ಬೆಂಗಳೂರು: ಐಟಿಸಿ ಸಂಸ್ಥೆಯ ‘ಯಿಪೀ! ಬೆಟರ್ ವರ್ಲ್ಡ್’ನ ನೆರವಿನಿಂದ ನಗರದಾದ್ಯಂತ ಸರ್ಕಾರಿ– ಖಾಸಗಿ ಶಾಲೆಗಳ ಸುಮಾರು 2.50 ಲಕ್ಷ ಶಾಲಾ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಜಾಗೃತಿ ಮೂಡಿಸಲು ಸರ್ಕಾರೇತರ ಸಂಸ್ಥೆಗಳಾದ ‘ವೇ ಫಾರ್ ಲೈಫ್’ ಮತ್ತು ‘ಉಪಕೃತಿ’ ಮುಂದಾಗಿದೆ.

ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಯುವ ಸಬಲೀಕರಣ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಸಹಕಾರದಲ್ಲಿ ಈ ಸಂಸ್ಥೆಗಳು ಶಾಲೆಗಳಿಗೆ ಮರುಬಳಕೆಯ ಪ್ಲಾಸ್ಟಿಕ್ನಿಂದ ತಯಾರಿಸಿದ ಬೆಂಚ್- ಡೆಸ್ಕ್ಗಳನ್ನು ಒದಗಿಸುತ್ತಿವೆ.

‘ಶಾಲೆಗಳಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ, ಅದನ್ನು ಮರುಸಂಸ್ಕರಿಸಿ, ಬೆಂಚು, ಡೆಸ್ಕ್ಗಳನ್ನು ಪೂರೈಸಲಾಗಿದೆ. ಈ ಕಾರ್ಯಕ್ರಮದಿಂದ 1.75 ಲಕ್ಷ ಸರ್ಕಾರಿ ಮತ್ತು 75 ಸಾವಿರ ಖಾಸಗಿ ಶಾಲಾ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ಜೊತೆಗೆ, ಪ್ಲಾಸ್ಟಿಕ್ ತ್ಯಾಜ್ಯದ ಕುರಿತು ಅರಿವು ಮೂಡಿಸಲು ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಮೀಕ್ಷೆ ನಡೆಸಲಾಗಿದೆ’ ಎಂದು ‘ವೇ ಫಾರ್ ಲೈಫ್’ನ ಉದಯ್ ಕುಮಾರ್ ತಿಳಿಸಿದರು.

‘ಬೆಂಚ್–ಡೆಸ್ಕ್ ಒದಗಿಸಲು 19 ಸಾವಿರ ಕಿಲೋ ಪ್ಲಾಸ್ಟಿಕ್ ತ್ಯಾಜ್ಯದಿಂದ 1,021 ಮರು ಬಳಕೆಯ ಬೆಂಚುಗಳು ಮತ್ತು ಡೆಸ್ಕ್ಗಳನ್ನು ತಯಾರಿಸಲಾಗಿದೆ. 400ಕ್ಕೂ ಹೆಚ್ಚು ಬೆಂಚುಗಳು ಮತ್ತು ಡೆಸ್ಕ್ಗಳನ್ನು ಈಗಾಗಲೇ ಒದಗಿಸಲಾಗಿದೆ. ಅಲ್ಲದೆ, ಈ ಕಾರ್ಯಕ್ರಮವು ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್ಡಿಜಿ) ಪೈಕಿ, ಗುಣಮಟ್ಟದ ಶಿಕ್ಷಣ ಮತ್ತು ಹವಾಮಾನ ಕ್ರಿಯೆ ಅರಿವು ಸಾಧಿಸಲು ಸಹಕಾರಿಯಾಗಿದೆ’ ಎಂದೂ ಹೇಳಿದರು.

ಪೀಣ್ಯದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಪ್ಲಾಸ್ಟಿಕ್ನಿಂದ ತಯಾರಿಸಿದ ಬೆಂಚ್-ಡೆಸ್ಕ್ಗಳ ವಿತರಣೆ ವೇಳೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಐಟಿಸಿಯ ಭಾವನಾ ಶರ್ಮಾ, ‘ಉಪಕೃತಿ’ಯ ಚಂದನ್ ಮತ್ತು ಉದಯ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.