ಬೆಂಗಳೂರು: ಶಂಕರ ಐ ಫೌಂಡೇಶನ್ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ನೆರವಿನಿಂದ ರೋಗಿಗಳಿಗೆ ಧ್ವನಿ ಆಧಾರಿತ ಪ್ರತಿಕ್ರಿಯೆ ವ್ಯವಸ್ಥೆಯನ್ನು ಪ್ರಾರಂಭಿಸಿದೆ.

ಫೌಂಡೇಶನ್ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಈ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

ಶಂಕರ ಕಣ್ಣಿನ ಆಸ್ಪತ್ರೆಯ ಕಾರ್ಯಾಚರಣೆ ಮತ್ತು ಆಡಳಿತ ವಿಭಾಗದ ಅಧ್ಯಕ್ಷ ಭರತ್ ಬಾಲಸುಬ್ರಮಣ್ಯಂ, ‘ಎಐ ಆಧಾರಿತ ‘ಸಹಾಯ್’ ಹೆಸರಿನ ವ್ಯವಸ್ಥೆಯು ಭಾರತೀಯ 20 ಭಾಷೆಗಳಲ್ಲಿ ಕಾರ್ಯ
ನಿರ್ವಹಿಸಲಿದೆ. ಇದು ಭಾಷಾ ಮಾದರಿಗಳನ್ನು ಒಳಗೊಂಡಿದ್ದು, ರೋಗಿಯ ಆದ್ಯತೆಯ ಭಾಷೆಯಲ್ಲಿ ಪ್ರತಿಕ್ರಿಯಿಸಲಿದೆ. ಇದರಿಂದ ಗುಣಮಟ್ಟದ ವೈದ್ಯಕೀಯ ಸೇವೆ ಸಾಕಾರವಾಗಲಿದೆ’ ಎಂದು ಹೇಳಿದರು.

‘ಈಗಾಗಲೇ ಹೊರ ರೋಗಿ ಮತ್ತು ಒಳ ರೋಗಿ ಸೇವೆಗಳಿಂದ 17,350 ಧ್ವನಿ ಮಾದರಿಗಳನ್ನು ಸೆರೆಹಿಡಿಯಲಾಗಿದೆ. ಗುಂಟೂರು ಘಟಕದಿಂದ ಗರಿಷ್ಠ 3,816 ಧ್ವನಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. ನೈಜ ಸಮಯದಲ್ಲಿ ಪ್ರತಿಕ್ರಿಯೆ ಪಡೆಯುವ ಮೂಲಕ ಸೇವೆಯ ಗುಣಮಟ್ಟ ಹೆಚ್ಚಿಸಲು ಈ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.