ಬೆಂಗಳೂರು: ಜ್ಞಾನಭಾರತಿ ಆವರಣದಲ್ಲಿ ₹35.50 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ವೈಟ್ಟಾಪಿಂಗ್ ಕಾಮಗಾರಿಯನ್ನು ಲಗ್ಗೆರೆ ಮುಖ್ಯರಸ್ತೆಗೆ ವರ್ಗಾಯಿಸಲು ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆ ತಿರಸ್ಕರಿಸಿದೆ.

ಜ್ಞಾನಭಾರತಿ ಆವರಣದಲ್ಲಿ ಟೆಂಡರ್ ಕರೆಯದೆ ಈ ಕಾಮಗಾರಿ ನಿರ್ವಹಿಸಲು ಯತ್ನಿಸಲಾಗಿತ್ತು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿದ ಬಳಿಕ ಟೆಂಡರ್ ಕರೆದೇ ಕಾಮಗಾರಿ ನಿರ್ವಹಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಟೆಂಡರ್ ಪ್ರಕ್ರಿಯೆ ನಡೆಸುವಷ್ಟರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಭೇಟಿ ನೀಡಿದ್ದರು. ಕೊಮ್ಮಘಟ್ಟಕ್ಕೆ ತೆರಳಲು ಜ್ಞಾನಭಾರತಿ ಆವರಣದಲ್ಲೇ ಹಾದು ಹೋದರು. ಅದಕ್ಕಾಗಿ ಡಾಂಬರ್ ರಸ್ತೆಯನ್ನು ತರಾತುರಿಯಲ್ಲಿ ನಿರ್ಮಿಸಲಾಯಿತು.

ಹೊಸದಾಗಿ ಡಾಂಬರ್ ಹಾಕಿದ ರಸ್ತೆಗಳಿಗೆ ಮೂರು ವರ್ಷ ವೈಟ್ಟಾಪಿಂಗ್ ಮಾಡುವುದಿಲ್ಲ ಎಂದು ಸರ್ಕಾರ ತೀರ್ಮಾನಿಸಿತು. ಇದರಿಂದಾಗಿ ಜ್ಞಾನಭಾರತಿ ಆವರಣದ ವೈಟ್ಟಾಪಿಂಗ್ ಕಾಮಗಾರಿ ಯೋಜನೆ ನನೆಗುದಿಗೆ ಬಿದ್ದಿತು.

ಅದೇ ವಿಧಾನಸಭಾ ಕ್ಷೇತ್ರದ (ರಾಜರಾಜೇಶ್ವರಿ
ನಗರ) ಲಗ್ಗೆರೆ ಮುಖ್ಯರಸ್ತೆಯ ಆಲದ ಮರ ವೃತ್ತದಿಂದ ಲಗ್ಗೆರೆ ಪೈಪ್ಲೈನ್ ತನಕ ವೈಟ್ಟಾಪಿಂಗ್ ಗೆ ಈ ಮೊತ್ತವನ್ನು ವರ್ಗಾಯಿಸಲು ಅವಕಾಶ ನೀಡುವಂತೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿತ್ತು. ‘ಕೂಲಂಕಷವಾಗಿ ಪರಿಶೀಲಿಸಿ ಪ್ರಸ್ತಾವನೆ ತಿರಸ್ಕರಿಸಲಾಗಿದೆ’ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.