ಬೆಂಗಳೂರು: ಬಿಹಾರದ ಶಸ್ತ್ರಾಸ್ತ್ರಗಳನ್ನು ಬೆಂಗಳೂರಿಗೆ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ವಿದ್ಯಾನಂದ ಸಹನಿ, ಪ್ರೇಮ್ಕುಮಾರ್ ಸಹನಿ ಬಂಧಿತರು.

ಬಂಧಿತರಿಂದ ಅಂದಾಜು ₹5 ಲಕ್ಷ ಮೌಲ್ಯದ ಎರಡು ಪಿಸ್ತೂಲ್, ನಾಲ್ಕು ಜೀವಂತ ಗುಂಡು, ಒಂದು ಬೈಕ್ ಜಪ್ತಿ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಎಲೇನಹಳ್ಳಿ, ಕೊಪ್ಪ–ಬೇಗೂರಿನ ನೈಸ್ ರಸ್ತೆಯ ಬಳಿ ಆರೋಪಿಗಳು ಬೈಕ್ನಲ್ಲಿ ಬರುತ್ತಿದ್ದರು. ಅವರಲ್ಲಿ ಬೈಕ್ಗೆ ಸಂಬಂಧಿಸಿದ ದಾಖಲಾತಿಗಳು ಇರಲಿಲ್ಲ. ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಜೀವಂತ ಗುಂಡುಗಳು ಇದ್ದವು. ನಂತರ, ಓಡಿಹೋಗಲು ಪ್ರಯತ್ನಿಸಿದ ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.

‘ಬಿಹಾರದಿಂದ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ತಂದು ರೌಡಿಶೀಟರ್ಗಳಿಗೆ ಮಾರುತ್ತಿದ್ದರು. ವಿದ್ಯಾನಂದ ಸಹನಿ ವಿರುದ್ಧ ಮದ್ದು ಗುಂಡು ಪೂರೈಕೆ ಹಾಗೂ ಕಳ್ಳತನ ಸೇರಿ ನಾಲ್ಕು ಪ್ರಕರಣಗಳು ಹಿಂದೆಯೇ ದಾಖಲಾಗಿದ್ದವು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.