ಬೆಂಗಳೂರು: ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತ ಖಾಸಗಿ ಬಸ್ಗಳನ್ನು ಅಕ್ರಮವಾಗಿ ನಿಲುಗಡೆ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಎದುರಾಗಿದೆ.

ರಸ್ತೆ ಬದಿಯಲ್ಲೇ ಬಸ್ಗಳನ್ನು ಸಾಲುಗಟ್ಟಿ ನಿಲುಗಡೆ ಮಾಡಲಾಗಿದ್ದು, ಸಾರ್ವಜನಿಕರ ವಾಹನಗಳು ಮುಂದಕ್ಕೆ ಸಾಗಲು ಸಾಧ್ಯವಾಗುತ್ತಿಲ್ಲ. ಖಾಸಗಿ ಬಸ್ ಚಾಲಕರು, ರಸ್ತೆ ಬದಿಯನ್ನೇ ತಂಗುದಾಣ ಮಾಡಿಕೊಂಡಿದ್ದಾರೆ.

ನಗರದಿಂದ ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಖಾಸಗಿ ಬಸ್ಗಳು ಸಂಚರಿಸುತ್ತಿವೆ. ಬಹುತೇಕ ಖಾಸಗಿ ಬಸ್ಗಳನ್ನು ಪ್ರಮುಖ ರಸ್ತೆಗಳ ಬದಿಯಲ್ಲಿ ಅಕ್ರಮವಾಗಿ ತಂದು ನಿಲುಗಡೆ ಮಾಡಲಾಗುತ್ತಿದೆ. ಮುಂಜಾನೆ ನಗರಕ್ಕೆ ಬರುವ ಬಸ್ಗಳು ಹಗಲಿಡೀ ರಸ್ತೆ ಬದಿಯಲ್ಲೇ ನಿಂತಿರುತ್ತವೆ. ಮೆಜೆಸ್ಟಿಕ್ ಅಕ್ಕಪಕ್ಕದ ರಸ್ತೆಗಳು ಹಾಗೂ ಆನಂದ್ ರಾವ್ ವೃತ್ತದ ಸುತ್ತಮುತ್ತ ಸಮಸ್ಯೆ ತೀವ್ರವಾಗಿದೆ.

ಖಾಸಗಿ ಬಸ್ ನಿಲುಗಡೆ ಮಾಡಿದ್ದ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಹೊರತು ಪಡಿಸಿ ಆಟೊ, ಬಿಎಂಟಿಸಿ ಬಸ್, ಕ್ಯಾಬ್ಗಳು ಮುಂದಕ್ಕೆ ಸಾಗಲು ಸಾಧ್ಯವಾತ್ತಿಲ್ಲ ಎಂದು ವಾಹನ ಚಾಲಕರು ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ದೂರು ನೀಡಿದ್ದರೂ ಸಂಚಾರ ವಿಭಾಗದ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದೂ ಆಪಾದಿಸಿದ್ದಾರೆ.

ಮೆಜೆಸ್ಟಿಕ್ ಬಳಿಯ ಪ್ಲಾಟ್ಫಾರ್ಮ್ ರಸ್ತೆ, ಧನ್ವಂತರಿ ರಸ್ತೆ, ಕೆಪಿಸಿಸಿ ಕಚೇರಿ ರಸ್ತೆ, ಸುಬೇದಾರ್ ಛತ್ರ ರಸ್ತೆ ಹಾಗೂ ಸುತ್ತಮುತ್ತಲಿನ ವೃತ್ತ ಹಾಗೂ ರಸ್ತೆಗಳಲ್ಲಿ ಖಾಸಗಿ ಬಸ್ಗಳು ಸಾಲು ಸಾಲಾಗಿ ನಿಂತಿರುತ್ತವೆ. ಅದೇ ಮಾರ್ಗದಲ್ಲಿ ಸಂಚರಿಸಬೇಕಾದ ಆಂಬುಲೆನ್ಸ್ಗಳೂ ತೊಂದರೆಗೆ ಸಿಲುಕುತ್ತಿವೆ.

ಮೆಜೆಸ್ಟಿಕ್ ಸುತ್ತಮುತ್ತ ಇತ್ತೀಚೆಗೆ ದಟ್ಟಣೆ ತೀವ್ರವಾಗಿದೆ. ಖಾಸಗಿ ಬಸ್ಗಳು ಪ್ರಯಾಣಿಕರನ್ನು ಮೆಜೆಸ್ಟಿಕ್ಗೆ ತಂದು ಬಿಟ್ಟು ಹೊರ ವಲಯಕ್ಕೆ ತೆರಳಬೇಕು. ಆದರೆ, ಹಗಲು ವೇಳೆ ಅಲ್ಲೇ ನಿಂತಿರುತ್ತವೆ. ಇದರಿಂದ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

‘ಖಾಸಗಿ ಬಸ್ಗಳಿಂದ ಪ್ರಯಾಣಿಕರಿಗೆ ಅನುಕೂಲ ಆಗುತ್ತಿದೆ. ದೂರದ ಪ್ರಯಾಣಕ್ಕೆ ಹೆಚ್ಚಿನವರು ಖಾಸಗಿ ಬಸ್ಗಳನ್ನೇ ಅವಲಂಬಿಸಿದ್ದಾರೆ. ಪ್ರತಿನಿತ್ಯ ನೂರಾರು ಖಾಸಗಿ ಬಸ್ಗಳು ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ತೆರಳುತ್ತವೆ. ಮೆಜೆಸ್ಟಿಕ್ ಬಳಿ ಮಾತ್ರವೇ ನಿಲುಗಡೆಗೆ ಸದ್ಯ ಸ್ವಲ್ಪ ಜಾಗವಿದೆ. ಬೇರೆ ಕಡೆ ನಿಲುಗಡೆಗೆ ಅವಕಾಶ ಇಲ್ಲ. ಪ್ರತ್ಯೇಕ ಸ್ಥಳ ನೀಡಿದರೆ ರಸ್ತೆಯಲ್ಲಿ ಬಸ್ ನಿಲ್ಲಿಸುವುದಿಲ್ಲ’ ಎಂದು ಖಾಸಗಿ ಬಸ್ ಚಾಲಕರೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.