ಬೆಂಗಳೂರು: ‘ಯಾರೇ ಮುಖ್ಯಮಂತ್ರಿಯಾದರೂ ಅವರ ಸಮುದಾಯದ ಅಧಿಕಾರಿಗಳಿಗೆ ಒಳ್ಳೆಯ ಸ್ಥಾನ ಕೊಡುತ್ತಾರೆ. ಈಗ ನಮ್ಮ ಸಮುದಾಯದವರು ಮೂಲೆಗುಂಪು ಆಗಿದ್ದಾರೆ. ಹೀಗಾಗಿ ವೀರಶೈವ ಲಿಂಗಾಯತ ಅಧಿಕಾರಿಗಳ ಸ್ಥಿತಿ ನಾಯಿಪಾಡು ಆಗಿದೆ’ ಎಂದು ಕಾಂಗ್ರೆಸ್ ಶಾಸಕರೂ ಆಗಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

ವೀರಶೈವ ಲಿಂಗಾಯತ ಮಹಾಸಭಾದ ಬೆಂಗಳೂರು ನಗರ ಜಿಲ್ಲಾ ಘಟಕದ ವತಿಯಿಂದ ಗುರುವಾರ ಹಾನಗಲ್ ಕುಮಾರೇಶ್ವರ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಎಸ್. ನಿಜಲಿಂಗಪ್ಪ ಅವರಿಂದ ಹಿಡಿದು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿವರೆಗೆ ನಮ್ಮ ಸಮುದಾಯದ ಮುಖ್ಯಮಂತ್ರಿಗಳು ಇದ್ದಾಗ ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಾನ ಇರುತ್ತಿತ್ತು’ ಎಂದು ಅವರು ಹೇಳಿದರು.

‘ನಾವು ಒಗ್ಗಟ್ಟಾಗಿ ಇಲ್ಲದ ಕಾರಣ ಅನ್ಯಾಯಕ್ಕೆ ಒಳಗಾಗುತ್ತಿದ್ದೇವೆ. ಉಪಪಂಗಡಗಳೆಲ್ಲ ಒಂದಾಗಬೇಕು. ಎಲ್ಲ ಸಮುದಾಯದವರೂ ತಮ್ಮ ತಮ್ಮ ಸಮಾಜ ಮುಂದಕ್ಕೆ ಬರಬೇಕು ಎಂದು ಬಯಸುತ್ತಾರೆ. ರಾಜ್ಯದ ದೊಡ್ಡ ಸಮುದಾಯವಾಗಿರುವ ನಾವೂ ಹಿಂದಕ್ಕೆ ಉಳಿಯಬಾರದು’ ಎಂದರು.

‘ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಕಲಿಕೆಗೆ ಉತ್ತೇಜನ ನೀಡಬಹುದು. ಶಾಮನೂರು ಶಿವಶಂಕರಪ್ಪ ವಿದ್ಯಾರ್ಥಿ ವೇತನ ಎಂದು ₹ 5 ಕೋಟಿ ಠೇವಣಿ ಇಟ್ಟು, ಅದರ ಬಡ್ಡಿಯನ್ನು ವಿದ್ಯಾರ್ಥಿ ವೇತನವಾಗಿ ಪ್ರತಿವರ್ಷ ನೀಡುತ್ತಿದ್ದೇನೆ. ಆದರೆ, ವಿದ್ಯಾರ್ಥಿ ವೇತನದಿಂದ ದೊಡ್ಡಮಟ್ಟದ ಉಪಯೋಗವೇನು ಆಗುವುದಿಲ್ಲ. ಉತ್ತಮವಾಗಿ ಕಲಿಯುವವರನ್ನು ಗುರುತಿಸಿ ಅವರನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸದ ಪೂರ್ಣ ವೆಚ್ಚವನ್ನು ಭರಿಸುವ ಕೆಲಸ ಮಾಡಬೇಕು. ನಮ್ಮ ಸಮುದಾಯದಲ್ಲಿ ಶ್ರೀಮಂತರಿಗೇನು ಕಡಿಮೆ ಇಲ್ಲ. ಒಂದಿಬ್ಬರ ಪೂರ್ಣ ವೆಚ್ಚ ಭರಿಸಲು ನಾನು ಸಿದ್ಧ ಇದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.