ಬೆಂಗಳೂರು: ವ್ಯಕ್ತಿಯ ಎತ್ತರ, ತೂಕ ಅಳತೆ ಮಾಡಿ, ಅದಕ್ಕೆ ತಕ್ಕಂತೆ 'ಡಯಟ್' ಸಲಹೆ ನೀಡುವ ವಿಶಿಷ್ಟ ಮಳಿಗೆಯೊಂದು ಕೃಷಿ ಮೇಳದ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಕೃಷಿ ವಿಶ್ವವಿದ್ಯಾಲಯದ ಅಖಿಲ ಭಾರತ ಸುಸಂಘಟಿತ ಸಂಶೋಧನೆ ಯೋಜನೆ(ಕೃಷಿ ನಿರತ ಮಹಿಳೆಯರು) ಮಳಿಗೆ ಅದು.

ಆಹಾರ ತಜ್ಞೆ ಉಷಾ ರವೀಂದ್ರ ನೇತೃತ್ವದ ವಿಜ್ಞಾನಿಗಳ ತಂಡ, ಮಳಿಗೆಗೆ ಭೇಟಿ ನೀಡುತ್ತಿದ್ದ ಆಸಕ್ತರ ಎತ್ತರ, ತೂಕ ಅಳತೆ ಮಾಡಿ, ‘ಆಹಾರ ಪಥ್ಯ’ದ ಬಗ್ಗೆ ಸಲಹೆ ನೀಡುತ್ತಿದ್ದರು.

ತಪಾಸಣೆ ನಂತರ, ವ್ಯಕ್ತಿಯ ವಯಸ್ಸು ಮತ್ತು ದೇಹದಾರ್ಢ್ಯಕ್ಕೆ ತಕ್ಕಂತೆ ಯಾವ ತರಹದ ಆಹಾರವನ್ನು, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಹಾಗೂ ಜೀವನ ಶೈಲಿ ಹೇಗಿರಬೇಕೆಂಬ ಮಾಹಿತಿಯಿರುವ 'ಪೋಷಣಾ ಕಾರ್ಡ್'ಗಳನ್ನು ನೀಡುತ್ತಿದ್ದರು.

ಅತಿ ತೂಕವಿದ್ದವರಿಗೆ ಕೆಂಪು, ಕಿತ್ತಳೆ ಹಾಗೂ ಹಳದಿ ಬಣ್ಣದ ಕಾರ್ಡ್‌ಗಳು, ಕಡಿಮೆ ತೂಕವಿರುವವರಿಗೆ ಗಾಢ ಹಸಿರು ಬಣ್ಣದ ಕಾರ್ಡ್ ಹಾಗೂ ಸರಿಯಾದ ತೂಕವಿದ್ದರಿಗೆ ತಿಳಿ ಹಸಿರು ಬಣ್ಣದ ಕಾರ್ಡ್ ನೀಡುತ್ತಿದ್ದರು. ಕಾರ್ಡ್‌ನಲ್ಲಿ ವ್ಯಕ್ತಿಯ ಹೆಸರು, ವಯಸ್ಸು, ತೂಕ, ಎತ್ತರ, ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ನಮೂದಿಸುತ್ತಿದ್ದರು.

‘ಡಯಟ್ ಎಂದರೆ ಆಹಾರ ತ್ಯಜಿಸುವುದಲ್ಲ. ಬದಲಿಗೆ ಯಾರು, ಯಾವ ಆಹಾರವನ್ನು ಎಷ್ಟು ಸೇವಿಸಬೇಕೆಂಬುದನ್ನು ತಿಳಿಸಿ, ಆಹಾರ–ಆರೋಗ್ಯದ ಸಂಬಂಧ ಕುರಿತು ಜಾಗೃತಿ ಮೂಡಿಸುವುದು ಈ ಪೋಷಣಾ ಕಾರ್ಡ್‌ನ ಉದ್ದೇಶ’ ಎಂದು ವಿಜ್ಞಾನಿ ಉಷಾ ರವೀಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.