ಬೆಂಗಳೂರು:ಮಹಿಳೆಯರಿಗೆ ಅವರು ಉದ್ಯೋಗ ಮಾಡುವ ಸ್ಥಳದಲ್ಲಿ ಹೈಟೆಕ್ ವ್ಯವಸ್ಥೆಯನ್ನು ‘ಪ್ರಾಜೆಕ್ಟ್ ರಶ್ಮಿ’ ಒದಗಿಸುತ್ತಿದೆ. ಇಲ್ಲಿ ಶೌಚಾಲಯ, ಮಗುವಿಗೆ ಹಾಲುಣಿಸುವ ಕೊಠಡಿ, ವಿಶ್ರಾಂತಿ ಕೊಠಡಿ, ಟಿ.ವಿ ನೋಡಲು, ಕೇರಂ, ಚೆಸ್ ಮುಂತಾದ ಕ್ರೀಡೆಗಳನ್ನಾಡುವ ಕೊಠಡಿ ಇದೆ. ಜೊತೆಗೆ ಇಲ್ಲಿ ಪತ್ರಿಕೆ, ನಿಯತಕಾಲಿಕಾಲಿಕಗಳನ್ನು ಓದುವ ಅವಕಾಶವೂ ಇದೆ. ವಿಶಾಲವಾದ ಅಡಿಗೆಕೋಣೆಯೂ ಇದ್ದು, ಊಟ ಮಾಡುವುದಕ್ಕಾಗಿ ಕೊಠಡಿಯ ವ್ಯವಸ್ಥೆಯೂ ಇದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇದೆ.

ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ‘ಪ್ರಾಜೆಕ್ಟ್ ರಶ್ಮಿ’ ವ್ಯವಸ್ಥೆ ಇದೆ. ಮಹಿಳೆಯರು ಇಲ್ಲಿನ ವ್ಯವಸ್ಥೆ ಬಗ್ಗೆ ಅನುಭವ ಹಂಚಿಕೊಂಡರು...

‘ಮನೆಗಿಂತ ಹೆಚ್ಚು ಸಮಯ ಕಚೇರಿಯಲ್ಲಿಯೇ ಕಳೆಯುವುದರಿಂದ, ವಿಶೇಷವಾಗಿ ಮಹಿಳೆಯರಿಗೆ ಇಂಥದೊಂದು ಕೊಠಡಿಯ ಅವಶ್ಯಕತೆ ಇರುತ್ತದೆ. ಇಂಥದ್ದೊಂದು ವ್ಯವಸ್ಥೆ ನಮಗೆ ಖುಷಿ ತಂದಿದೆ’ ಎನ್ನುತ್ತಾರೆ ಅಪರಾಧ ವಿಭಾಗದ ಸಿಬ್ಬಂದಿ ತನುಜಾ.

‘ಋತುಚಕ್ರದ ಸಮಯದಲ್ಲಿ ಸಹಕಾರಿಯಾಗಲು ಪ್ಯಾಡ್ ವೆಂಡಿಂಗ್ ಮಷೀನ್ ವ್ಯವಸ್ಥೆಯೂ ಇದೆ. ಚಳಿಗಾಲ, ಮಳೆಗಾಲದಲ್ಲಿ ಆರೋಗ್ಯ ಹದಗೆಡುವುದು ಸಾಮಾನ್ಯ. ಆದ್ದರಿಂದ ಕುಡಿಯುಲು ಬಿಸಿ ನೀರಿನ ಸೌಲಭ್ಯ ಇದ್ದರೆ ಉತ್ತಮವಾಗುತ್ತಿತ್ತು’ ತಾಜ್ ಹೇಳಿದರು.

ಮತ್ತಷ್ಟು ಬೇಡಿಕೆ

‘ಉದ್ಯೋಗಸ್ಥ ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ಸೌಕರ್ಯ ಕಲ್ಪಿಸಿರುವ ‘ಪ್ರಾಜೆಕ್ಟ್ ರಶ್ಮಿ’ಯನ್ನು ಮೂರು ಕಡೆ ಅಂದರೆ, ಪೊಲೀಸ್ ಆಯುಕ್ತರ ಕಚೇರಿ, ಲೋಕೋಪಯೋಗಿ ಇಲಾಖೆ ಕಟ್ಟಡ ಹಾಗೂ ಹೈಕೋರ್ಟ್ ಆವರಣದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಹಲವು ಕಡೆ ಇಂತಹ ವ್ಯವಸ್ಥೆ ಬೇಕೆಂದು ಬೇಡಿಕೆ ಬಂದಿದೆ’ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಎನ್. ಸುಶೀಲಮ್ಮ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.