ಬೆಂಗಳೂರು: ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಪರವಾಗಿ ಕೆಪಿಎಸ್ಸಿ (ಉದ್ಯೋಗಸೌಧ) ಮುಂಭಾಗದಲ್ಲಿ ಮಂಗಳವಾರ ಬೆಳಿಗ್ಗೆ ಧರಣಿ ನಡೆಸಿದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಕುಮಾರ್, ‘ಕೆಪಿಎಸ್ಸಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ನಿರಂತರ ಅನ್ಯಾಯವಾಗುತ್ತಿದೆ. ಅವರಿಗೆ ನ್ಯಾಯಬೇಕಿದೆ. ಕೆಪಿಎಸ್ಸಿ ಮೇಲೆ ಒತ್ತಡ ಹೇರಲು ನಾನು ವಿವಿಧ ರೀತಿಯಲ್ಲಿ ಯತ್ನಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ’ ಎಂದರು.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ‘ಯುವ ಸಮೂಹದ ಪರವಾಗಿ ನ್ಯಾಯ ಕೇಳಿ ಉದ್ಯೋಗಸೌಧದ ಮುಂಭಾಗದಲ್ಲಿ ಕುಳಿತಿದ್ದ ನನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆಯೋಗದಿಂದ ಸಮರ್ಪಕವಾಗಿ ಉತ್ತರ ಕೊಡಲು ಯಾರೂ ಬರಲಿಲ್ಲ ಅಥವಾ ಬರುವ ಧೈರ್ಯ ತೋರಲಿಲ್ಲ. ಆಯೋಗಕ್ಕೆ ‘ಒಳ ಜಗಳ ನಿಲ್ಲಿಸಿ, ನ್ಯಾಯ ನೀಡಿ’ ಎಂದಷ್ಟೆ ನನ್ನ ಆಗ್ರಹ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.