ಬೆಂಗಳೂರು: ಸೈಬರ್ ಕಳ್ಳರು ವಂಚನೆಗೆ ನಾನಾ ತಂತ್ರ ರೂಪಿಸುತ್ತಿದ್ದು, ವೇತನ ಪಾವತಿಯ ಬ್ಯಾಂಕ್ ಖಾತೆ ಬದಲಾವಣೆ ಹೆಸರಿನಲ್ಲಿ ಅಮೆರಿಕ ಮೂಲದ ಕೆನೈ ಟೆಕ್ನಾಲಜೀಸ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ(ಸಿಇಒ) ₹16.29 ಲಕ್ಷ ವಂಚಿಸಿದ್ದಾರೆ.

ವಂಚನೆ ಪ್ರಕರಣದ ಸಂಬಂಧ ನಗರದ ವಿದ್ಯಾರಣ್ಯಪುರದಲ್ಲಿರುವ ಕಂಪನಿ ಕಚೇರಿಯ ಮಾನವ ಸಂಪನ್ಮೂಲ(ಎಚ್ಆರ್) ವಿಭಾಗದ ವ್ಯವಸ್ಥಾಪಕ ಯು.ಜಿ.ಹರೀಶ್ ದೂರು ನೀಡಿದ್ದು, ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ನವೆಂಬರ್ 9ರಂದು ಬಿಎನ್ಎಸ್ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತಾಂತ್ರಿಕ ಸಾಕ್ಷ್ಯ ಕಲೆಹಾಕಿ ತನಿಖೆ ನಡೆಸಲಾಗುತ್ತಿದೆ’ ಎಂದು ಸೈಬರ್ ಠಾಣೆ ಪೊಲೀಸರು ತಿಳಿಸಿದರು.

‘ಸಂಬಳ ಪಾವತಿ ಆಗುತ್ತಿರುವ ಬ್ಯಾಂಕ್ ಖಾತೆಯನ್ನು ಬದಲಾವಣೆ ಮಾಡುತ್ತಿದ್ದು, ಅದಕ್ಕೆ ಬೇಕಾದ ದಾಖಲೆಗಳ ವಿವರ ಕಳುಹಿಸುವಂತೆ r**@kenai-us.comನಿಂದ ಸಿಇಒ ಅವರ ಹೆಸರಿನಲ್ಲಿ ಜ.1ರಂದು ವ್ಯವಸ್ಥಾಪಕ ಹರೀಶ್ ಅವರ ಇ–ಮೇಲ್ಗೆ ಸಂದೇಶ ಬಂದಿತ್ತು. ಹರೀಶ್ ಅವರು ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಐಎಫ್ಎಸ್ಸಿ ಕೋಡ್ ಕಳುಹಿಸುವಂತೆ ಇ–ಮೇಲ್ಗೆ ಪ್ರತಿಕ್ರಿಯಿಸಿದ್ದರು. ಜ.31ರಂದು ಸೈಬರ್ ವಂಚಕರು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಐಎಫ್ಎಸ್ಸಿ ಕೋಡ್ ಅನ್ನು ಇ–ಮೇಲ್ ಮೂಲಕ ರವಾನಿಸಿದ್ದರು. ಮಾರ್ಚ್ 31ರಿಂದ ಅಕ್ಟೋಬರ್ 31ರ ವರೆಗೆ ಪ್ರತಿ ತಿಂಗಳು ಸಂಬಳವು ಕಂಪನಿಯ ಕೋಟೆಕ್ ಮಹೀಂದ್ರ ಬ್ಯಾಂಕ್ ಖಾತೆಯಿಂದ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಖಾತೆಗೆ ಒಟ್ಟು ₹16.29 ಲಕ್ಷ ಸಂದಾಯ ಆಗಿತ್ತು’ ಎಂದು ನೀಡಿರುವ ದೂರು ಆಧರಿಸಿ, ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

‘ಈ ನಡುವೆ ಸಿಇಒ ಅವರು ಅಕ್ಟೋಬರ್ನಲ್ಲಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಂಡಿದ್ದರು. ಕಳೆದ ಕೆಲವು ತಿಂಗಳಿಂದ ಯಾವುದೇ ವೇತನ ಪಾವತಿ ಆಗಿಲ್ಲವೆಂದು ವ್ಯವಸ್ಥಾಪಕರಿಗೆ ಕರೆ ಮಾಡಿ ತಿಳಿಸಿದ್ದರು. ನಂತರ, ವ್ಯವಸ್ಥಾಪಕ ಹರೀಶ್ ಅವರು ವೇತನ ಪಾವತಿ ಆಗಿರುವ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಐಎಫ್ಎಸ್ಸಿ ಕೋಡ್ ಅನ್ನು ಸಿಇಒ ಅವರಿಗೆ ಕಳುಹಿಸಿದ್ದರು. ಈ ಖಾತೆಗೆ ವೇತನ ಹಾಕುವಂತೆ ಮಾಡಿದ್ದ ಇ–ಮೇಲ್ ಸಹ ಕಳುಹಿಸಿದ್ದರು. ಆಗ ಸಿಇಒ ಅವರು ‘ನಾನು ಯಾವುದೇ ಇ–ಮೇಲ್ ಮಾಡಿಲ್ಲ’ ಎಂಬುದಾಗಿ ಹೇಳಿದ್ದರು. ಆಗ ಸೈಬರ್ ವಂಚನೆ ನಡೆದಿರುವುದು ಗೊತ್ತಾಗಿ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಸೈಬರ್ ವಂಚಕರು ನೀಡಿರುವ ಬ್ಯಾಂಕ್ ಸಂಖ್ಯೆ ಸ್ಥಳೀಯವಾಗಿದ್ದು, ಸೈಬರ್ ಕಳ್ಳರನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.