ಬೆಂಗಳೂರು: ನಗರದಲ್ಲಿ ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣ ಯೋಜನೆಗೆ ‘ಸ್ವಿಸ್ ಚಾಲೆಂಜ್’ ಮಾದರಿಯಲ್ಲಿ ಟೆಂಡರ್ ಕರೆಯಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.

2006ರಲ್ಲೇ ಈ ಯೋಜನೆಯ ಭೂಸ್ವಾಧೀನಕ್ಕೆ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 15 ವರ್ಷಗಳ ಬಳಿಕವೂ ಈ ಯೋಜನೆ ಕಾರ್ಯಗತಗೊಂಡಿಲ್ಲ. ಪ್ರತಿ ಬಜೆಟ್ನಲ್ಲೂ ಪ್ರಸ್ತಾಪವಾಗುತ್ತಲೇ ಇದೆ. ಭೂಸ್ವಾಧೀನಕ್ಕೆ ಭಾರಿ ಬಂಡವಾಳ ಬಯಸುವ ಈ ಯೋಜನೆ ಅನುಷ್ಠಾನಕ್ಕೆ ಎಲ್ಲ ಸರ್ಕಾರಗಳೂ ಮೀನಮೇಷ ಎಣಿಸುತ್ತಲೇ ಬಂದಿವೆ. ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದ ಸಂಸ್ಥೆಗಳೂ ಬಳಿಕೆ ಹಿಂದೇಟು ಹಾಕಿದ್ದವು. ತೂಗುಯ್ಯಾಲೆಯಂತಾಗಿರುವ ಈ ಯೋಜನೆಗೆ ತಾರ್ಕಿಕ ಅಂತ್ಯ ಹಾಡಲು ಈಗಿನ ಸರ್ಕಾರ ಹೊಸ ಬಿಡ್ಡಿಂಗ್ ಮಾದರಿಯ ಮೊರೆ ಹೋಗಲಿದೆ.

ಏನಿದು ಸ್ವಿಸ್ ಚಾಲೆಂಜ್:

‘ಪಿಆರ್ಆರ್ ಅನುಷ್ಠಾನದ ಬಗ್ಗೆ ಜಾಗತಿಕ ಮಟ್ಟದಲ್ಲಿ ಪ್ರಸ್ತಾವನೆಯನ್ನು ಆಹ್ವಾನಿಸಲಾಗುತ್ತದೆ. ಅದನ್ನು ಮುಂದಿಟ್ಟು, ಅದಕ್ಕಿಂತ ಉತ್ತಮ ಪ್ರಸ್ತಾವನೆ ಯಾರಾದರೂ ಸಲ್ಲಿಸುತ್ತಾರೆಯೇ ಎಂದು ಸವಾಲು ಹಾಕಲಾಗುತ್ತದೆ. ಈ ರೀತಿ ಅತ್ಯುತ್ತಮ ಪ್ರಸ್ತಾವನೆಯನ್ನು ಆಯ್ಕೆ ಮಾಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ನನಗೆ ತಿಳಿದಂತೆ ಬೆಂಗಳೂರಿನಲ್ಲಿ ಸ್ವಿಸ್ ಚಾಲೆಂಜ್ ಮಾದರಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಮೊದಲ ಯೋಜನೆ ಇದು. ಇಷ್ಟೊಂದು ಭಾರಿ ಮೊತ್ತದ ಯೋಜನೆಯನ್ನು ರಜ್ಯದಲ್ಲೂ ಎಲ್ಲೂ ಸ್ವಿಸ್ ಚಾಲೆಂಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಿದಂತಿಲ್ಲ’ ಎಂದು ಅವರು ತಿಳಿಸಿದರು.

ಅಂಕಿ ಅಂಶ

65 ಕಿ.ಮೀ

ಪೆರಿಫೆರಲ್ ವರ್ತುಲ ರಸ್ತೆಯ ಉದ್ದ

₹21 ಸಾವಿರ ಕೋಟಿ

ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ ತಗಲುವ ಅಂದಾಜು ವೆಚ್ಚ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.