ಬೆಂಗಳೂರು: ಗಾಯನದ ರಸದೌತಣ, ಬ್ಯೂಟಿ ಟಿಪ್ಸ್, ಆಹಾರ ಕ್ರಮ, ಹಬ್ಬದಂದು ಮನೆಗಳ ಸಿಂಗಾರ, ಫ್ಯಾಷನ್ ಶೋ...

ಇದು ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ನ ಭೂಮಿಕಾ ಕ್ಲಬ್ (ಮಹಿಳೆಯರಿಗಾಗಿ ವಿಶಿಷ್ಟ ವೇದಿಕೆ) ನಗರದಲ್ಲಿ ಶನಿವಾರ ಆಯೋಜಿಸಿದ್ದ ದ್ವಿತೀಯ ಕಾರ್ಯಕ್ರಮವು ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ಕಟ್ಟಿಕೊಟ್ಟ ರೀತಿ. ಇಡೀ ಕಾರ್ಯಕ್ರಮ ಮಾಹಿತಿ, ಮನರಂಜನೆ ಒದಗಿಸಿತು.

ಗಾಯಕಿ ಶಮಿತಾ ಮಲ್ನಾಡ್ ಅವರ ಹಾಡುಗಳಿಗೆ ಕೆಲವರು ಚಪ್ಪಾಳೆಯ ಪ್ರೋತ್ಸಾಹ ತುಂಬಿದರೆ, ಯುವತಿಯರು ಹೆಜ್ಜೆ ಹಾಕಿದರು.

‘ಬಾಳ ಬಂಗಾರ ನೀನು...’ ಎಂಬ ಹಾಡಿನ ಮೂಲಕ ಶಮಿತಾ ಕಾರ್ಯಕ್ರಮ ಆರಂಭಿಸಿದರು. ‘ಬಿರುಗಾಳಿ’ ಚಿತ್ರದ ‘ಮಧುರಾ ಪಿಸುಮಾತಿಗೆ‘ ಹಾಡಿ ಭಾವನಾಲೋಕಕ್ಕೆ ಕೊಂಡೊಯ್ದರು.

‘ನಾನು ಬಳ್ಳಿಯ ಮಿಂಚು...’ ಎಂದು ಹಾಡಿ ವೇದಿಕೆ ಮುಂಭಾಗ ಪ್ರೇಕ್ಷಕರು ಕುಣಿಯುವಂತೆ ಮಾಡಿದರು. ‘ನಿನಗೆ ಬೇರೆ ಹೆಸರು ಬೇಕೇ? ಸ್ತ್ರೀ ಎಂದರೆ ಅಷ್ಟೇ ಸಾಕೆ?’ ಹಾಡನ್ನು ಮಹಿಳೆಯರಿಗೆ ಅರ್ಪಿಸಿದರು.

ಶಮಿತಾ ಮಾತನಾಡಿ, ‘ಮಹಿಳೆಯರು ಚೆನ್ನಾಗಿದ್ದರೆ ಮನೆ, ಮನಸ್ಸು, ದೇಶವು ಉತ್ತಮ ಆಗಿರಲಿದೆ’ ಎಂದರು.

ನಟಿ ಅದ್ವಿತಿ ಶೆಟ್ಟಿ ಮಾತನಾಡಿ, ‘ಎಂಬಿಎ ಪೂರ್ಣಗೊಳಿಸಿ ಎಚ್.ಆರ್ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದೆ. ಆದರೆ, ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಲಭಿಸಿತು’ ಎಂದರು.

ಅಪೋಲೊ ಆಸ್ಪತ್ರೆಯ ವೈದ್ಯೆ ಪ್ರಿಯಾಂಕಾ ರೋಹಟ್ಗಿ ಮಾತನಾಡಿ, ‘ಅತಿಯಾದ ತೂಕವು ಹಲವು ಕಾಯಿಲೆಗಳಿಗೆ ಕಾರಣವಾಗುತ್ತಿದೆ. 40 ವರ್ಷದ ಬಳಿಕ ಸಾಕಷ್ಟು ಕಾಯಿಲೆಗಳು ಬರುತ್ತಿವೆ’ ಎಂದು ಸಲಹೆ ನೀಡಿದರು.

ನಿಕಿತಾಪ್ರಿಯಾ ಭರಣ ಅವರು ಹಬ್ಬದ ದಿವಸ ಚೆಂದವಾಗಿ ಡ್ರೆಸ್ ಮಾಡಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಮನೆ ಸಿಂಗಾರದ ಕುರಿತು ಸ್ನೇಹಲ್ ಪಾಟೀಲ್ ವಿವರಿಸಿದರು. ನಿಕಿತಾ
ನಿರೂಪಿಸಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಆಶಯ ಭಾಷಣ ಮಾಡಿದರು. ಡೆಪ್ಯುಟಿ ಎಡಿಟರ್ ಎಂ.ನಾಗರಾಜ, ‘ಡೆಕ್ಕನ್ ಹೆರಾಲ್ಡ್’ನ ಡೆಪ್ಯುಟಿ ಎಡಿಟರ್ ಕೆ.ವಿ.ಸುಬ್ರಹ್ಮಣ್ಯ ಹಾಜರಿದ್ದರು.

ಉಡುಗೊರೆ ಪ್ರಾಯೋಜಕತ್ವವನ್ನು ಇಂಡಿಯನ್ ಸ್ವೀಟ್ ಹೌಸ್ ವಹಿಸಿತ್ತು. ಎಫ್ ಅಂಡ್ ಬಿ ಪಾರ್ಟ್ನರ್ ಆಗಿ ಟುಕ್ ಟುಕ್ ಹಾಗೂ ಸ್ಟೈಲ್ ಸ್ಟ್ರಾಡಾ ಸಂಸ್ಥೆಯವರು ಫ್ಯಾಷನ್ ಶೋ ಪ್ರಾಯೋಜಕತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.