ಬೀದರ್: ಬೆಳಗಾವಿ ಜಿಲ್ಲೆಯ ಹಾರೂಗೇರಿಯ ಶರಣ ವಿಚಾರ ವಾಹಿನಿಯ ‘ಬಸವ ಭೂಮಿ ಯಾತ್ರೆ’ಯು ಅಕ್ಟೋಬರ್ 17 ರಂದು ನಗರದ ಬಸವಗಿರಿಗೆ ಆಗಮಿಸಲಿದೆ.

ಎರಡು ಸಾವಿರ ಶರಣ–ಶರಣೆಯರು ಯಾತ್ರೆಯಲ್ಲಿ ಬಂದು ಗುರುವಚನ ಪರುಷಕಟ್ಟೆಯ ದರ್ಶನ ಪಡೆದು ಸಾಮೂಹಿಕವಾಗಿ ವಚನ ಪಠಣಗೈದು ಭಕ್ತಿ ಸಮರ್ಪಿಸಲಿದ್ದಾರೆ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಿಳಿಸಿದ್ದಾರೆ.

ಎರಡೂವರೆ ದಶಕಗಳಿಂದ ಐ.ಆರ್. ಮಠಪತಿ ನೇತೃತ್ವದಲ್ಲಿ ಶರಣ ಬಂಧುಗಳು ವಚನ ಸಂಕ್ರಾಂತಿ, ವಚನ ಚೈತ್ರ, ವಚನ ಆಷಾಢ ಮುಂತಾದ ಕಾರ್ಯಕ್ರಮಗಳನ್ನು ಮನೆ-ಮನೆಗಳಲ್ಲಿ ಏರ್ಪಡಿಸಿ, ವರ್ಷದ ಕೊನೆಗೆ ಬಸವ ಭೂಮಿಯ ದರ್ಶನಕ್ಕೆ ಯಾತ್ರೆಯಲ್ಲಿ ಆಗಮಿಸುತ್ತಿದ್ದಾರೆ. ಈ ಸಲ ಬಸವ ಭೂಮಿ ಯಾತ್ರೆಗೆ ಬೆಳ್ಳಿ ಹಬ್ಬದ ಸಂಭ್ರಮ ಎಂದು ಹೇಳಿದ್ದಾರೆ.

ಬಸವ ಭೂಮಿ ಯಾತ್ರೆ ಸ್ವಾಗತಿಸಲು ಸ್ವಾಗತ ಸಮಿತಿ ರಚಿಸಲಾಗಿದೆ. ಅಶೋಕ ಎಲಿ, ಸಿ.ಎಸ್. ಪಾಟೀಲ, ಬಸವರಾಜ ಶೇರಿಕಾರ, ಸಿ. ಎಸ್.ಗಣಾಚಾರಿ, ಚಂದ್ರಕಾಂತ ಹೆಬ್ಬಾಳೆ, ಜಯರಾಜ ಖಂಡ್ರೆ, ವಿವೇಕಾನಂದ ಧನ್ನೂರ, ಹಾವಯ್ಯ ಸ್ವಾಮಿ, ಅಣವೀರ ಕೂಡಂಬಲ, ನೀಲಮ್ಮ ರೂಗನ್, ನಿರ್ಮಲಾ ಮಸೂದೆ, ಸುಮಾ ಭೂಶೆಟ್ಟಿ, ರಾಜಕುಮಾರ ಪಾಟೀಲ, ಪ್ರಕಾಶ ಮಠಪತಿ, ಆರ.ಕೆ. ಪಾಟೀಲ, ರಾಜು ಸ್ವಾಮಿ ಅಭೀಷೆಕ ಮಠಪತಿ, ಓಂ ಪಾಟೀಲ ಸಮಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.