ಬೆಂಗಳೂರು: ಮೆಜೆಸ್ಟಿಕ್ನಲ್ಲಿರುವ ‘ನಮ್ಮ ಮೆಟ್ರೊ’ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ಬುಧವಾರ ‘ಸೇಫ್ಕ್ಲಾಕ್’ ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ ವ್ಯವಸ್ಥೆ ಆರಂಭಗೊಂಡಿದೆ.

ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದ ‘ಡಿ’ ನಿರ್ಗಮನದಲ್ಲಿ ಸ್ಥಾಪಿಸಲಾಗಿರುವ ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ಗೆ ಬಿಎಂಆರ್ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕಿ ಕಲ್ಪನಾ ಕೊಟಾರಿಯಾ ಚಾಲನೆ ನೀಡಿದರು.

‘ಲಗೇಜ್ಗಳನ್ನು ಹಿಡಿದುಕೊಂಡು ನಗರದಲ್ಲಿ ಸುತ್ತಾಡಲು ಕಷ್ಟ ಪಡುವ ಪ್ರಯಾಣಿಕರು ಡಿಜಿಟಲ್ ಲಾಕರ್ನಲ್ಲಿ ಇಟ್ಟು ಹೋಗಿ ತಮ್ಮ ಕೆಲಸ ಮುಗಿಸಿ ಬಂದು ಲಗೇಜ್ ಒಯ್ಯಲು ಈ ವ್ಯವಸ್ಥೆ ಉಪಯೋಗವಾಗಲಿದೆ’ ಎಂದು ಕಲ್ಪನಾ ಕೊಟಾರಿಯಾ ತಿಳಿಸಿದರು.

‘6 ಗಂಟೆಯ ಅವಧಿಗೆ 2 ರಿಂದ 3 ಬ್ಯಾಗ್ಗಳನ್ನು ಇಡಬಹುದಾದ ಮಧ್ಯಮ ಗಾತ್ರದ ಬಾಕ್ಸ್ಗೆ ₹ 70 ಹಾಗೂ 5 ಬ್ಯಾಗ್ಗಳವರೆಗೆ ಇರಿಸಬಹುದಾದ ದೊಡ್ಡ ಗಾತ್ರದ ಬಾಕ್ಸ್ಗೆ
₹ 100 ನಿಗದಿಪಡಿಸಲಾಗಿದೆ’ ಎಂದು ವಿವರಿಸಿದರು.

ಸೇಫ್ಕ್ಲಾಕ್ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ಮಾತನಾಡಿ, ‘ಡಿಜಿಟಲ್ ಲಾಕರ್ ಅಧಿಕ ಸುರಕ್ಷತೆಯನ್ನು ಹೊಂದಿದೆ. ಮೆಟ್ರೊ ನಿಲ್ದಾಣದ ಒಳಗೆ ಬರುವಾಗಲೇ ಬ್ಯಾಗ್ಗಳು ಸ್ಕ್ಯಾನ್ ಆಗುವುದರಿಂದ ಮತ್ತೆ ಸ್ಕ್ಯಾನ್ ಮಾಡುವುದಿಲ್ಲ. ಆದರೆ ಸಿಸಿಟಿವಿ ಕ್ಯಾಮೆರಾದ ಕಣ್ಗಾವಲು ಇರುತ್ತದೆ. ಯುನಿಟ್ ಬೇಕಿದ್ದರೆ ಫೋನ್ ನಂಬರ್ ದಾಖಲಿಸಿ ಡಿಜಿಟಲ್ ಪಾವತಿ ಮಾಡಬೇಕು. ಆನಂತರ ಬಾಕ್ಸ್ ಒಳಗೆ ಬ್ಯಾಗ್ಗಳನ್ನು ಇಟ್ಟು ಲಾಕ್ ಮಾಡಲಾಗುತ್ತದೆ. ಆನಂತರ ತೆರೆಯಬೇಕಿದ್ದರೆ ಅವರೇ ಬಂದು ಒಟಿಪಿ ಹಾಕಬೇಕಾಗುತ್ತದೆ. ಹಾಗಾಗಿ ಬೇರೆಯವರು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ವಿವರ ನೀಡಿದರು.

ಯುರೋಪ್, ಅಮೆರಿಕಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಡಿಜಿಟಲ್ ಲಾಕರ್ ಸೌಲಭ್ಯಗಳಿವೆ. ಈ ಸೌಲಭ್ಯವನ್ನು ಇಂಡಿಯನ್ ರೈಲ್ವೆ ಮೂಲಕ ಭಾರತದಲ್ಲಿ ಮೊದಲ ಬಾರಿ ಆರಂಭಿಸಲಾಯಿತು. ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಇದೀಗ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಆರಂಭಿಸಲಾಗಿದ್ದು, ಮುಂದೆ ಯಶವಂತಪುರ, ಕೆಂಗೇರಿ, ಎಂ.ಜಿ ರೋಡ್, ಕೆ.ಆರ್.ಪುರ ಸಹಿತ ವಿವಿಧ ಮೆಟ್ರೊ ನಿಲ್ದಾಣಗಳಿಗೆ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.