ಬೆಂಗಳೂರು: ನಗರದಲ್ಲಿರುವ ಕೆರೆಗಳ ಒತ್ತುವರಿ ತೆರವಿಗೆ ಬಿಬಿಎಂಪಿ ಮತ್ತೊಂದು ಗಡುವು ನೀಡಿದೆ. ನವೆಂಬರ್ 25ರೊಳಗೆ ಒತ್ತುವರಿ ತೆರವು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಬಿಬಿಎಂಪಿ ವ್ಯಾಪ್ತಿಯ ಎಲ್ಲ ಕಾರ್ಯಪಾಲಕ ಎಂಜಿನಿಯರ್ಗಳಿಗೆ ಆಡಳಿತ ವಿಭಾಗದ ವಿಶೇಷ ಆಯುಕ್ತರು ನವೆಂಬರ್ 13ರಂದು ‘ತಿಳಿವಳಿಕೆ ಪತ್ರ’ ಜಾರಿ ಮಾಡಿದ್ದು, ಅವರ ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿಯನ್ನು ಪೂರ್ಣ ತೆರವುಗೊಳಿಸಬೇಕು. ನವೆಂಬರ್ 27ರೊಳಗೆ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಹೈಕೋರ್ಟ್ನಿಂದ ಸಾಕಷ್ಟು ಬಾರಿ ಆಕ್ಷೇಪಕ್ಕೆ ಒಳಗಾಗಿದ್ದ ರಾಜ್ಯ ಸರ್ಕಾರ, ಕೆರೆಗಳು ಮತ್ತು ಪ್ರಾಥಮಿಕ– ದ್ವಿತೀಯ ರಾಜಕಾಲುವೆ ಸಂರಕ್ಷಣೆ ಹಾಗೂ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳನ್ನು ನಿಯೋಜಿಸಿ, ಅವರ ಜವಾಬ್ದಾರಿಗಳನ್ನು ನಿಗದಿಪಡಿಸಿ 2023ರ ಆಗಸ್ಟ್ 28ರಂದು ಆದೇಶ
ಹೊರಡಿಸಿತ್ತು.

ಕೆರೆಗಳ ಒತ್ತುವರಿಯನ್ನು ಕಾಲಮಿತಿಯಲ್ಲಿ ತೆರವುಗೊಳಿಸುವುದಾಗಿ ಪ್ರಮಾಣ ಪತ್ರದ ಮೂಲಕ ಬಿಬಿಎಂಪಿ ಕ್ರಿಯಾಯೋಜನೆಯನ್ನೂ ಹೈಕೋರ್ಟ್ಗೆ ಸಲ್ಲಿಸಿತ್ತು. ಅದರಂತೆ, 2023ರ ಸೆಪ್ಟೆಂಬರ್ ಮೊದಲ ವಾರದಿಂದ 159 ಕೆರೆಗಳಲ್ಲಿನ ಒತ್ತುವರಿ ಯನ್ನು ತೆರವು ಮಾಡಲು 16 ವಾರಗಳ ಕ್ರಿಯಾಯೋಜನೆಯನ್ನು ಆರಂಭಿಸಿತ್ತು. ಪ್ರಥಮ ವಾರದ ಕೆರೆಗಳ ಒತ್ತುವರಿ ತೆರವು ಕಾರ್ಯ 70 ದಿನದಲ್ಲಿ ಪೂರ್ಣಗೊಳ್ಳಬೇಕಿತ್ತು.

ಡಿಸೆಂಬರ್ ಅಂತ್ಯಕ್ಕೆ 16 ವಾರಗಳ ಕ್ರಿಯಾಯೋಜನೆ ಪ್ರಕ್ರಿಯೆ ಮುಗಿದಿದ್ದು, ಆ ಅವಧಿಯಿಂದ ಲೆಕ್ಕಾಚಾರ ಮಾಡಿದ್ದರೂ 2024ರ ಮಾರ್ಚ್ ಮಧ್ಯಭಾಗದಲ್ಲಿ ಎಲ್ಲ ಕೆರೆಗಳ ಒತ್ತುವರಿ ತೆರವಾಗಬೇಕಿತ್ತು. ಆದರೆ, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒತ್ತುವರಿ ತೆರವು ಕಾರ್ಯಾಚರಣೆ ಇನ್ನೂ ಆರಂಭವಾಗೇ ಇಲ್ಲ.

‘ಹೈಕೋರ್ಟ್ ನಿರ್ದೇಶನದಂತೆ ಹಾಗೂ ಕೆರೆಗಳ ಒತ್ತುವರಿ ತೆರವಿನ ಕ್ರಿಯಾಯೋಜನೆಯಂತೆ ಕೆರೆಯ
ಅಳತೆ, ಸರ್ವೆ, ಒತ್ತುವರಿ ಗುರುತಿಸುವ ಕಾರ್ಯವಾಗಬೇಕಿತ್ತು. ಈವರೆಗೆ ಯಾವುದೇ ಕ್ರಮವಾಗಿಲ್ಲ ಎಂದು ಮುಖ್ಯ ಆಯುಕ್ತರು 2024ರ ಅಕ್ಟೋಬರ್ 25ರಂದು ನಡೆದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ನವೆಂಬರ್ 25ರೊಳಗೆ ಎಲ್ಲ ಕೆರೆಗಳ ಒತ್ತುವರಿ ಕಾರ್ಯವನ್ನು ಪೂರ್ಣಗೊಳಿಸಬೇಕು. ವಿಫಲವಾದ ಅಧಿಕಾರಿಗಳ ಮೇಲೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ (ನಡತೆ, ವರ್ಗೀಕರಣ ಮತ್ತು ಮೇಲ್ಮನವಿ) ಅನ್ವಯ ಮತ್ತು ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆಯನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಆಡಳಿತ ವಿಭಾಗದ ವಿಶೇಷ ಆಯುಕ್ತರು ಎಲ್ಲ ಕಾರ್ಯಪಾಲಕ ಎಂಜಿನಿಯರ್ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.