ಬೆಂಗಳೂರು: ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಮಂಗಳವಾರ ಭಾರಿ ಸಮಸ್ಯೆ ಆಗಿದೆ. ಇದರಿಂದ ಈ ಮಾರ್ಗದ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಆಗಿದ್ದು ಪ್ರಯಾಣಿಕರು ತೀವ್ರ ಪರದಾಟ ನಡೆಸುತ್ತಿದ್ದಾರೆ.

ಏನಾಗಿದೆ?

ರಾಜಾಜಿನಗರ ಮೆಟ್ರೊ ನಿಲ್ದಾಣದಿಂದ ಸ್ವಲ್ಪ ಮುಂದೆ ಮಂಗಳವಾರ ನಸುಕಿನ ಜಾವ ಮೆಟ್ರೊ ರೈಲೊಂದರ ತಾಂತ್ರಿಕ ರಿಪೇರಿ ಕೆಲಸ ಮಾಡಲು ಹೋಗಿದ್ದ ರಿ ರೈಲು ಹಳಿ ತಪ್ಪಿದೆ. ಇದರಿಂದ ಈ ಮಾರ್ಗದ ರೈಲುಗಳು ಮಂಗಳವಾರ ಬೆಳಿಗ್ಗೆಯಿಂದ ನಿಗದಿಯಂತೆ ಸಂಚರಿಸಿಲ್ಲ. ಕೆಲ ಹೊತ್ತು ಪಕ್ಕದ ಹಳಿಯ ಒಂದು ಮಾರ್ಗದ ರೈಲಿಗೆ ಅವಕಾಶ ನೀಡಲಾಗಿತ್ತು. ಆ ನಂತರ ರಾಜಾಜಿನಗರ ನಿಲ್ದಾಣ, ಯಶವಂತಪಪುರ ನಿಲ್ದಾಣಗಳನ್ನು ಮುಚ್ಚಲಾಗಿತ್ತು.

ಏನಿದು ರಿ ರೈಲ್?

ಮೆಟ್ರೊ ರೈಲು ಮಾರ್ಗದಲ್ಲಿನ ತಾಂತ್ರಿಕ ದೋಷ ಪರಿಹರಿಸಲು ಬಳಸಲಾಗುವ ರಿರೈಲು ಹಳಿ ತಪ್ಪಿದ್ದರಿಂದ ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಮಂಗಳವಾರ ಭಾರಿ ಸಮಸ್ಯೆ ಆಗಿದೆ. ಇದರಿಂದ ಈ ಮಾರ್ಗದ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಆಗಿದ್ದು ಪ್ರಯಾಣಿಕರು ತೀವ್ರ ಪರದಾಟ ನಡೆಸುತ್ತಿದ್ದಾರೆ.

ಮಿನಿ ಟ್ರಕ್ ರೂಪದ ಈ ವಾಹನ ಸುಮಾರು 17 ಟನ್ ತೂಕ ಇರುತ್ತದೆ. ಇದರಲ್ಲಿ ಮೆಟ್ರೊ ರೈಲು ರಿಪೇರಿಯ ಆಧುನಿಕ ಸಲಕರಣೆಗಳು ಇರುತ್ತವೆ. ಸಾಮಾನ್ಯವಾಗಿ ದೈನಂದಿನ ಸಂಚಾರ ಇರದಿದ್ದಾಗ ರಾತ್ರಿ ಹೊತ್ತು ಮೆಟ್ರೊ ರೈಲನ್ನು ರಿಪೇರಿ ಮಾಡುತ್ತದೆ.

ಪ್ರಯಾಣಿಕರ ಪರದಾಟ?

ಹಸಿರು ಮಾರ್ಗದಲ್ಲಿ ಪ್ರಯಾಣಿಕರ ಪರದಾಟ ಮುಂದುವರೆದಿದ್ದು ಬಿಎಂಆರ್ಸಿಎಲ್ ಇಂಜಿನಿಯರ್ಗಳು ಬೆಸ್ಕಾಂ ಸಹಾಯದೊಂದಿಗೆ ಬೃಹತ್ ಕ್ರೇನ್ ತರಿಸಿ ರಿರೈಲ್ ಅನ್ನು ಕೆಳಗಿಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಕ್ರೇನ್ 200 ಟನ್ ಭಾರ ಎತ್ತುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ

ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಹಳಿತಪ್ಪಿದ ರೀ ರೈಲ್! ಸಂಚಾರ ಭಾರಿ ವ್ಯತ್ಯಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.