ಬೀದರ್: ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ನುಡಿದರು.

ನಗರದ ಭಾರತ ಕುಟುಂಬ ಯೋಜನಾ ಸಂಘ (ಎಫ್ಪಿಎಐ)ದ ಕಚೇರಿಯಲ್ಲಿ ನಡೆದ ಸಂಘದ 72ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ವಿಶ್ವದಲ್ಲೇ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಜನಸಂಖ್ಯಾ ಹೆಚ್ಚಳ ಪ್ರಗತಿಗೆ ಧಕ್ಕೆ ಉಂಟು ಮಾಡಲಿದೆ ಎಂದು ತಿಳಿಸಿದರು.

ಎಫ್ಪಿಎಐ ಜನಸಂಖ್ಯಾ ನಿಯಂತ್ರಣಕ್ಕೆ ಪೂರಕವಾಗಿ ಗ್ರಾಮೀಣ, ಹಿಂದುಳಿದ ಹಾಗೂ ಬಡ ಜನರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದರು.

ಸಂಘದ ಸ್ಥಳೀಯ ಶಾಖೆ ಅಧ್ಯಕ್ಷ ಡಾ. ಆರತಿ ರಘು ಮಾತನಾಡಿ, ಬರುವ ದಿನಗಳಲ್ಲಿ ಸಂಘ ಇನ್ನಷ್ಟು ಉತ್ತಮ ರೀತಿಯಲ್ಲಿ ವಿವಿಧ ಸೇವೆಗಳನ್ನು ಒದಗಿಸಲು ಶ್ರಮಿಸಲಿದೆ ಎಂದು ತಿಳಿಸಿದರು.

ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮಾತನಾಡಿ, ಸಂಘ ನಾಲ್ಕು ದಶಕಗಳಿಂದ ತಾಯಿ-ಮಕ್ಕಳ ಆರೋಗ್ಯ ಸೇವೆ, ಕುಟುಂಬ ಯೋಜನೆ, ಏಡ್ಸ್ ನಿಯಂತ್ರಣ ಸೇವೆಗಳಿಗೆ ಆದ್ಯತೆ ನೀಡಿದೆ ಎಂದು ಹೇಳಿದರು.

ಸಂಘದ ಮಾಜಿ ಅಧ್ಯಕ್ಷೆ ಡಾ. ವಿಜಯಶ್ರೀ ಬಶೆಟ್ಟಿ ಮಾತನಾಡಿದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಗೌರವ ಖಜಾಂಚಿ ಡಾ. ಸವಿತಾ ಚಾಕೋತೆ, ಡಾ. ಸುಭಾಷ ಬಶೆಟ್ಟಿ, ಡಾ, ನಾಗೇಶ ಪಾಟೀಲ, ಶರಣಪ್ಪ ಸಿಕೇನಪುರ, ಡಾ. ರಾಜಶೇಖರ ಲಕ್ಕಶೆಟ್ಟಿ ಇದ್ದರು.

ಸಂಘದ ಗೌರವ ಕಾರ್ಯದರ್ಶಿ ಅಂಬುಜಾ ವಿಶ್ವಕರ್ಮ ಸ್ವಾಗತಿಸಿದರು. ಗೌರವ ಖಜಾಂಚಿ ಡ. ವಿಜಯ ಕೊಂಡಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.