ಬೆಂಗಳೂರು: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ‘ಮೈಸೂರು ಸರ್ಕ್ಯೂಟ್ ಪ್ರವಾಸ’ಕ್ಕಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಎರಡು ಹೊಸ ಎ.ಸಿ. ಡಿಲೆಕ್ಸ್ ಬಸ್‌ಗಳಿಗೆ ಶುಕ್ರವಾರ ಚಾಲನೆ ನೀಡಿದೆ.

‘ವಿಶ್ವ ಪ್ರವಾಸೋದ್ಯಮದ ದಿನಾಚರಣೆ’ ಅಂಗವಾಗಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮತ್ತು ಪ್ರಧಾನ ವ್ಯವಸ್ಥಾಪಕ (ಸಾರಿಗೆ) ಕೆ.ಎಸ್. ಶ್ರೀನಾಥ್ ಅವರು ಹೊಸ ಬಸ್‌ಗಳು ಸೇರಿದಂತೆ, ಮೈಸೂರು ಸರ್ಕ್ಯೂಟ್ ಪ್ರವಾಸಕ್ಕೆ ವಾಹನಗಳ ನಿಯೋಜನೆಗೆ ಹಸಿರು ನಿಶಾನೆ ತೋರಿದರು.

ಮೈಸೂರು ಸಾರಿಗೆ ವಿಭಾಗ, ಕೆಂಪೇಗೌಡ ಬುಕ್ಕಿಂಗ್ ಕೌಂಟರ್, ಕೆಎಸ್‌ಆರ್‌ಟಿಸಿ ಅವತಾರ್, ನಗರದ ಯಶವಂತಪುರದಲ್ಲಿರುವ ಪ್ರವಾಸೋದ್ಯಮ ನಿಗಮದ ಕೇಂದ್ರ ಕಚೇರಿ ಹಾಗೂ ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ‘ಮೈಸೂರು ಸರ್ಕ್ಯೂಟ್ ಪ್ರವಾಸ’ಕ್ಕೆ ಬುಕ್ಕಿಂಗ್ ಮಾಡಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಮಾಹಿತಿಗೆ, 080–43344334/35, 8970650070/8970650075ಗೆ ಸಂಪರ್ಕಿಸಬಹುದು. ಆನ್‌ಲೈನ್ ಬುಕ್ಕಿಂಗ್‌ಗಾಗಿ www.kstdc.co ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.