ಬೀದರ್: ‘ಕಲ್ಯಾಣ ಕರ್ನಾಟಕ ಉತ್ಸವ ದಿನಾಚಾರಣೆಯಂದು ಕಲಬುರಗಿಯಲ್ಲಿ ನಡೆಸಿದ ಸಚಿವ ಸಂಪುಟ ಸಭೆ ಕೇವಲ ತೋರಿಕೆಗೆ ಸೀಮಿತವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೆಚ್ಚಿಸುವ, ಸಂತೋಷಪಡಿಸುವ ಸಂಪುಟ ಸಭೆ ಎಂದರೆ ತಪ್ಪಾಗಲಾರದು’ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ.

ಜನರ ಕೋಟ್ಯಂತರ ರೂಪಾಯಿ ಈ ಸಂಪುಟ ಸಭೆಗೆ ಖರ್ಚಾಗಿದೆ. ಹೀಗಿದ್ದರೂ ನಿರರ್ಥಕವಾಗಿದೆ. ಸಂಪುಟ ಸಭೆಯಲ್ಲಿ ಹೇಳಿಕೊಳ್ಳುವ ನಿರ್ಣಯಗಳನ್ನು ತೆಗೆದುಕೊಂಡಿಲ್ಲ. ಬೀದರ್ ಜಿಲ್ಲೆ ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಕಲ್ಯಾಣ ಕರ್ನಾಟಕದ ಜನರಿಗೆ ದಿಶಾಭೂಲ್ ಮಾಡುವ ಇಂತಹ ಸಚಿವ ಸಂಪುಟ ಸಭೆ ನಡೆಸುವ ಅವಶ್ಯಕತೆ ಇರಲಿಲ್ಲ ಎಂದು ಬುಧವಾರ ಪ್ರತಿಕ್ರಿಯಿಸಿದ್ದಾರೆ.

ಬೀದರ್ ಲೋಕಸಭಾ ಕ್ಷೇತ್ರದ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಕಳೆದ 16 ತಿಂಗಳಲ್ಲಿ ಎರಡ್ಮೂರು ಸಲ ಮುಖ್ಯಮಂತ್ರಿಗೆ ಭೇಟಿ ಮಾಡಿ ಅವರ ಗಮನಕ್ಕೆ ತಂದಿದ್ದೆ. ಇದರ ಜೊತೆಗೆ 3 ದಿನಗಳ ಹಿಂದೆಯೂ ಸಿ.ಎಂಗೆ ಪತ್ರ ಬರೆದು ನೆನಪಿಸಿದ್ದೆ. ಆದರೆ, ಒಂದೇ ಒಂದು ಅಭಿವೃದ್ದಿ ಕಾಮಗಾರಿಗೆ ಅನುದಾನ ನೀಡಿಲ್ಲ. ಇದು ನಾಚಿಕೆಗೇಡು. ಅಭಿವೃದ್ಧಿ ಬಗ್ಗೆ ಆಸಕ್ತಿಯಿಲ್ಲದ ಸರ್ಕಾರ ಇದ್ದೂ ಸತ್ತಂತೆ ಎಂದು ಕಿಡಿಕಾರಿದ್ಧಾರೆ.

ಬಿಜೆಪಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ನಿರ್ಣಯ ಸ್ವಾಗತಾರ್ಹ. ಆದರೆ, ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿಯಿದ್ಧಾಗ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, ಕಾಮಗಾರಿ ಪ್ರಾರಂಭವೇ ಆಗಿರಲಿಲ್ಲ. ಈಗಲಾದರೂ ಪ್ರಾರಂಭವಾಗಲಿ. ಈಗಲಾದರೂ ಹೇಳಿಕೆಗೆ ಸೀಮಿತವಾಗದೆ ಇದ್ದರೆ ಸಾಕು ಎಂದಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಮಂಜೂರಾಗಿ ಟೆಂಡರ್ ಪ್ರಕ್ರಿಯೆಗೆ ಆಡಳಿತಾತ್ಮಕ ಅನುಮೋದನೆಗೊಂಡಿದ್ದ ಕ್ಷೇತ್ರದ ₹1,500 ಕೋಟಿಯ ನೀರಾವರಿ ಯೋಜನೆಗಳಿಗೆ ಕಾಂಗ್ರೆಸ್ ಒಂದು ರೂಪಾಯಿಯೂ ಮೀಸಲಿಟ್ಟಿಲ್ಲ. ಈ ನೀರಾವರಿ ಯೋಜನೆಗಳ ₹1500 ಕೋಟಿ ರೂಪಾಯಿ ನುಂಗಿ, ಕೇವಲ ₹100 ಕೋಟಿ ಕೃಷಿಗೆ ಮೀಸಲಿಟ್ಟಿದ್ದು ರೈತರಿಗೆ ಮಾಡಿರುವ ಅವಮಾನ ಮತ್ತು ಅನ್ಯಾಯ ಎಂದು ಟೀಕಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳು ಹೇಳಿದ್ದಾರೆ. ಬೀದರ್ ಜಿಲ್ಲೆಗೆ ಸೋಲಾರ್ ಯೋಜನೆಗಳು, ಸಿಪೇಟ್ ಕಾಲೇಜು, ಬೀದರ್ -ನಾಂದೇಡ್ ಹೊಸ ರೈಲು ಮಾರ್ಗ ಮುಂತಾದ ಯೋಜನೆಗಳಿಗೆ ಮಂಜೂರಾತಿ ನೀಡಿದ್ದು ಕೇಂದ್ರ ಸರ್ಕಾರ. ಆದರೆ, ಈ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡದೆ ಅನ್ಯಾಯ ಮಾಡುತ್ತಿದೆ. ವಿನಾಕಾರಣ ಕೇಂದ್ರದ ಕಡೆಗೆ ಬೊಟ್ಟು ಮಾಡುವುದು ರಾಜ್ಯ ಸರ್ಕಾರ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಗೆ ಸಂಪೂರ್ಣ ಅನ್ಯಾಯವಾಗಿದೆ. ಬೀದರ್ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಬಿ. ಖಂಡ್ರೆಯವರು ಸಂಪೂರ್ಣ ವಿಫಲರಾಗಿದ್ದಾರೆ. ಮಾನ ಮರ್ಯಾದೆ, ನಾಚಿಕೆಯೆನ್ನುವುದು ಇದ್ದರೆ ಜಿಲ್ಲೆಯಿಂದ ಸಂಪುಟ ಸಚಿವರಾಗಿರುವ ಈಶ್ವರ ಬಿ. ಖಂಡ್ರೆ ಹಾಗೂ ರಹೀಂ ಖಾನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಬ್ಬರೂ ಸಚಿವರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೀಮಿತರಾಗಿದ್ದಾರೆ. ಅಭಿವೃದ್ದಿ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಯಾವ ಪುರುಷಾರ್ಥಕ್ಕೆ ಸಚಿವರಾಗಿದ್ಧಾರೋ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.