ಬೆಂಗಳೂರು: ನಗರದಲ್ಲಿ ಹಲವು ಪ್ರದೇಶಗಳಲ್ಲಿ ಬುಧವಾರ ಸಂಜೆ ಉತ್ತಮವಾಗಿ ಮಳೆಯಾಗಿದೆ.

ಕೆಲವು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುತ್ತಿತ್ತು. ಬುಧವಾರ ಉಷ್ಣಾಂಶದಲ್ಲಿ ಸಾಕಷ್ಟು ಏರಿಕೆಯಾಗಿತ್ತು. ಸಂಜೆ ವೇಳೆಗೆ ಬಿರುಗಾಳಿಯೊಂದಿಗೆ ಹಲವೆಡೆ ಉತ್ತಮವಾಗಿ ಮಳೆ ಸುರಿಯಿತು.

ಹೆಬ್ಬಾಳ ಜಂಕ್ಷನ್‌ನಲ್ಲಿ ಮಳೆ ನೀರು ನಿಂತು ಸುತ್ತಮುತ್ತಲಿನ ಎಲ್ಲ ರಸ್ತೆಗಳಲ್ಲೂ ವಾಹನ ಸಂಚಾರಕ್ಕೆ ಹೆಚ್ಚು ತೊಂದರೆಯಾಯಿತು. ವಿಂಡ್ಸರ್ ಮ್ಯಾನರ್ ಅಂಡರ್ ಪಾಸ್, ಪ್ಯಾಲೇಸ್ ಗುಟ್ಟಹಳ್ಳಿ, ರಾಜೀವ್‌ಗಾಂಧಿ ವೃತ್ತ, ಕಸ್ತೂರಿನಗರದಿಂದ ರಾಮಮೂರ್ತಿನಗರ, ಸಂಜಯನಗರ ಕ್ರಾಸ್‌ನಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತಿದ್ದರಿಂದ ಸಂಚಾರ ನಿಧಾನಗತಿಯಲ್ಲಿತ್ತು.

ಬಳ್ಳಾರಿ ರಸ್ತೆ ಕಾವೇರಿ ಚಿತ್ರಮಂದಿರ ಬಳಿ ಮರ ಬಿದ್ದು, ಸಂಚಾರಕ್ಕೆ ತೊಂದರೆಯಾಯಿತು. ಪೂರ್ವ ವಲಯದ ವಿಶ್ವನಾಥ ನಾಗೇನಹಳ್ಳಿಯಲ್ಲಿ ಅತಿಹೆಚ್ಚು ಮಳೆಯಾಯಿತು.

ಹೇರೋಹಳ್ಳಿ, ಚೌಡೇಶ್ವರಿ ವಾರ್ಡ್, ಯಲಹಂಕ, ಮಾರುತಿ ಮಂದಿರ, ಹಂಪಿನಗರ, ಬಾಗಲಗುಂಟೆ, ಕೆಂಗೇರಿ, ನಾಯಂಡಹಳ್ಳಿ, ಆರ್.ಆರ್. ನಗರ, ಯಶವಂತಪುರ, ಹೆಬ್ಬಾಳ, ವನ್ನಾರ್‌ಪೇಟೆ, ಬಿಟಿಎಂ ಲೇಔಟ್, ಮಾರತ್‌ಹಳ್ಳಿ, ಮಹದೇವಪುರ, ವಿಜ್ಞಾನನಗರ, ಹೂಡಿ, ಪುಲಕೇಶಿನಗರ, ಸಂಪಂಗಿರಾಮನಗರ, ಕಾಟನ್‌ಪೇಟೆ, ರಾಜಮಹಲ್ ಗುಟ್ಟಹಳ್ಳಿ ಸೇರಿದಂತೆ ವಿವಿಧೆಡೆ ಉತ್ತಮ ಮಳೆ ಸುರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.