ಪೀಣ್ಯ ದಾಸರಹಳ್ಳಿ: ರಸ್ತೆಯಲ್ಲಿ ಮಂಡಿಯುದ್ದದ ಗುಂಡಿಗಳು, ರಸ್ತೆ ಮೇಲೆ ಹರಿಯುವ ಚರಂಡಿ ನೀರು, ಕಲ್ಲು ಪೊಟರೆಗಳಿಂದ ಕೂಡಿದ ರಸ್ತೆಯಲ್ಲಿ, ಎಲ್ಲಿ ಪಲ್ಟಿ ಹೊಡೆಯುತ್ತದೆಯೋ ಎಂದು ಆತಂಕದಿಂದ ವಾಹನ ಚಲಾಯಿಸುವ ಸವಾರರು...

ಇದು ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ‘ಪೀಣ್ಯ ಕೈಗಾರಿಕಾ ಪ್ರದೇಶ’ದ ನಡಿಕೇರಪ್ಪ ಬಡಾವಣೆ, ಭೈರವೇಶ್ವರ ನಗರದ ರಸ್ತೆಗಳ ಸದ್ಯದ ಸ್ಥಿತಿ ಇದು.

ಈ ಎರಡೂ ಪ್ರದೇಶಗಳಲ್ಲೂ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಇಲ್ಲಿ ವಾಹನಗಳಷ್ಟೇ ಅಲ್ಲ, ಮನುಷ್ಯರೂ ಓಡಾಡದಂತಹ ಪರಿಸ್ಥಿತಿ ಇದೆ. ದ್ವಿಚಕ್ರ ವಾಹನ ಸವಾರರು ಸಾಕಷ್ಟು ಬಾರಿ ಈ ರಸ್ತೆಯಲ್ಲಿ ಅಪಘಾತಕ್ಕೀಡಾಗಿ, ಗಾಯಗೊಂಡಿದ್ದಾರೆ. ಮಳೆ ಬಂದಾಗ ಸಂಚಾರ ಇನ್ನೂ ದುಸ್ತರವಾಗಿರುತ್ತದೆ. ಇದು ಇಂದು ನಿನ್ನೆಯ ಕಥೆಯಲ್ಲ. 30 ವರ್ಷಗಳಿಂದ ಹೀಗೇ ಇದೆ’ ಎಂದು ಉದ್ಯಮಿಗಳು ದೂರುತ್ತಾರೆ.

ಈ ಕೈಗಾರಿಕಾ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳಿವೆ. ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಪ್ರತಿನಿತ್ಯ ಕಾರ್ಖಾನೆಗಳಿಗೆ ಬರಲು ಕಾರ್ಮಿಕರು ಹರಸಾಸಪಡುತ್ತಾರೆ. ಇಲ್ಲಿರುವ ಎಷ್ಟೋ ಕೈಗಾರಿಕೆಗಳಿಗೆ ವಾಹನಗಳು ಬರುವುದಕ್ಕೆ ಹಿಂದೇಟು ಹಾಕುತ್ತವೆ. ಇದರಿಂದ ಉದ್ಯಮ ನಡೆಸುವುದೇ ಕಷ್ಟವಾಗಿದೆ ಎಂದು ಕೈಗಾರಿಕೆಗಳ ಮಾಲೀಕರು ಬೇಸರ ವ್ಯಕ್ತಪಡಿಸುತ್ತಾರೆ.

ರಸ್ತೆ ಅಭಿವೃದ್ದಿಗಾಗಿ ನಗರೋತ್ಥಾನ ಯೋಜನೆಯಡಿ ಅನುದಾನ ಕೋರಿ ಮನವಿ ಸಲ್ಲಿಸಲಾಗಿದೆ. ಆದೇಶ ಬಂದ ಕೂಡಲೇ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಪ್ರವೀಣ್, ಸಹಾಯಕ ಎಂಜಿನಿಯರ್ ಬಿಬಿಎಂಪಿ ಹೆಗ್ಗನಹಳ್ಳಿ ವಾರ್ಡ್

’ಸಾಗಾಟ ಕಷ್ಟ’

‘ರಸ್ತೆಗಳು ಹದೆಗೆಟ್ಟಿರುವುದರಿಂದ ವಸ್ತುಗಳನ್ನು ಸುರಕ್ಷಿತವಾಗಿ ಸಾಗಿಸುವುದೇ ಕಷ್ಟವಾಗಿದೆ. ಎಷ್ಟೋ ಸಾರಿ ನಾವು ಕಳಿಸಿದ ವಸ್ತುಗಳು ಹಾಳಾಗಿ ಆಗಿ ತಿರಸ್ಕೃತಗೊಳ್ಳುತ್ತವೆ. ಇದರಿಂದ ಮಾಲೀಕರಿಗೆ ತೀವ್ರ ನಷ್ಟವಾಗುತ್ತಿದೆ’ ಎಂದು ಉದ್ಯಮಿ ಆರ್.ಕೆ.ಕುಮಾರ್ ಆತಂಕ ವ್ಯಕ್ತಪಡಿಸುತ್ತಾರೆ. ’ಸೌಕರ್ಯ ಕಲ್ಪಿಸಿ’ ‘ಲಕ್ಷಾಂತರ ಕಾರ್ಮಿಕರ ಕುಟುಂಬಗಳಿಗೆ ಆಸರೆಯಾಗಿರುವ ಕೈಗಾರಿಕಾ ಪ್ರದೇಶದ ರಸ್ತೆಗಳ ಅಭಿವೃದ್ಧಿ ಬಗ್ಗೆ ಸರ್ಕಾರ ನಿರ್ಲಕ್ಷ್ಯವಹಿಸಿದೆ. ಮೂಲ ಸೌಕರ್ಯ ಒದಗಿಸಿದರೆ ನಾವು ಕೈಗಾರಿಕೆಗಳನ್ನು ಮುಂದುವರಿಸಬಹುದು' ಎಂದು ಉದ್ಯಮಿ ವಿನೋದ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.