ಕೆ.ಆರ್.ಪುರ: ಭೂಕಬಳಿಕೆ ಪ್ರಕರಣಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ
ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಟ್ಟ ಜಮೀನಿನ ಗಡಿ (ಹದ್ದು ಬಸ್ತು) ಗುರುತಿಸಲಾಗಿದೆ ಎಂದು ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವಸಂತ್ ಕುಮಾರ್ ತಿಳಿಸಿದರು.

ಕೆ.ಆರ್.ಪುರ ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಖಾಜಿಸೊಣ್ಣೆನ್ನಹಳ್ಳಿ ಗ್ರಾಮದ ಗ್ರಾಮಠಾಣಾದ ಸರ್ವೆ ನಂಬರ್ 174ರಲ್ಲಿ 3 ಎಕರೆ 24 ಗುಂಟೆ ಜಮೀನನ್ನು ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿದ್ದರೆಂದು ಗ್ರಾಮಸ್ಥರು ಭೂಕಬಳಿಕೆ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು.

ನ್ಯಾಯಾಲಯದ ಆದೇಶದ ಮೇರೆಗೆ ಭೂ ಮಾಪಕರ ಮೂಲಕ ಸರ್ವೆ ಮಾಡಿಸಿ ಗ್ರಾಮ ಠಾಣಾ ಜಮೀನಿನ ಗಡಿ ಗುರುತಿಸಲಾಗಿದೆ. ಮೂಲ ಖಾತೆದಾರರು ಯಾರು, ಯಾರು ಒತ್ತುವರಿ ಮಾಡಿಕೊಂಡಿದ್ದಾರೆಂದು ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ವಸಂತ ಕುಮಾರ್ ತಿಳಿಸಿದರು.

ಸಾರ್ವಜನಿಕರ ಹಿತಾಸಕ್ತಿಯಿಂದ ಈ ಜಮೀನನ್ನು ಅಂಬೇಡ್ಕರ್ ಭವನ, ಕನಕಭವನ, ಬಸವಭವನ ನಿರ್ಮಾಣ, ದೇವಸ್ಥಾನ, ಮಸೀದಿ ಹಾಗೂ ರೈತ ಸಂಘಕ್ಕೆ ಮೀಸಲಿಡಲಾಗಿತ್ತು. ಈ ಜಮೀನನ್ನು ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದರು. ಈ ಬಗ್ಗೆ ಕೆ.ಆರ್.ಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗ್ರಾಮಸ್ಥರಾದ ನಾರಾಯಣಸ್ವಾಮಿ, ನಾಗರಾಜ್, ಸುಬ್ರಮಣಿ, ದೇವರಾಜ್, ದಲಿತ ಮುಖಂಡರಾದ ಮುರುಗೇಶ್, ಕೃಷ್ಣಪ್ಪ, ಕಾವೇರಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.