ಬೆಂಗಳೂರು: ಏಟ್ರಿಯಾ ವಿಶ್ವವಿದ್ಯಾಲಯವು ಇಸ್ರೇಲ್ ಕಾನ್ಸುಲೇಟ್ ಜನರಲ್ ಹಾಗೂ ಇಸ್ರೇಲ್ ಮೂಲದ ಅಯಾಲಾ ಸಂಸ್ಥೆ ಸಹಯೋಗದಲ್ಲಿತ್ಯಾಜ್ಯ ನೀರು ನಿರ್ವಹಣೆ ಪರಿಹಾರ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ.

‘ಹೆಬ್ಬಾಳ ಸಮೀಪದ ಆನಂದನಗರದಲ್ಲಿ ವಿಶ್ವವಿದ್ಯಾಲಯ ಇದೆ. ಇಲ್ಲಿನ ವಸತಿ ನಿಲಯಗಳಿಂದಉತ್ಪತ್ತಿಯಾಗುವ ತ್ಯಾಜ್ಯ ನೀರು ಸಂಗ್ರಹಿಸಿ, ಮರುಬಳಕೆಗಾಗಿ ಅದನ್ನು ನೈಸರ್ಗಿಕ ಸಂಪನ್ಮೂಲಗಳ ಮೂಲಕವೇ ಪ್ರತ್ಯೇಕವಾಗಿ ಸಂಸ್ಕರಿಸುವುದು ಯೋಜನೆಯ ಗುರಿ. ಸಂಸ್ಕರಿಸಿದ ನೀರನ್ನು ವಿಶ್ವವಿದ್ಯಾಲಯದ ಕ್ಯಾಂಪಸ್, ಕ್ಯಾಂಟೀನ್ ಹಾಗೂ ಉದ್ಯಾನಕ್ಕೆ ಬಳಸಲಾಗುತ್ತದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಸುಸ್ಥಿರತೆ ಸ್ಥಾಪಿಸಲು ಈ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಹಸಿರು ಉಪಕ್ರಮಗಳೊಂದಿಗೆ ಹೊಸ ಹಾದಿಯತ್ತ ಹೆಜ್ಜೆ ಇಟ್ಟಿರುವ ಏಟ್ರಿಯಾ ವಿಶ್ವವಿದ್ಯಾಲಯದೊಂದಿಗೆ ನಿಕಟವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗುತ್ತಿದೆ. ಇದು ದೇಶದ ಮತ್ತು ಇಡೀ ಪ್ರಪಂಚದ ಹವಾಮಾನ ಗುರಿಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ’ ಎಂದು ದಕ್ಷಿಣ ಭಾರತದಇಸ್ರೇಲ್ ಕಾನ್ಸುಲೇಟ್ ಜನರಲ್ ಜೊನಾಥನ್ ಝಡ್ಕ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.