ಬೆಂಗಳೂರು: ಕಾರ್ಮೆಲ್ ರಾಮ್ ರೈಲು ನಿಲ್ದಾಣದ ಬಳಿಯ ಲೆವೆಲ್ ಕ್ರಾಸಿಂಗ್ ರಸ್ತೆ ವಿಸ್ತರಣೆ ಕಾಮಗಾರಿಗೆ ಸಂಸದ ಪಿ.ಸಿ.ಮೋಹನ್ ₹ 16 ಲಕ್ಷ ಅನುದಾನವನ್ನು ಸಂಸದರ ನಿಧಿಯಿಂದ ನೀಡಿದರು. ಗುರುವಾರ ಈ ನಿಧಿಯ ಚೆಕ್‌ನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್.ಎಸ್.ಸಕ್ಸೇನಾ ಅವರಿಗೆ ಹಸ್ತಾಂತರಿಸಿದರು.

ಈ ಕಾಮಗಾರಿಯನ್ನು ಡಿಸೆಂಬರ್ ಮೊದಲ ವಾರದಿಂದ ಆರಂಭಿಸುವು ದಾಗಿ ರೈಲ್ವೆ ಅಧಿಕಾರಿಗಳು ಭರವಸೆ ನೀಡಿದರು.

ಕಿರಿದಾಗಿದ್ದ ರೈಲ್ವೆ ಕ್ರಾಸಿಂಗ್‌ನಿಂದಾಗಿ ವರ್ತೂರು ಹೋಬಳಿ ಮತ್ತು ಸರ್ಜಾಪುರ ರಸ್ತೆ ಜನರು ಬಹಳ ಕಾಲದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈಸಮಸ್ಯೆ ನಿವಾರಣೆಗೆ ಆಗ್ರಹಿಸಿ ಸುತ್ತಮುತ್ತಲಿನ ಪ್ರದೇಶದ ಜನರು ತಿಂಗಳುಗಟ್ಟಲೆ ಪ್ರತಿಭಟನೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೈಗೊಂಡಿದ್ದರು. ಇದಕ್ಕೆ ಸ್ಪಂದಿಸಿದ್ದ ರೈಲ್ವೆ ಇಲಾಖೆ, ಜಾಗದ ಪೂರ್ಣ ಪರಿಶೀಲನೆ ನಡೆಸಿ, ಸುಮಾರು 16 ಲಕ್ಷ ವೆಚ್ಚದ ಕಾಮಗಾರಿಯ ನೀಲನಕ್ಷೆಯನ್ನು ಬಿಬಿಎಂಪಿಗೆ ನೀಡಿ ರಸ್ತೆ ವಿಸ್ತರಿಸುವಂತೆ ಹೇಳಿತ್ತು. ಆದರೆ, ಬಿಬಿಎ೦ಪಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.