ಬೆಂಗಳೂರು: ಕಳೆದ ಎರಡು ತಿಂಗಳ ವೇತನ ಬಿಡುಗಡೆಗೆ ಆಗ್ರಹಿಸಿದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಹೊರಗುತ್ತಿಗೆ ಸಿಬ್ಬಂದಿ, ಗುರುವಾರ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು.

ಸಿಬ್ಬಂದಿಗೆ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ವೇತನ ಪಾವತಿಯಾಗಿರಲಿಲ್ಲ. ಇದರಿಂದಾಗಿ ಬೆಳಿಗ್ಗೆ 8.30ರಿಂದಲೇ ಸಿಬ್ಬಂದಿ ಮುಷ್ಕರ ಆರಂಭಿಸಿದ್ದರು. ಹೊರ ರೋಗಿ ಹಾಗೂ ಒಳರೋಗಿ ವಿಭಾಗ, ಸ್ವಚ್ಛತೆ, ಪ್ರಯೋಗಾಲಯ, ಸಾರಿಗೆ ಸೇರಿ ವಿವಿಧ ವಿಭಾಗಗಳಲ್ಲಿನ ಸಿಬ್ಬಂದಿ ಗೈರುಹಾಜರಾಗಿದ್ದರಿಂದ ಕೆಲವು ಹೊತ್ತು ಸೇವೆಯಲ್ಲಿ ವ್ಯತ್ಯಯವಾಯಿತು. ರೋಗಿಗಳು ಹಾಗೂ ಅವರ ಸಂಗಡಿಗರು ಗೊಂದಲಕ್ಕೆ ಒಳಗಾಗಿದ್ದರು. ಈ ವೇಳೆ ಮುಷ್ಕರನಿರತ ಸಿಬ್ಬಂದಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿಗಳ ಜತೆಗೆ ವಾಗ್ವಾದವೂ ನಡೆಯಿತು.

ಮುಷ್ಕರದ ಸ್ವರೂಪ ತೀವ್ರತೆ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಆಡಳಿತ ಮಂಡಳಿ, ಮಧ್ಯಾಹ್ನದ ವೇಳೆಗೆ ಎರಡೂ ತಿಂಗಳ ವೇತನವನ್ನು ಬಿಡುಗಡೆ ಮಾಡಿತು.

ಸಂಸ್ಥೆಗೆ ಕಾಯಂ ನಿರ್ದೇಶಕರು ಇರದಿರುವುದು, ಕೆಲ ದಿನಗಳ ಹಿಂದೆ ಆರ್ಥಿಕ ಅಧಿಕಾರಿಯನ್ನು ಅಮಾನತುಗೊಳಿಸಿದ್ದರಿಂದ ವೇತನದ ಕಡತ ಬಾಕಿ ಉಳಿದಿತ್ತು. ಇದರಿಂದ ವೇತನ ವಿಳಂಬವಾಗಿತ್ತು ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.