ಬೆಂಗಳೂರು: ‘ಸಂಸ್ಕೃತ ಭಾಷೆಯಲ್ಲಿ ವ್ಯಾಸರು ಬರೆದಿದ್ದ ಮಹಾಭಾರತವು ದೇಸೀ ಭಾಷೆಗಳಲ್ಲಿ ಮೊದಲಿಗೆ ಅನುವಾದಗೊಂಡದ್ದು ಕನ್ನಡದಲ್ಲಿಯೇ. ಕನ್ನಡದ ಆದಿಕವಿ ಪಂಪ ಮೂಲ ಭಾರತವನ್ನು ಯಥಾ ನಕಲು ಮಾಡದೆ ಕನ್ನಡ ಜಾಯಮಾನಕ್ಕೆ ಒಗ್ಗುವಂತೆ ತಂದಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಭಾಷಾಂತರ ಪ್ರಕ್ರಿಯೆ: ಅಂದು-ಇಂದು’ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚೀನ ಕಾಲದಲ್ಲಿ ನಡೆಯುತ್ತಿದ್ದ ಭಾಷಾಂತರ ಪ್ರಕ್ರಿಯೆಗೂ ಆಧುನಿಕ ಕಾಲದಲ್ಲಿನ ಭಾಷಾಂತರಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ ಮತ್ತು ಬೆಳವಣಿಗೆಗಳಾಗಿವೆ. ಕರ್ನಾಟಕದ ಭೂಪ್ರದೇಶದ ಸೀಮೆಯ ವೈಶಿಷ್ಯ ಹಾಗೂ ಕನ್ನಡಿಗರ ಸ್ವೀಕಾರ ಗುಣದ ವೈಶಾಲ್ಯದ ಕಾರಣದಿಂದಾಗಿ ಪ್ರಾಚೀನಕಾಲದಿಂದ ಇಂದಿನವರೆಗೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮಗಳ ಮೂಲಕ ಹಲವು ರೀತಿಯ ಪ್ರಭಾವ ಸಾಧ್ಯವಾಯಿತು. ಹೊರಗಿನದನ್ನು ಸ್ವೀಕರಿಸುತ್ತಲೇ ತನ್ನತನವನ್ನು ಉಳಿಸಿಕೊಳ್ಳುತ್ತಾ ಕನ್ನಡ ಸಮೃದ್ಧವಾಯಿತು. ಜಗತ್ತಿನ ಬೇರೆ ಬೇರೆ ಭಾಷೆಗಳ, ಬೇರೆ ಬೇರೆ ದೇಶಗಳ ಜ್ಞಾನವು ಕನ್ನಡಕ್ಕೆ ಬಂದು ಜ್ಞಾನ ರಾಶಿಯೇ ದಕ್ಕುವಂತಾಯಿತು ಎಂದು ತಿಳಿಸಿದರು.

‘ಯಾವುದೇ ದೇಶ, ಭಾಷೆ ಮತ್ತು ಸಂಸ್ಕೃತಿಗಳ ದೇಸೀ ಜ್ಞಾನವು ಅಂತರರಾಷ್ಟ್ರೀಕರಣಗೊಳ್ಳುವಲ್ಲಿ ಅನುವಾದದ ಪಾತ್ರ ನಿರ್ಣಾಯಕವಾದುದು. ಕನ್ನಡದೊಳಗಿನ ದೇಸೀ ಜ್ಞಾನವನ್ನು ಅನುವಾದಗಳ ಮೂಲಕ ಅಂತಾರಾಷ್ಟ್ರೀಕರಣಗೊಳಿಸುವಲ್ಲಿ ವಿಫಲಗೊಂಡಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾಲೇಜಿನ ಮಾನವಿಕ ವಿಭಾಗದ ಡೀನ್ ಗೋಪಕುಮಾರ್ ಎ.ವಿ. ಆಶಯ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ಸರ್ವೇಶ್ ಬಂಟಹಳ್ಳಿ, ಸಂಯೋಜಕ ಸೈಯದ್ ಮುಯಿನ್, ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಎನ್.ಚಂದ್ರಶೇಖರ್, ರವಿಶಂಕರ್ ಎ.ಕೆ, ಎಂ.ಭೈರಪ್ಪ, ಪ್ರೇಮಕುಮಾರ್ ಕೆ., ಕಿರಣಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.