ಬೀದರ್: ‘ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುವುದರ ಜತೆಗೆ ತಾಳ್ಮೆಯಿಂದ ವಾಹನ ಚಾಲನೆ ಮಾಡಬೇಕು. ಸಂಚಾರ ನಿಯಮಗಳ ಅರಿವು ಇದ್ದರೆ ಅಪಘಾತ ತಪ್ಪಿಸಲು ಸಾಧ್ಯವಾಗುತ್ತದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಹೇಳಿದರು.

ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವತಿಯಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಒಂದನೇ ಘಟಕದಲ್ಲಿ ಆಯೋಜಿಸಿದ್ದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಮಾನ್ಯವಾಗಿ ರಸ್ತೆಗಳು ಹಾಳಾಗಿದ್ದರೆ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಗುಣಮಟ್ಟದ ರಸ್ತೆಗಳಿದ್ದರೂ ಅಪಘಾತಗಳು ಸಂಭವಿಸಿದರೆ ಅದಕ್ಕೆ ನಿರ್ಲಕ್ಷ್ಯವೇ ಕಾರಣ ಎಂದು ಹೇಳಬೇಕಾಗುತ್ತದೆ’ ಎಂದು ತಿಳಿಸಿದರು.

‘ಭಿತ್ತಿಪತ್ರಗಳನ್ನು ವಾಹನ ಮತ್ತು ಗೋಡೆಗಳ ಮೇಲೆ ಅಂಟಿಸಿ, ಹಾಡು ಮತ್ತು ಘೋಷವಾಕ್ಯಗಳ ಪ್ರಚಾರದ ಮೂಲಕ ಜನರಲ್ಲಿ ಸಂಚಾರ ನಿಯಮಗಳ ಮೂಡಿಸಲಾಗುತ್ತಿದೆ. ಕಲಾ ತಂಡಗಳನ್ನು ಬಳಸಿಕೊಂಡು ಬೀದಿ ನಾಟಕಗಳ ಮೂಲಕವೂ ತಿಳಿವಳಿಕೆ ನೀಡಲಾಗುತ್ತಿದೆ’ ಎಂದು ಹೇಳಿದರು.

ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಆರ್.ಬಿ.ಜಾಧವ, ಬೀದರ್ ಒಂದನೇ ಘಟಕದ ವ್ಯವಸ್ಥಾಪಕ ವಿಠ್ಠಲರಾವ್ ಕಮದ್ ಇದ್ದರು.

ವೀರೇಂದ್ರ ಮೇತ್ರೆ ಸ್ವಾಗತಿಸಿದರು. ಬೀರಪ್ಪ ಪಾರುಪತ್ತೆ ನಿರೂಪಣೆ ಮಾಡಿದರು. ವಿಶ್ವನಾಥ ಎಂ ವಂದಿಸಿದರು.

ಮಾತೆ ಮಾಣಿಕೇಶ್ವರಿ ಪದವಿಪೂರ್ವ ಕಾಲೇಜು:
‘ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಿಂದ ಅಪಘಾತಗಳನ್ನು ತಡೆಯಬಹುದು’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಹೇಳಿದರು.

32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜು ಆಶ್ರಯದಲ್ಲಿ ನಗರದ ಮಾತೆ ಮಾಣಿಕೇಶ್ವರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಪ್ರತಿ ವರ್ಷ ಅಪಘಾತಗಳಲ್ಲಿ 1.30 ಲಕ್ಷ ಜನ ಮರಣ ಹೊಂದುತ್ತಿದ್ದಾರೆ’ ಎಂದು ತಿಳಿಸಿದರು.

‘ವಾಹನ ಸವಾರರು ಕಡ್ಡಾಯವಾಗಿ ಶೀಟ್ ಬೆಲ್ಟ್, ಹೆಲ್ಮೇಟ್ ಧರಿಸಬೇಕು. ವಾಹನ ಚಾಲನೆ ಪರವಾನಗಿ, ವಿಮೆ ಹಾಗೂ ಆರ್.ಸಿ ಬುಕ್ಗಳನ್ನು ಹೊಂದಿರಬೇಕು’ ಎಂದು ಹೇಳಿದರು.

‘ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಅರಿಯಬೇಕು. ಅರ್ಹರಾದವರು ಸುರಕ್ಷಿತವಾಗಿ ವಾಹನ ಓಡಿಸಬೇಕು. ದ್ವಿಚಕ್ರ ವಾಹನಗಳಲ್ಲಿ ಮೂವರು ಕುಳಿತು ಸಂಚರಿಸಬಾರದು’ ಎಂದು ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜು ನಿರ್ದೇಶಕ ಶ್ರೀಧರ ಎಸ್. ಸಲಹೆ ಮಾಡಿದರು.

ಪ್ರಾಚಾರ್ಯ ಪಿ.ಎಂ. ಚಂದ್ರಶೇಖರ, ಪ್ರಾದೇಶಿಕ ಸಾರಿಗೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ವೀರೇಂದ್ರ ಮೇತ್ರಿ, ವಿಶ್ವನಾಥ ಇದ್ದರು. ಕಾಲೇಜು ಆಡಳಿತಾಧಿಕಾರಿ ಲೋಕೇಶ ಉಡಬಾಳೆ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.