ಬೀದರ್: ಔರಾದ್ ಕ್ಷೇತ್ರದ ಶಾಸಕ ಪ್ರಭು ಚವಾಣ್ ಅವರು ಗುರುವಾರ ನಗರ ಹೊರವಲಯದ ನರಸಿಂಹ ಝರಣಿ ಸಮೀಪದ ವಿಷ್ಣು ಪ್ರಿಯಾ ಗೋಶಾಲೆಗೆ ಭೇಟಿ ನೀಡಿದರು.

ಗೋಮಾತೆಗೆ ಪೂಜೆ ಸಲ್ಲಿಸಿ, ಗೋವುಗಳ ಪಾಲನೆ, ಪೋಷಣೆ ಕುರಿತು ಗೋಶಾಲೆಯವರಿಂದ ಮಾಹಿತಿ ಪಡೆದರು.

‘ಬೀಡಾಡಿ ದನಗಳ ಸಂರಕ್ಷಣೆಗೆ ಸರ್ಕಾರ ಹೆಚ್ಚು ಒತ್ತು ಕೊಡಬೇಕು. ಸಮಾಜ ಸೇವಕ ಸಾಗರ್ ಪಾಠಕ್ ಅವರು ಅನೇಕ ವರ್ಷಗಳಿಂದ ಬೀಡಾಡಿ ಜಾನುವಾರಗಳನ್ನು ರಕ್ಷಿಸಿ ಉಪಾಚಾರ ಮಾಡುತ್ತಿದ್ದಾರೆ. ಸರ್ಕಾರ ಅವರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು’ ಎಂದು ಚವಾಣ್ ಒತ್ತಾಯಿಸಿದರು.

ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಮಾಧ್ಯಮ ಜಿಲ್ಲಾ ಸಹ ವಕ್ತಾರ ಗುರುನಾಥ ರಾಜಗೀರಾ, ಶಿವರಾಜ ಅಲಮಾಜೆ, ರಾಮಶೆಟ್ಟಿ ಪನ್ನಾಳೆ, ವೀರೇಶ ಸ್ವಾಮಿ, ಸನ್ನಿ ಪಾಟೀಲ, ಸೈನಾಥ ಮಂಗಲಗಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.