ಬೆಂಗಳೂರು: ಆಫ್ರಿಕಾದ 25 ವರ್ಷದ ಮಹಿಳೆಯೊಬ್ಬರಿಗೆ ಇಲ್ಲಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಏಕಕಾಲದಲ್ಲಿ ಎರಡು ಹೃದಯ ಕವಾಟಗಳ ಬದಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.

ರೋಗಿಯು 15 ವರ್ಷಗಳಿಂದ ಎರಡು ಹೃದಯ ಕವಾಟಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ನಿರ್ಲಕ್ಷಿಸಿದ್ದ ಕಾರಣ ಮಹಾಪಧಮನಿ ಸೋರಿಕೆ ಉಂಟಾಗಿ, ಜೀವಕ್ಕೆ ಅಪಾಯ ತಂದೊಡ್ಡುವ ಸ್ಥಿತಿ ನಿರ್ಮಾಣವಾಗಿತ್ತು. ಕಾಲಿನ ಸೋಂಕು, ಹಲವು ಬಾರಿ ಗರ್ಭಪಾತ ಸೇರಿ ವಿವಿಧ ಸಮಸ್ಯೆಗಳಿಗೂ ಒಳಗಾಗಿದ್ದರು. ಆಫ್ರಿಕಾ ಸುತ್ತಮುತ್ತಲಿನ ದೇಶಗಳಲ್ಲಿ ಈ ಸಮಸ್ಯೆಗೆ ಸೂಕ್ತ ಚಿಕಿತ್ಸೆ ದೊರೆಯದಿದ್ದರಿಂದ ಇಲ್ಲಿಗೆ ಬಂದು ದಾಖಲಾಗಿದ್ದರು. ಡಾ. ವಿವೇಕ್ ಜವಳಿ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ ಎಂದು ಆಸ್ಪತ್ರೆ ತಿಳಿಸಿದೆ.

‘ಮಹಿಳೆಯ ಹೃದಯವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದ ಬಳಿಕ ಹೃದಯದ ಎರಡು ಕವಾಟಗಳಲ್ಲಿ ಬ್ಲಾಕೇಜ್ ಆಗಿರುವುದು ದೃಢಪಟ್ಟಿತು. ಮಹಾಪಧಮನಿಯ ಕವಾಟ ಮತ್ತು ಮಿಟ್ರಲ್ ಕವಾಟವನ್ನು ಬದಲಾಯಿಸಿದ್ದೇವೆ. ಅವರ ಎಡ ಹೃತ್ಕರ್ಣವನ್ನು ಚಿಕ್ಕದಾಗಿಸಿ, ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಅವರ ಹೃದಯದ ಒಂದು ಭಾಗವನ್ನು ಮುಚ್ಚಿದೆವು. ಏಕಕಾಲದಲ್ಲಿಯೇ ಅವರಿಗೆ ಎರಡು ಕವಾಟ ಬದಲಿ ಶಸ್ತ್ರಚಿಕಿತ್ಸೆ ನಡೆಸಿದೆವು. ಇದು ಸವಾಲಿನ ಕೆಲಸವಾಗಿತ್ತು’ ಎಂದು ಡಾ. ವಿವೇಕ್ ಜವಳಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.