ಬೆಂಗಳೂರು: ರೈತರನ್ನು ಕೀಟನಾಶಕಗಳಿಂದ ರಕ್ಷಿಸುವ ಬಟ್ಟೆಯನ್ನು ಬೆಂಗಳೂರಿನ ಇನ್‌ಸ್ಟೆಮ್ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

‘ಕಿಸಾನ್ ಕವಚ್’ ಎನ್ನುವ ಈ ಬಟ್ಟೆಯು ಕೀಟನಾಶಕಗಳಿಂದ ರಕ್ಷಣೆ ಒದಗಿಸುತ್ತದೆ. ಈ ರಕ್ಷಕ ಬಟ್ಟೆಯನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದ್ದು,ಮಾರಕ ಕೀಟನಾಶಕಗಳಿಂದಲೂ ರಕ್ಷಣೆ ಒದಗಿಸಲು ಯಶಸ್ವಿಯಾಗಿದೆ. ಈ ಬಟ್ಟೆಗೆ ಬಳಸಿದ ತಂತ್ರಜ್ಞಾನವನ್ನು ಸೆಪಿಯೊ ಹೆಲ್ತ್ ಎನ್ನುವ ನವೋದ್ಯಮಕ್ಕೆ
ವರ್ಗಾಯಿಸಲಾಗಿದೆ.

‘ರೈತರು ವ್ಯಾಪಕವಾಗಿ ಬಳಸುವ ಆರ್ಗ್ಯಾನೋಫಾಸ್ಫರಸ್ ಕೀಟನಾಶಕವನ್ನು ಚರ್ಮ ಹೀರಿಕೊಳ್ಳುವುದರಿಂದ ಇದನ್ನು ಬಳಸುವವರಿಗೆ ಅಪಾಯ ತಪ್ಪಿದ್ದಲ್ಲ. ಭಾರತದಂತಹ ದೇಶಗಳಲ್ಲಿ ಈ ಕೀಟನಾಶಕಗಳಿಂದ ರಕ್ಷಿಸುವಂತಹ ವಿಶೇಷ ದಿರಿಸುಗಳನ್ನು ಧರಿಸುವುದೂ ಕಷ್ಟ. ಕಿಸಾನ್ ಕವಚ್ ಇದಕ್ಕೆ ಪರಿಹಾರ ಒದಗಿಸಲಿದೆ’ ಎಂದು ಇನ್‌ಸ್ಟೆಮ್ ಸಂಸ್ಥೆಯ ಜೈವಿಕ ತಂತ್ರಜ್ಞ ಪ್ರವೀಣ್ ವೆಮುಲಾ ಅವರು ತಿಳಿಸಿದ್ದಾರೆ.

‘ಹತ್ತಿಯ ಬಟ್ಟೆಗಳನ್ನೇ ಬಳಸಿಕೊಂಡು ರಕ್ಷಣಾ ಕವಚವಾಗಿ ಪರಿವರ್ತಿಸಲಾಗಿದೆ. ಹತ್ತಿಯ ಎಳೆಗಳಿಗೆ ನ್ಯಾನೊ ಕಣಗಳ ರೂಪದಲ್ಲಿ ಹಚ್ಚಿರುವ ರಾಸಾಯನಿಕಗಳು ವಿಶೇಷವಾಗಿ ಕೀಟನಾಶಕಗಳ ಹೃದಯಭಾಗವನ್ನು ಆಕರ್ಷಿಸಿ ಅಂಟಿಕೊಳ್ಳುತ್ತವೆ. ತದನಂತರ ಅವನ್ನು ವಿಘಟಿಸಿ, ಒಡೆಯುತ್ತವೆ. ದೇಶದಲ್ಲಿ ಬಳಸುವ ವಿವಿಧ ಕೀಟನಾಶಕಗಳನ್ನು ಈ ಬಟ್ಟೆ ಸಮರ್ಥವಾಗಿ ನಿಷ್ಕ್ರಿಯಗೊಳಿಸಲಿದೆ.
ಒಂದು ವರ್ಷದವರೆಗೂ ಇದು ಈ ಸಾಮರ್ಥ್ಯವನ್ನು ಹೊಂದಿರಲಿದೆ’ ಎಂದು ಸೆಪಿಯೋ ಹೆಲ್ತ್‌ನ ನಿರ್ದೇಶಕ ಓಂಪ್ರಕಾಶ್ ಸುಣ್ಣಾಪು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.