ಬೆಂಗಳೂರು: ಲೈಂಗಿಕ ಕಾರ್ಯಕರ್ತರ ಘನತೆಯ ಹಕ್ಕು, ಪೊಲೀಸ್ ಹಿಂಸಾಚಾರದ ವಿರುದ್ಧ ಅವರ ಹಕ್ಕು ಮತ್ತು ಇತರೆ ಪ್ರಮುಖ ಸಾಂವಿಧಾನಿಕ ಖಾತರಿಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದು ಸ್ವಾಗತಾರ್ಹ ಎಂದು ಸಾಧನ ಮಹಿಳಾ ಸಂಘ ತಿಳಿಸಿದೆ.

‘ವೇಶ್ಯಾವಾಟಿಕೆಯೂ ಒಂದು ವೃತ್ತಿ ಮತ್ತು ಲೈಂಗಿಕ ಕಾರ್ಯಕರ್ತೆಯರು ಕೂಡ ಕಾನೂನಿನ ಅಡಿಯಲ್ಲಿ ಘನತೆಯಿಂದ ಬದುಕಲು ಹಾಗೂ ಸಮಾನ ರಕ್ಷಣೆಯನ್ನು ಪಡೆಯಲು ಅರ್ಹರು’ ಎಂದು ಸುಪ್ರೀಂ ಕೋರ್ಟ್ನ ತೀರ್ಪಿನಲ್ಲಿ ತಿಳಿಸಿರುವುದು. ಲೈಂಗಿಕ ಕಾರ್ಯಕರ್ತ ದಶಕಗಳ ಚಳವಳಿಗೆ ಪ್ರಮುಖ ವಿಜಯವಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸದಸ್ಯೆ ಗೀತಾ ಹೇಳಿದರು.

‘ಲೈಂಗಿಕ ಕಾರ್ಯಕರ್ತೆಯರ ಸಮುದಾಯವು ಪೊಲೀಸರಿಂದ ನಿರಂತರ ಹಿಂಸೆ ಎದುರಿಸುತ್ತಿತ್ತು. ಈ ಆದೇಶದಿಂದ ಸಮುದಾಯದ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯವನ್ನು ಕೋರ್ಟ್ ಮೊದಲ ಬಾರಿಗೆ ಗುರುತಿಸಿದೆ. ಲೈಂಗಿಕ ಕಾರ್ಯಕರ್ತೆಯರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳನ್ನು ಅವರ ವಿರುದ್ಧ ಸಾಕ್ಷಿಯಾಗಿ ಬಳಸುವಂತಿಲ್ಲ. ಪೊಲೀಸರ ಹಿಂಸಾಚಾರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ’ ಎಂದರು.

‘ಐಟಿಪಿಎ ಕಾಯ್ದೆ ಅಡಿಯಲ್ಲಿ ವಯಸ್ಕ ಮಹಿಳೆಯರ ಇಚ್ಛೆಯ ವಿರುದ್ಧವಾಗಿ ಬಂಧಿಸಿದರೆ ಕಾಲಮಿತಿಯೊಳಗೆ ಬಿಡುಗಡೆ ಮಾಡಲು ಪರಿಶೀಲಿಸಬಹುದು. ಲೈಂಗಿಕ ಕೆಲಸವನ್ನು ಜೀವನೋಪಾಯದ ಸಾಧನವಾಗಿ ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳ ಘನತೆಯ ಹಕ್ಕು ಹಾಗೂ ಸ್ವಾಯತ್ತತೆ ಹಕ್ಕುಗಳನ್ನು ಸಂರಕ್ಷಿಸುವ ಪ್ರಯತ್ನ ಇದಾಗಿದೆ ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.