ಬೆಂಗಳೂರು: ‘ವಚನಗಳು ಕೇವಲ ಮಾತುಗಳಲ್ಲ, ಸಾಹಿತ್ಯವಲ್ಲ, ಬದುಕಿನ ಸಾರ’ ಎಂದು ಅತ್ತಿಗುಪ್ಪೆಯ ಮಾಜಿ ಕಾರ್ಪೊರೇಟರ್ ಡಾ. ಎಸ್. ರಾಜು ಹೇಳಿದರು.

ವಚನಜ್ಯೋತಿ ಬಳಗವು ಅತ್ತಿಗುಪ್ಪೆಯ ಗಂಗಾಂಬಿಕೆ ಡಾ. ಮುನಿರಾಜಪ್ಪನವರ ಮನೆಯಂಗಳದಲ್ಲಿ ಆಯೋಜಿಸಿದ್ದ ‘ವಚನ ಶ್ರಾವಣ- 2023’ ಉದ್ಘಾಟಿಸಿ ಮಾತನಾಡಿದರು.

‘ಬದುಕು ಕಟ್ಟಿಕೊಳ್ಳಲು ವಚನಗಳು ದಾರಿದೀಪವಾಗಿವೆ. ಯಾಂತ್ರಿಕತೆಯಲ್ಲಿ ಕಳೆದುಹೋಗುತ್ತಿರುವ ಸಮಯದಲ್ಲಿ ವಚನಗಳು ಅಮೃತಸವಿಯನ್ನು ಉಣಬಡಿಸುತ್ತಿವೆ. ಸಮ ಸಮಾಜದ ನಿರ್ಮಾಣಕ್ಕೆ ಪೂರಕವಾದ ವಚನಗಳನ್ನು ಮನೆ ಮನಕ್ಕೆ ಮುಟ್ಟಿಸುವ ವಚನ ಶ್ರಾವಣ ಬಹು ಅರ್ಥಪೂರ್ಣ ಹಾಗೂ ಅಭಿನಂದನೀಯ ಕಾರ್ಯ’ ಎಂದು ಬಣ್ಣಿಸಿದರು.

ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಮಾತನಾಡಿ, 15 ವರ್ಷಗಳಿಂದ ಶ್ರಾವಣ ಮಾಸದ 30 ದಿನಗಳೂ ಕಾರ್ಯಕ್ರಮಗಳನ್ನು ಆಸಕ್ತ ಅಂಗಳಗಳಲ್ಲಿ ಏರ್ಪಡಿಸಲಾಗುತ್ತಿದೆ. ನೂರಾರು ಕಲಾವಿದರು - ಸಾಹಿತಿಗಳಿಗೆ ವೇದಿಕೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಈ ಸಾಲಿನ ವಚನ ಶ್ರಾವಣವು ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ರಾಮನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ನಡೆಯಲಿದ್ದು, ಸಾರ್ಥಕ ಬದುಕನ್ನು ರೂಢಿಸಿಕೊಂಡು ಸತ್ಯ ಶುದ್ದ ಪ್ರಾಮಾಣಿಕ ಜೀವನ ನಡೆಸಲು ಪ್ರೇರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಗಾಯಕಿಯರಾದ ಮೀನಾಕ್ಷಿ ಮೇಟಿ, ಪೂರ್ಣಿಕ ಆರಾಧ್ಯ, ಗೀತಾ ಭತ್ತದ್, ಶ್ರಾವಣಿ ಹಣ್ಣಿ, ಸಾತ್ವಿಕ ಬಾಚಲಪುರ ಹಾಗೂ ಪ್ರಕಾಶ್ ಮಯೂರಮಠ್ ವಚನಗಳನ್ನು ಪ್ರಸ್ತುತಪಡಿಸಿದರು. ಕೀಬೋರ್ಡಿನಲ್ಲಿ ಪುಣ್ಯೇಶ್, ತಬಲದಲ್ಲಿ ಮಾರುತಿಪ್ರಸಾದ್ ಜೊತೆಯಾಗಿದ್ದರು.

ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ ಅನೀಲಕುಮಾರ್ ಗ್ರಾಮಪುರೋಹಿತ್ ಅವರನ್ನು ಅಭಿನಂದಿಸಲಾಯಿತು. ಪ್ರಾಧ್ಯಾಪಕರಾದ ಚಂದ್ರಶೇಖರಮೂರ್ತಿ, ಮಲ್ಲಿಕಾರ್ಜುನ್, ಯೋಗಾನಂದ್, ರಮೇಶ್, ರೇಣುಕಪ್ರಸಾದ್, ರುದ್ರೇಶ್ ಅದರಂಗಿ, ನಿವೃತ್ತ ಅಧಿಕಾರಿಗಳಾದ ಗೌರಿಶಂಕರ ಸೋಂಪುರ, ಎಲೆ ಶಶಿಧರ್, ಶಿವಕುಮಾರ್, ಬಳಗದ ಪ್ರಭು, ರುದ್ರೇಶ್, ರಾಜಾಗುರುಪ್ರಸಾದ್ ಇದ್ದರು.

ವಚನಜ್ಯೋತಿ ಬಳಗದ ‘ವಚನ ಶ್ರಾವಣ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿ ಅನೀಲಕುಮಾರ್ ಅವರನ್ನು ಸನ್ಮಾನಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.