ಬೆಂಗಳೂರು: ನಗರದಲ್ಲಿರುವ ಉದ್ಯಾನಗಳು, ರಸ್ತೆ ವಿಭಜಕಗಳು ಹಾಗೂ ವೃತ್ತಗಳನ್ನು ಖಾಸಗಿ ವ್ಯಕ್ತಿಗಳು ಅಥವಾ ಸಂಘ–ಸಂಸ್ಥೆಗಳು ದತ್ತು ಪಡೆದುಕೊಳ್ಳಬಹುದು.

ಬಿಬಿಎಂಪಿ ವ್ಯಾಪ್ತಿಯಲ್ಲಿ 1,280 ಉದ್ಯಾನಗಳು, ವೃತ್ತ, ರಸ್ತೆ ವಿಭಜಕಗಳನ್ನು ಪಾಲಿಕೆ ವತಿಯಿಂದ ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಲಾಗುತ್ತಿದೆ. ಇವುಗಳನ್ನು ‘ನಮ್ಮ ಬೆಂಗಳೂರು ನನ್ನ ಕೊಡುಗೆ’ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಗೆ (ಸಿಎಸ್ಆರ್) ಯೋಜನೆಯಡಿಯಲ್ಲಿ ದತ್ತು ನೀಡಲು ಉದ್ದೇಶಿಸಲಾಗಿದೆ. ಇದರ ವಿವರಗಳನ್ನು https://www.bbmp.gov.in ಮೂಲಕ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ ಆರು ವಿವಿಧ ಸಂಸ್ಥೆಗಳಿಗೆ ಈಗಾಗಲೇ ಉದ್ಯಾನ ಮತ್ತು ರಸ್ತೆ ವಿಭಜಕಗಳನ್ನು ದತ್ತು ನೀಡಲಾಗಿದೆ. ಇದೀಗ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದ್ದು, ನವೆಂಬರ್ 15ರೊಳಗೆ ಮನವಿ ಸಲ್ಲಿಸಬಹುದು. ಮಾಹಿತಿಗೆ 9535015189 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.