ಬೆಂಗಳೂರು: ಒಂದೇ ಸೂರಿನಡಿ ಆಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ, 21 ತಳಿಗಳ ಹಸು, ದನ, ಕುರಿ, ಮೇಕೆ ಹಾಗೂ ಕೋಳಿಗಳನ್ನು ನೋಡಲು ಶಾಲಾ–ಕಾಲೇಜಿನ ಮಕ್ಕಳು ಸೇರಿದಂತೆ ಸಾರ್ವಜನಿಕರು ಮುಗಿಬಿದ್ದಿದ್ದರು...

ಇದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ) ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಮೂರನೇ ದಿನ ಕಂಡು ಬಂದ ದೃಶ್ಯಗಳು.

ಬೆಳಿಗ್ಗಿನಿಂದಲೇ ತಂಡೋಪ ತಂಡವಾಗಿ ಬಂದ ಜನ ವೇದಿಕೆಗಿಂತ ಪ್ರದರ್ಶನ ತಾಕುಗಳು, ಮಳಿಗೆಗಳು, ಪ್ರಾಣಿಪ್ರಪಂಚದ ಮಳಿಗೆಗಳ ಹತ್ತಿರಕ್ಕೆ ಧಾವಿಸಿ, ವೈವಿಧ್ಯಮಯ ತಳಿಗಳ ಕೋಳಿ, ಕುರಿ, ಮೀನು ಪ್ರಪಂಚವನ್ನು ಕಣ್ತುಂಬಿಕೊಂಡರು. ಗೋಲ್ಡ್ ಫಿಶ್ ಸೇರಿದಂತೆ ವೈವಿಧ್ಯಮಯ ಆಲಂಕಾರಿಕ ಮೀನುಗಳನ್ನು ಚಿಣ್ಣರು ಹಾಗೂ ಮಹಿಳೆಯರು ಹೆಚ್ಚು ಖರೀದಿಸುತ್ತಿದ್ದರು.

‘ರೈತರ ಪಾಲಿಗೆ ಕುರಿಗಳು ನಡೆದಾಡುವ ಬ್ಯಾಂಕ್ಗಳು...’ ಎಂದೇ ಕರೆಯಲಾಗುತ್ತಿದ್ದು ಮೇಳದಲ್ಲಿ ಎಲ್ಲರ ಚಿತ್ತ ಇವುಗಳತ್ತ ಹರಿದಿದೆ.

ಗಮನ ಸೆಳೆದ ₹1.40 ಲಕ್ಷದ ಕುರಿ!

ಕತ್ತಿನಲ್ಲಿದ್ದ ‘ಗಂಟೆ’ಯನ್ನು ಅತ್ತಿತ್ತ ಅಲ್ಲಾಡಿಸುತ್ತಾ, ಹುಲ್ಲು ತಿಂದು ಬಾಯಿ ಚಪ್ಪರಿಸುತ್ತಿದ್ದ ನಾರಿಸ್ವರ್ಣ ತಳಿಯ ಕುರಿಗಳ ಚೆಂದವನ್ನು ಮಾತಿನಲ್ಲಿ ವರ್ಣಿಸುವುದು ಕಷ್ಟ. ಉದ್ದ ಶರೀರ, ಎತ್ತರದ ಕಾಲುಗಳು, ದೊಡ್ಡ ತಲೆಯ ಕೊಬ್ಬಿದ ದೇಹದ ಆ ಕುರಿಗಳ ಅಂದವನ್ನು ಕಣ್ತುಂಬಿಕೊಳ್ಳಲು ಜನರ ದಂಡೇ ಕೃಷಿಮೇಳದಲ್ಲಿ ನೆರೆದಿತ್ತು.

‘ಶ್ವೇತ ವರ್ಣದ ಈ ಕುರಿಗಳ ಆಕರ್ಷಣೆಗೆ ಮನಸೋತವರು, ಅದರ ಸಮೀಪಕ್ಕೆ ತೆರಳಿ ವಿಚಾರಿಸಿದವರು ಮಾತ್ರ ಹುಬ್ಬೇರಿಸದೇ ಇರಲಿಲ್ಲ. 100 ಕೆ.ಜಿ. ತೂಗುವ ಒಂದೊಂದು ಕುರಿಗಳ ಬೆಲೆ ಬರೋಬರಿ ₹1.40 ಲಕ್ಷ! ಇದರ ಒಂದು ಕೆ.ಜಿ ಮಾಂಸಕ್ಕೆ ₹2 ಸಾವಿರ ದರವಿದೆ. ಈ ಕುರಿ ಒಮ್ಮೆ ಮೂರು ಕುರಿ ಮರಿಗಳಿಗೆ ಜನ್ಮ ನೀಡುತ್ತದೆ’ ಎಂದು ಕೋಲಾರ ಜಿಲ್ಲೆಯ ಶಬ್ಬೀರ್ ಮಾಹಿತಿ ನೀಡಿದರು.

ಉದ್ದ ಕಿವಿಯ ಹೋತ ₹2 ಲಕ್ಷ!

‘20 ಇಂಚು ಉದ್ದ ಹಾಗೂ 9 ಇಂಚು ಅಗಲದ ಕಿವಿಯಿರುವ ಈ ಹೋತ(ಗಂಡು ಮೇಕೆ) ನೋಡುಗರನ್ನು ಸೆಳೆಯಿತು. ಇದರ ಬೆಲೆ ₹2 ಲಕ್ಷ! ಇದರ ಬೆಲೆಯನ್ನು ಕಿವಿಗಳ ಉದ್ದ ಮತ್ತು ಅಗಲದ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ. ಒಂದು ಹೋತ 60 ಕೆ.ಜಿಯಿಂದ 80 ಕೆ.ಜಿವರೆಗೆ ತೂಕವಿದ್ದರೆ, ಹೆಣ್ಣು ಮೇಕೆ 55 ಕೆ.ಜಿಯಿಂದ 75 ಕೆ.ಜಿವರೆಗೂ ತೂಗುತ್ತದೆ. ಮೂರು ತಿಂಗಳ ಮರಿಗೆ ₹30 ಸಾವಿರ ಬೆಲೆ ಇದೆ. ಇವುಗಳನ್ನು ಫ್ಯಾನ್ಸಿ ಶೋಗಳಲ್ಲಿ, ಶೋಕಿಗಾಗಿ ಸಾಕಾಣಿಕೆ ಮಾಡಲಾಗುತ್ತದೆ’ ಎಂದು ಬೆಂಗಳೂರು ಉದ್ದ ಕಿವಿ ಮೇಕೆ ತಳಿಗಾರರ ಸಂಘದ ಅಧ್ಯಕ್ಷ ಸಿದ್ದಿಕ್ ತಿಳಿಸಿದರು.

ಬೀ ವ್ಯಾಕ್ಸ್ ಕ್ರಿಮ್ ಆಕರ್ಷಣೆ

‘ಹೆಜ್ಜೇನಿನ ರಾಡೆಯನ್ನು ಸಂಸ್ಕರಿಸಿ ಅದರ ಮೇಣ ಹಾಗೂ ಕೊಬ್ಬರಿ ಎಣ್ಣೆ ಮಿಶ್ರಣದಿಂದ ಬೀ ವ್ಯಾಕ್ಸ್ ಕ್ರಿಮ್ ಅನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜೇನು ಕೃಷಿ ವಿಭಾಗದ ವಿಜ್ಞಾನಿಗಳು ತಯಾರಿಸಿದ್ದಾರೆ. ‘ಇದನ್ನು ಬಿರುಕುಬಿಟ್ಟ ತುಟಿಗಳಿಗೆ ಕಾಲಿನ ಹಿಂಬಡಿಗಳಿಗೆ ಹಚ್ಚಿಕೊಳ್ಳಬಹುದು’ ಎಂದು ಜೇನು ಕೃಷಿ ವಿಭಾಗದ ವಿಜ್ಞಾನಿ ಕೆ.ಟಿ. ವಿಜಯ್ಕುಮಾರ್ ತಿಳಿಸಿದರು. ಬಳ್ಳಿ ಬೀನ್ಸ್ ಕೆ.ಜಿ.ಗೆ ₹100 ಕೃಷಿ ಮೇಳ ಹಲವು ರೀತಿಯ ವೈವಿಧ್ಯಕ್ಕೆ ಸಾಕ್ಷಿಯಾಯಿತು. ತೋಟಗಾರಿಕಾ ಬೆಳೆ ವಿಭಾಗದಲ್ಲಿ ಬಳ್ಳಿ ಬೀನ್ಸ್ ಹಾಗೂ ಸೌತೆಕಾಯಿಯನ್ನು ಬಳ್ಳಿಯಿಂದ ಕಿತ್ತು ಮಾರಾಟ ಮಾಡಲಾಗುತ್ತಿತ್ತು. ಒಂದು ಕೆ.ಜಿ. ಬೀನ್ಸ್ಗೆ ₹100ರಂತೆ ಮಾರಾಟ ಮಾಡಿದರೆ ಒಂದು ಕೆ.ಜಿ ಸೌತೆಕಾಯಿಯನ್ನು ₹50 ರಂತೆ ಮಾರಾಟ ಮಾಡಲಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.