ಬೆಂಗಳೂರು: ಹಣ್ಣು, ಸಿಹಿ, ಒಬ್ಬಟ್ಟು, ಸಮೋಸ, ಮೊಟ್ಟೆ, ಬಿರಿಯಾನಿ ಸೇವಿಸುವ ಮೂಲಕ ಮೂಢನಂಬಿಕೆ ವಿರೋಧಿ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಸದಸ್ಯರು ಮಂಗಳವಾರ ಟೌನ್‌ಹಾಲ್ ಮುಂಭಾಗ ಚಂದ್ರಗ್ರಹಣ ವೀಕ್ಷಿಸಿದರು.

ಸೂರ್ಯಗ್ರಹಣ, ಚಂದ್ರಗ್ರಹಣಗಳೆಲ್ಲ ಆಕಾಶಕಾಯಗಳ ಸಹಜ, ನೈಸರ್ಗಿಕ ಪ್ರಕ್ರಿಯೆಗಳು. ಇಂತಹ ವೈಜ್ಞಾನಿಕ ಸನ್ನಿವೇಶಗಳನ್ನು ಮೂಢನಂಬಿಕೆಗಳ ಜತೆ ಬೆಸೆದು ಜನರನ್ನು ಹಾದಿ ತಪ್ಪಿಸಲಾಗುತ್ತಿದೆ. ಸಂಪ್ರದಾಯದ ಹೆಸರಿನಲ್ಲಿ ಮೌಢ್ಯ ಬಿತ್ತಲಾಗುತ್ತಿದೆ ಎಂದು ಒಕ್ಕೂಟದ ಮುಖಂಡರಾದ ಟಿ.ನರಸಿಂಹಮೂರ್ತಿ, ಗೋಪಾಲ್, ಆರ್.ಎಂ.ಎನ್. ರಮೇಶ್, ಬಿ.ಟಿ. ಲಲಿತಾ ನಾಯಕ್, ಮಲ್ಲು ಕುಂಬಾರ, ನಾಗೇಶ್, ವೆಂಕಟೇಶ್ ದೂರಿದರು.

ಜನರಿಗೂ ಆಹಾರ ಪದಾರ್ಥ, ತುಂಪುಪಾನೀಯ, ಕಾಫಿ ಹಂಚುವ ಮೂಲಕ ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವಂತೆ ಜನಜಾಗೃತಿ ಮೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.