ಬೆಂಗಳೂರು: ಗಿರೀಶ್ ಕಾರ್ನಾಡರ ‘ತುಘಲಕ್’ ನಾಟಕ ಧರ್ಮ ಮತ್ತು ರಾಜಕಾರಣ ಬೆರೆಯುತ್ತಿರುವ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಪುನರ್ ವಿಮರ್ಶೆಗೆ ಒಳಪಡಿಸಲು ಅಗತ್ಯವಾದ ಮಹತ್ವದ ಕೃತಿ ಎಂದು ವಿಮರ್ಶಕ ಡಾ.ಎಚ್.ದುಂಡಪ್ಪ ಬಣ್ಣಿಸಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಅನ್ನದಾನೇಶ ಅವರು ಸಂಪಾದಿಸಿದ ಗಿರೀಶ್ ಕಾರ್ನಾಡರ 'ತುಘಲಕ್’ ಹಾಗೂ ಕುವೆಂಪು ಅವರ 'ಶೂದ್ರ ತಪಸ್ವಿ’ ನಾಟಕದ ವಿಮರ್ಶೆಗಳ ಪುಸ್ತಕ ಬಿಡುಗಡೆ ಹಾಗೂ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜಕೀಯದಿಂದ ಧರ್ಮವನ್ನು ಬೇರ್ಪಡಿಸಲು ಶ್ರಮಿಸಿದ್ದ ದೊರೆ ತುಘಲಕ್. ಜನರ ಬಡತನ, ಹಸಿವು, ಬರಗಾಲ ಹೋಗಲಾಡಿಸಲು ಪಣ ತೊಟ್ಟಿದ್ದನು. ಅದಕ್ಕಾಗಿ ಏಳು ವರ್ಷಗಳವರೆಗೆ ಪ್ರಾರ್ಥನೆಯನ್ನೇ ನಿಲ್ಲಿಸಿದ್ದನು. ಅಂತಹ ನಡೆ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು. ಆಳುವ ದೊರೆ ಜನರ ಬಳಿಗೆ ತೆರಳಿ ಕೆಲಸ ಮಾಡಬೇಕು ಎಂಬ ಸಂದೇಶ ಸಾರಿದ. ಇಂದು ಜನರು ಜನಪ್ರತಿನಿಧಿಗಳನ್ನು ಹುಡುಕುವ ಸ್ಥಿತಿ ಇದೆ. ಅವನ ನೀತಿಗಳು ವಿಫಲವಾಗಿರಬಹುದು. ಆದರೆ, ಜನಪರ ನಿಲುವುಗಳು ಪ್ರಶ್ನಾತೀತ ಎಂದು ವಿಶ್ಲೇಷಿಸಿದರು.

ಕುವೆಂಪು ಅವರು ಶೂದ್ರ ತಪಸ್ವಿ ವಿಮರ್ಶೆ ಕುರಿತು ಮಾತನಾಡಿದವಿಮರ್ಶಕ ಎಚ್.ಎಸ್. ಸತ್ಯನಾರಾಯಣ, ‘ಕುವೆಂಪು ಶೂದ್ರರ ಶಿಕ್ಷಣದ ಪ್ರಾಮುಖ್ಯ ಸಾರಿದ್ದಾರೆ. ಅನ್ನದಾನೇಶ ಸಂಪಾದಿಸಿದ ಕೃತಿ ಮೂರು ತಲೆಮಾರುಗಳ ವಿಮರ್ಶಕರ ವಿಚಾರಧಾರೆ ಒಳಗೊಂಡಿದೆ’ ಎಂದರು.

ವಿಮರ್ಶಕ ಎಸ್.ಆರ್.ವಿಜಯಶಂಕರ್, ಪ್ರಾಂಶುಪಾಲರಾದ ನಾಗಲಕ್ಷ್ಮಿ, ಕಾಲೇಜಿನ ಅಧಿಕಾರಿಗಳಾದ ಸರಿತಾ ಬಾಯಿ, ಜ್ಞಾನೇಶ್ವರ್, ಶರ್ಮಿಷ್ಟ ದತ್ತ, ಮಂಜುನಾಥ್ ಕೃತಿ ಸಂಪಾದಕ ಅನ್ನದಾನೇಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.