ಬೀದರ್: ನಗರದ ವಿವಿಧೆಡೆ ಬುಧವಾರ ಹಾಗೂ ಗುರುವಾರ ನವರಾತ್ರಿ ಉತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಿದವು. ಅದರ ವಿವರ ಇಂತಿದೆ.

ಬಿ.ವಿ. ಭೂಮರಡ್ಡಿ ಕಾಲೇಜು:

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಉತ್ಸಾಹದಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಾಂಶುಪಾಲ ಪಿ. ವಿಠ್ಠಲ ರಡ್ಡಿ ಮಾತನಾಡಿ, ಭಾರತದಲ್ಲಿ ಏಕತೆ ಮೂಡಿಸಲು ಭಾರತದ ಪ್ರಾಚೀನ ನಾಟ್ಯಗಳಾದ ಭರತ ನಾಟ್ಯ, ಕುಚಿಪುಡಿ, ಕಥಕ್ಕಳಿ, ಗರ್ಬಾ, ಯಕ್ಷಗಾನ, ದಾಂಡಿಯಾ ಪ್ರಮುಖ ಪಾತ್ರ ವಹಿಸಿವೆ. ದಾಂಡಿಯಾ ನೃತ್ಯ ದಸರಾ ಹಬ್ಬದ ಸಂದರ್ಭದಲ್ಲಿ ಏರ್ಪಡಿಸುವುದರಿಂದ ಸಮಾಜದಲ್ಲಿ ಸದ್ಬಾವನೆ, ಸಹನೆ, ತಾಳ್ಮೆ, ಐಕ್ಯತೆ ಮೂಡುತ್ತದೆ ಎಂದು ಹೇಳಿದರು.

ಅಂಜನಾ ವಾಲಿ ಅವರು ಭವಾನಿ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಉಪ ಪ್ರಾಂಶುಪಾಲ ಅನೀಲಕುಮಾರ ಅಣದೂರೆ, ಬಸವೇಶ್ವರ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಕನ್ನಕಟ್ಟೆ, ನ್ಯಾಷನಲ್ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆ ಪ್ರಾಂಶುಪಾಲ ಶ್ರೀಲತಾ ಸ್ವಾಮಿ, ಶರಣಬಸವೇಶ್ವರ ಅಭ್ಯಾಸಾರ್ಥ ಪ್ರೌಢಶಾಲೆ ಮುಖ್ಯ ಶಿಕ್ಷಕ ಶೀಲಾ, ಸಂಯೋಜಕ ಶಿವಲೀಲಾ ವೀರಯ್ಯ ಹಾಜರಿದ್ದರು. ರೇಣುಕಾ ಎಂ. ಸ್ವಾಮಿ ಪ್ರಾರ್ಥನೆ ಗೀತೆ ಹಾಡಿದರೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದೀಪಾ ರಾಗ ಸ್ವಾಗತಿಸಿದರು. ಸೂರ್ಯವಂಶಿ ಪೂಜಾ ನಿರೂಪಿಸಿದರು. ಸುಜಾತ ಹಿಪ್ಪರಗಿ ವಂದಿಸಿದರು.

ಶಿವಾಜಿನಗರ ಗೆಳೆಯರ ಬಳಗದ:

ಇಲ್ಲಿನ ಶಿವಾಜಿನಗರ ಗೆಳೆಯರ ಬಳಗದಿಂದ ಶಿವಾಜಿನಗರದಲ್ಲಿ ಜೈ ಭವಾನಿ ಮಾತೆ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು. ಮಹಿಳೆಯರ ದಾಂಡಿಯಾ ನೃತ್ಯ ಗಮನ ಸೆಳೆಯಿತು.

ಆದಿಶಕ್ತಿ ಭವಾನಿ ಮಾತೆಯ ಆರಾಧನೆಯಿಂದ ಬದುಕು ಸಮೃದ್ಧವಾಗಲಿ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಹಾರೈಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ, ಶಿವಾಜಿನಗರ ಗೆಳೆಯರ ಬಳಗದ ಅಧ್ಯಕ್ಷ ಸಂಜೀವಕುಮಾರ ಪಾಟೀಲ, ಪ್ರಮುಖರಾದ ಸಾಧುಘಾಟ ಪಾಂಡುರಂಗ ಮಹಾರಾಜ, ಬಕ್ಕಪ್ಪ ನಾಗೂರೆ, ವಿಧವೀರ ನಿಣ್ಣೇಕರ್, ಅಶೋಕ ಧೋಮಲ್, ಸಂಗಪ್ಪ ಜಮಕೂರೆ, ಪರ್ವತ ರೆಡ್ಡಿ, ಸಂಜೀವಕುಮಾರ ಮರಪಳ್ಳಿ, ವಿಜಯಕುಮಾರ್ ಲಕಶೆಟ್ಟಿ, ಬಿ.ಕೆ.ಚೌಧರಿ, ಬಾಜಿರಾವ ಪಾಟೀಲ, ವೀರಶೆಟ್ಟಿ ದೇಶಮುಖ, ಸಂತೋಷ ಜೋಳದಾಪಕೆ ಮತ್ತಿತರರು ಹಾಜರಿದ್ದರು.

ಬಸವ ಸೇವಾ ಪ್ರತಿಷ್ಠಾನ:

ನಗರದ ಶರಣ ಉದ್ಯಾನದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜಮತಿ ಪ್ರಭು ಗಂಗು ಮಾತನಾಡಿ, ಅನೇಕ ಚಳವಳಿಗಳಲ್ಲಿ ಅತ್ಯಂತ ಮಹತ್ವದ್ದು ವಚನ ಚಳವಳಿ. ಮೂಢನಂಬಿಕೆ, ಕಂದಾಚಾರ, ಅಜ್ಞಾನ ಹೊಡೆದೊಡಿಸಿ ಸುಜ್ಞಾನದ ಕಡೆಗೆ ಕೊಂಡೊಯ್ದಿತ್ತು ಎಂದು ಹೇಳಿದರು.

ಶಶಿಕಲಾ ನವಾಡೆ, ವಿಜಯಲಕ್ಷ್ಮಿ ಮೂಲಗೆ, ಲಕ್ಷ್ಮಿಬಾಯಿ ಕೊಡಗ, ಗೀತಾ ಪಾಟೀಲ, ಪದ್ಮಜಾ ಮೊಗಶೆಟ್ಟಿ, ಸೂಗಮ್ಮ ಹಿಪ್ಪಳಗಾಂವ್, ಪ್ರಭಾವತಿ ಬಿರಾದಾರ, ಪದ್ಮಾವತಿ, ವಿಮಲ ಪಾಟೀಲ, ಸುರೇಖಾ ಬಿರಾದಾರ, ವಚನಶ್ರೀ ಹಾಜರಿದ್ದರು.

‘ಒಂದೇ ದಿನ ಹಬ್ಬ ಆಚರಿಸಿ’

‘ದಸರಾ ಹಬ್ಬವನ್ನು ಶನಿವಾರದಂದೇ (ಅ.12) ಎಲ್ಲರೂ ಆಚರಿಸಬೇಕು. ಗೊಂದಲಕ್ಕೆ ಒಳಗಾಗಿ ಎರಡು ದಿನ ಹಬ್ಬ ಆಚರಿಸಬಾರದು. ಜಿಲ್ಲೆಯ ವಿವಿಧ ಸಮಾಜದವರೊಂದಿಗೆ ಸಭೆ ನಡೆಸಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮುಖಂಡರಾದ ನಂದಕಿಶೋರ ವರ್ಮಾ ಸೂರ್ಯಕಾಂತ ಶೆಟಕಾರ ಸೋಮಶೇಖರ ಪಾಟೀಲ ಗಾದಗಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.