕ ಇದು ಕಾಂಗ್ರೆಸ್ನದೇ ಕ್ಷೇತ್ರ ಎಂಬುದನ್ನು ಸಾಬೀತುಪಡಿಸಿದೆ. ಇಲ್ಲಿ ಅಭ್ಯರ್ಥಿ ಬದಲಾಗಿದ್ದು, ಕಾಂಗ್ರೆಸ್ ಕ್ಷೇತ್ರ ಉಳಿಸಿಕೊಂಡಿದೆ.

ಮಹದೇವಪುರದಲ್ಲಿ ಬಿಜೆಪಿ ಅರವಿಂದ ಲಿಂಬಾವಳಿ ಅವರ ಬದಲಿಗೆ ಅವರ ಪತ್ನಿ ಮಂಜುಳಾ ಅವರನ್ನು ಕಣಕ್ಕಿಳಿಸಿತು. ಕಾಂಗ್ರೆಸ್ ಎಚ್. ನಾಗೇಶ್ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿದರೂ, ಬಿಜೆಪಿಯ ಪ್ರಾಬಲ್ಯವನ್ನು ಕಸಿದುಕೊಳ್ಳಲಾಗಿಲ್ಲ. ಹೀಗಾಗಿ, ವ್ಯಕ್ತಿ ಬದಲಾದರೂ ಬಿಜೆಪಿ ಕ್ಷೇತ್ರದಲ್ಲಿ ವಿಜಯ ಸಾಧಿಸಿತು.

ಗೋವಿಂದರಾಜನಗರದಲ್ಲಿ ವಿ. ಸೋಮಣ್ಣ ಅವರ ಬದಲಿಗೆ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಅವರು ಬಿಜೆಪಿಯಿಂದ ಕಣದಲ್ಲಿದ್ದರು. ಸೋಮಣ್ಣ ಅವರಿಗೂ ಆತಂಕ ತಂದಿದ್ದ ಕಾಂಗ್ರೆಸ್ನ ಪ್ರಿಯಕೃಷ್ಣ ಅವರಿಗೆ ಉಮೇಶ್ ಶೆಟ್ಟಿ ಪ್ರತಿಸ್ಪರ್ಧಿಯಾಗಲಿಲ್ಲ. ಸೋಮಣ್ಣ ಅವರಿಗೇ ಸೋಲುಣಿಸಲು ಸಿದ್ಧರಾಗಿದ್ದ ತಂದೆ–ಮಗ (ಕೃಷ್ಣಪ್ಪ–ಪ್ರಿಯಕೃಷ್ಣ) ಅವರಿಗೆ ವಿಜಯಮಾಲೆ ಸಂದಿದೆ.

ದಾಸರಹಳ್ಳಿ ಕ್ಷೇತ್ರವನ್ನು ಕಳೆದ ಬಾರಿ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ಗೆಲುವು ಸಾಧಿಸಲು ಶತಾಯಗತಾಯ ಪ್ರಯತ್ನಪಟ್ಟಿತ್ತು. ಕಾಂಗ್ರೆಸ್ ಒಡಕಿನ ಲಾಭ ಪಡೆದುಕೊಂಡಿದ್ದ ಜೆಡಿಎಸ್ಗೆ ಈ ಬಾರಿ ಬಿಜೆಪಿಯ ಎಸ್. ಮುನಿರಾಜು ಪ್ರಬಲ ಸ್ಪರ್ಧಿಯಾಗಿದ್ದರು. ಈ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿದ್ದ ಮುನಿರಾಜು, ಈ ಬಾರಿ ಮತ್ತೆ ಗೆಲುವು ಸಾಧಿಸುವಲ್ಲಿ ಸಫಲರಾಗಿದ್ದಾರೆ.

ಮಾಜಿ ಕಾರ್ಪೊರೇಟರ್ಗಳಿಗೆ ಸೋಲು

ಜಯನಗರದಲ್ಲಿ ಸಿ.ಕೆ. ರಾಮಮೂರ್ತಿ ಅವರನ್ನು ಹೊರತುಪಡಿಸಿದರೆ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ಗಳ ವಿಧಾನಸಭೆ ಮೆಟ್ಟಿಲೇರುವ ಆಶಯ ಕನಸಾಗಿಯೇ ಉಳಿಯಿತು. ಬಿಜೆಪಿಯಿಂದ ಆರು ಹಾಗೂ ಕಾಂಗ್ರೆಸ್ನಿಂದ ಇಬ್ಬರು ಮಾಜಿ ಕಾರ್ಪೊರೇಟರ್ಗಳು ವಿಧಾನಸಭೆ ಚುನಾವಣೆಯ ಕಣದಲ್ಲಿದ್ದರು.

ಬಿಜೆಪಿಯಿಂದ ಪದ್ಮನಾಭರೆಡ್ಡಿ (ಸರ್ವಜ್ಞನಗರ), ಎಚ್. ರವೀಂದ್ರ (ವಿಜಯನಗರ), ಎನ್.ಚಂದ್ರ (ಶಿವಾಜಿನಗರ), ಶಿವಕುಮಾರ್ (ಶಾಂತಿನಗರ), ಉಮೇಶ್ ಶೆಟ್ಟಿ (ಗೋವಿಂದರಾಜನಗರ) ಹಾಗೂ ಆನಂದಕುಮಾರ್ (ಸಿ.ವಿ. ರಾಮನ್ನಗರ), ಕಾಂಗ್ರೆಸ್ನಿಂದ ಕೇಶವಮೂರ್ತಿ (ಮಹಾಲಕ್ಷ್ಮಿ ಲೇಔಟ್) ಸ್ಪರ್ಧಿಸಿದ್ದರು

ಜೆಡಿಎಸ್ ‘ಶೂನ್ಯ’

ಬೆಂಗಳೂರು ನಗರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಭಾರಿ ಕಸರತ್ತು ನಡೆಸುತ್ತಿರುವ ‘ಮಣ್ಣಿನ ಮಕ್ಕಳ ಪಕ್ಷ’ ಜೆಡಿಎಸ್ ಈ ಬಾರಿ ಒಂದೂ ಕ್ಷೇತ್ರದಲ್ಲಿ ಗೆಲುವು ಸಾಧಿಸದೆ ಶೂನ್ಯ ಸುತ್ತಿದೆ. ಈ ಹಿಂದೆ, ಜಮೀರ್ ಅಹಮದ್ ಖಾನ್ ಜೆಡಿಎಸ್ನಲ್ಲಿದ್ದಾಗ ಚಾಮರಾಜಪೇಟೆ ಅದರ ತೆಕ್ಕೆಯಲ್ಲಿತ್ತು. ಪುಲಕೇಶಿನಗರದಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಕೂಡ ಜೆಡಿಎಸ್ನಿಂದ ಗೆಲುವು ಸಾಧಿಸಿದ್ದರು. ಕೆ. ಗೋಪಾಲಯ್ಯ ಮಹಾಲಕ್ಷ್ಮಿ ಲೇಔಟ್ನಲ್ಲಿ ಜೆಡಿಎಸ್ಗೆ ಗೆಲುವು ತಂದುಕೊಟ್ಟಿದ್ದರು. ಜಮೀರ್, ಅಖಂಡ, ಗೋಪಾಲಯ್ಯ ಪಕ್ಷ ತೊರೆದ ಮೇಲೆ ಆ ಕ್ಷೇತ್ರಗಳು ಜೆಡಿಎಸ್ ಕೈಬಿಟ್ಟವು. ಕಳೆದ ಬಾರಿ ದಾಸರಹಳ್ಳಿಯಲ್ಲಿ ಒಕ್ಕಲಿಗರ ಮತಗಳನ್ನು ಒಟ್ಟುಗೂಡಿಸಿಕೊಂಡು ಕಾಂಗ್ರೆಸ್ ಒಳಜಗಳದ ಲಾಭ ಪಡೆದು ಬಿಜೆಪಿಯ ಎಸ್. ಮುನಿರಾಜು ಅವರನ್ನು ಸೋಲಿಸಿ ಜೆಡಿಎಸ್ನಿಂದ ಆರ್. ಮಂಜುನಾಥ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅದೂ ಕೈಬಿಟ್ಟಿದೆ.

ದಾಸರಹಳ್ಳಿ ಬಿಟ್ಟರೆ ಜೆಡಿಎಸ್ ಕಣ್ಣಿಟ್ಟಿದ್ದು ಯಶವಂತಪುರದಲ್ಲಿ. ಮತ್ತೆ ಒಕ್ಕಲಿಗ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳಲು ಮೂರು ಬಾರಿ ಸೋತಿದ್ದ ಜವರಾಯಿಗೌಡ ಅವರನ್ನೇ ಕಣಕ್ಕಿಳಿಸಿತು. ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಇಬ್ಬರೂ ಅಬ್ಬರದ ಪ್ರಚಾರ ಮಾಡಿದರು. ಆದರೆ, ‘ಭೂಮಾಫಿಯಾ’ದ ಕಳಂಕದಿಂದ ಜಯರಾಯಿಗೌಡ ಅವರಿಗೆ ಮತ್ತೆ ಗೆಲುವು ಸಾಧ್ಯವಾಗಲಿಲ್ಲ. ಇನ್ನು, ಬಸವನಗುಡಿಯಲ್ಲಿ ಇಬ್ಬರು ಬ್ರಾಹ್ಮಣರ ನಡುವೆ ಒಕ್ಕಲಿಗ ಮತಗಳನ್ನು ಸೆಳೆದುಕೊಂಡು ಜಯ ಕಾಣುವ ಕನಸೂ ನುಚ್ಚುನೂರಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಜೆಡಿಎಸ್ ಯಾವ ಜಯವನ್ನೂ ಕಾಣದೆ, ವಿಫಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.