ಬೆಂಗಳೂರು: ವೈಟ್‌ಫೀಲ್ಡ್ ಸಂಪರ್ಕಿಸುವ ಬಹುನಿರೀಕ್ಷಿತ ಮೆಟ್ರೊ ರೈಲು ಮಾರ್ಗದ ಕಾಮಗಾರಿಗೆ ಬೆನ್ನಿಗಾನಹಳ್ಳಿ ಬಳಿ ರೈಲ್ವೆ ಮಾರ್ಗದ ಮೇಲೆ ಕಬ್ಬಿಣದ ಸೇತುವೆ (ವೆಬ್ ಗರ್ಡರ್) ನಿರ್ಮಾಣ ಸವಾಲಾಗಿ ಪರಿಣಮಿಸಿದ್ದು, ಈ ಮಾರ್ಗದಲ್ಲಿ ಪೂರ್ಣ ಪ್ರಮಾಣದಲ್ಲಿ ಮೆಟ್ರೊ ರೈಲುಗಳ ಕಾರ್ಯಾಚರಣೆಗೆ ಇನ್ನೂ ಕನಿಷ್ಠ ಆರು ತಿಂಗಳು ಕಾಯಬೇಕಿದೆ.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ 2020ರಲ್ಲೇ ವೈಟ್‌ಫೀಲ್ಡ್‌ಗೆ ಮೆಟ್ರೊ ರೈಲು ಸಂಪರ್ಕ ದೊರಕಬೇಕಿತ್ತು. ಕೋವಿಡ್ ಕಾರಣದಿಂದ ಕಾಮಗಾರಿ ವಿಳಂಬವಾಗಿದ್ದರಿಂದ ಕಾಮಗಾರಿ ಪೂರ್ಣಗೊಳಿಸುವ ದಿನಾಂಕವನ್ನು 2021ರ ಆಗಸ್ಟ್‌ಗೆ ವಿಸ್ತರಿಸಲಾಗಿತ್ತು. ಬಳಿಕ 2022ರ ಜೂನ್‌ಗೆ ವಿಸ್ತರಿಸಲಾಯಿತು. ಅದು ಕೂಡ ಸಾಧ್ಯವಾಗದೆ, 2022ರ ಡಿಸೆಂಬರ್‌ಗೆ ಗಡುವು ನೀಡಲಾಗಿತ್ತು.

ಈ ಎಲ್ಲಾ ಗಡುವುಗಳೂ ಮುಕ್ತಾಯವಾಗಿದ್ದು, ಈಗ ಎರಡು ಹಂತದಲ್ಲಿ ಮೆಟ್ರೊ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ವೈಟ್‌ಫೀಲ್ಡ್‌ನಿಂದ ಗರುಡಾಚಾರ್ ಪಾಳ್ಯದ ತನಕ ಪರೀಕ್ಷಾರ್ಥ ಸಂಚಾರವನ್ನೂ ಬಿಎಂಆರ್‌ಸಿಎಲ್ ಆರಂಭಿಸಿದೆ.

ಬೆನ್ನಿಗಾನಹಳ್ಳಿ ಬಳಿ ರೈಲು ಮಾರ್ಗ ಮತ್ತು ಹೆಬ್ಬಾಳ ಕಡೆಗೆ ಸಾಗುವ ರಸ್ತೆ ಮೇಲ್ಸೇತುವೆಯ ಮೇಲ್ಭಾಗದಲ್ಲಿ 17 ಮೀಟರ್ ಎತ್ತರದಲ್ಲಿ (ನೆಲದಿಂದ) ‘ವೆಬ್ ಗರ್ಡರ್’ ಅಳವಡಿಸಿ ಮೆಟ್ರೊ ರೈಲಿಗೆ ಮಾರ್ಗ ನಿರ್ಮಾಣ ಮಾಡಬೇಕಿದೆ. ಈ ಕಾಮಗಾರಿ ಬಿಎಂಆರ್‌ಸಿಎಲ್‌ಗೆ ಸವಾಲಾಗಿದೆ. ಕಳೆದ ಶುಕ್ರವಾರ ಪ್ರಾರಂಭಿಸಲು ಉದ್ದೇಶಿಸಿದ್ದ ಕಾಮಗಾರಿಯನ್ನು ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಮುಂದೂಡಲಾಗಿದೆ.

ಸುರಕ್ಷತೆ ದೃಷ್ಟಿಯಿಂದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಅದಕ್ಕೆ ಅನುಮತಿಯನ್ನೂ ನೈರುತ್ಯ ರೈಲ್ವೆಯಿಂದ ಪಡೆದುಕೊಳ್ಳಲಾಗಿತ್ತು. ಆದರೂ, ಪೂರ್ವ ಸಿದ್ಧತೆಗಳು ಪರಿಪೂರ್ಣವಾಗದ ಕಾರಣ ಕಾಮಗಾರಿ ಮುಂದೂಡಲಾಗಿದೆ. ವೆಬ್ ಗರ್ಡರ್ ಅಳವಡಿಕೆಯಾದರೆ ಉಳಿದ ಕಾಮಗಾರಿಗಳು ಚುರುಕಾಗಿ ನಡೆಯಲಿದೆ. ಒಮ್ಮೆ ಸಿವಿಲ್ ಕಾಮಗಾರಿ ಪೂರ್ಣಗೊಂಡರೆ, ಹಳಿ ಜೋಡಣೆ ಕಾಮಗಾರಿ ವೇಗವಾಗಿ ನಡೆಯಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ಒಟ್ಟಾರೆ, ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ತನಕ 15.50 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭವಾದರೆ ಐ.ಟಿ ಕಾರಿಡಾರ್‌ಗೆ ನಗರದ ವಿವಿಧೆಡೆಯಿಂದ ಸಂಪರ್ಕ ಕಲ್ಪಿಸಿದಂತೆ ಆಗಲಿದೆ. ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆಯೂ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂಬುದು ಬಿಎಂಆರ್‌ಸಿಎಲ್ ಅಧಿಕಾರಿಗಳ ಲೆಕ್ಕಾಚಾರ.

ಮಾರ್ಚ್‌ನಲ್ಲಿ ಮೊದಲ ಹಂತ

ವೈಟ್‌ಫೀಲ್ಡ್‌ನಿಂದ ಕೆ.ಆರ್.ಪುರ ತನಕ ಈಗಾಗಲೇ ಪರೀಕ್ಷಾರ್ಥ ಸಂಚಾರ ಆರಂಭಿಸಲಾಗಿದ್ದು, ಈ ಎರಡು ನಿಲ್ದಾಣಗಳ ನಡುವೆ ಮಾರ್ಚ್‌ನಲ್ಲಿ ಮೆಟ್ರೊ ರೈಲು ಕಾರ್ಯಾಚರಣೆ ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ಮಾಡಿಕೊಂಡಿದೆ.

ನಿಲ್ದಾಣಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡರೆ ರೈಲ್ವೆ ಸುರಕ್ಷತಾ ಆಯುಕ್ತರ ಮೂಲಕ ಸುರಕ್ಷತೆ ಪರಿಶೀಲನೆ ನಡೆಸಲಾಗುತ್ತದೆ. ವೈಟ್‌ಫೀಲ್ಡ್‌ನಲ್ಲಿ ಮೆಟ್ರೊ ರೈಲು ಡಿಪೊ ನಿರ್ಮಾಣವಾಗಿದ್ದು, ಅಲ್ಲಿಂದ ರೈಲುಗಳು ಕೆ.ಆರ್.ಪುರದ ತನಕ ಬಂದು ವಾಪಸ್ ಹೋಗಲಿವೆ. ಕೆ.ಆರ್.ಪುರದಿಂದ ಬೈಯಪ್ಪನಹಳ್ಳಿಗೆ ಬಿಎಂಟಿಸಿ ಬಸ್‌ಗಳನ್ನು ಫೀಡರ್ ಸೇವೆಗೆ ನಿಯೋಜಿಸಿಕೊಳ್ಳಲು ಮೆಟ್ರೊ ಅಧಿಕಾರಿಗಳು ಆಲೋಚಿಸಿದ್ದಾರೆ.

ಯಾವುದೇ ಅಡೆ–ತಡೆ ಎದುರಾಗದಿದ್ದರೆ ಮುಂದಿನ ಎರಡು ತಿಂಗಳಲ್ಲಿ ಕೆ.ಆರ್.ಪುರದಿಂದ ಬೈಯಪ್ಪನಹಳ್ಳಿ ಸಂಪರ್ಕ ಕಲ್ಪಿಸುವ ಮಾರ್ಗದ ಬಾಕಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.

ನಿಲ್ದಾಣ ಕಾಮಗಾರಿ ಬಾಕಿ

ವೈಟ್‌ಫೀಲ್ಡ್‌ನಿಂದ ಗರುಡಾಚಾರ್ ಪಾಳ್ಯದ ತನಕ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದ್ದರೂ, ನಿಲ್ದಾಣ ನಿರ್ಮಾಣ ಕಾಮಗಾರಿ ಬಾಕಿ ಇದೆ.

ವೈಟ್‌ಫೀಲ್ಡ್ ಡಿಪೊ ನಿರ್ಮಾಣ ಕಾಮಗಾರಿಯೂ ಭರದಿಂದ ಸಾಗಿದ್ದು, ಈ ಮಾರ್ಗದ ಎಲ್ಲಾ ನಿಲ್ದಾಣಗಳಲ್ಲೂ ಕಾಮಗಾರಿ ನಡೆಯುತ್ತಿದೆ. ನಿಲ್ದಾಣಗಳ ಸದ್ಯದ ಸ್ಥಿತಿ ನೋಡಿದರೆ ಸಿವಿಲ್ ಕಾಮಗಾರಿ ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಾಗಲಿದೆ ಎನ್ನುತ್ತಾರೆ ಸ್ಥಳೀಯರು.

ಎಲ್ಲವೂ ನೇರಳೆ

ವೈಟ್‌ಫೀಲ್ಡ್ ಮಾರ್ಗದ ವಿಶೇಷ ಎಂದರೆ ಮೆಟ್ರೊ ರೈಲು ಮಾರ್ಗದ ಕಂಬಗಳಿಗೂ ಬಣ್ಣ ಬಳಿಯಲಾಗುತ್ತಿದೆ. ವೈಟ್‌ಫೀಲ್ಡ್ ಮತ್ತು ಕಾಡುಗೋಡಿ ಭಾಗದಲ್ಲಿ ಈಗಾಗಲೇ ಮೆಟ್ರೊ ಕಂಬಗಳಿಗೆ ಬಣ್ಣ ಬಳಿಯಲಾಗಿದ್ದು, ಕಂಬಗಳು ಬಗೆ ಬಗೆಯ ಚಿತ್ತಾರಗಳಿಂದ ಮಿರುಗುತ್ತಿವೆ.

ವೈಟ್‌ಫೀಲ್ಡ್‌ನಲ್ಲಿರುವ ಐ.ಟಿ ಕಂಪನಿಗಳು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಮೆಟ್ರೊ ರೈಲು ಮಾರ್ಗದ ಮೆರಗು ಹೆಚ್ಚಿಸುವ ಕೆಲಸ ಮಾಡುತ್ತಿವೆ. ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್) ಬಳಸಿಯೂ ಈ ಕಾರ್ಯವನ್ನು ಕಂಪನಿಗಳು ಮಾಡುತ್ತಿವೆ. ಈ ರೀತಿಯ ಕಾರ್ಯಕ್ಕೆ ಮುಂದೆ ಬರುವ ಕಂಪನಿಗಳಿಗೆ ಅನುಮತಿ ನೀಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

13 ಮೆಟ್ರೊ ನಿಲ್ದಾಣ

ಬೆನ್ನಿಗಾನಹಳ್ಳಿ

ಕೆ.ಆರ್.ಪುರಂ

ಮಹದೇವಪುರ

ಗರುಡಾಚಾರ್‌ಪಾಳ್ಯ

ಹೂಡಿ ಜಂಕ್ಷನ್

ಸೀತಾರಾಮಪಾಳ್ಯ

ಕುಂದಲಹಳ್ಳಿ

ನಲ್ಲೂರುಹಳ್ಳಿ

ಶ್ರೀಸತ್ಯಸಾಯಿ ಆಸ್ಪತ್ರೆ

ಪಟ್ಟಂದೂರು ಅಗ್ರಹಾರ

ಕಾಡುಗೋಡಿ

ಚನ್ನಸಂದ್ರ

ವೈಟ್‌ಫೀಲ್ಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.