ಕಮಲನಗರ: ಗ್ರಾಮೀಣ ಭಾಗದ ಜನರು ಆರೋಗ್ಯದಿಂದ ಇರಲು ಶೌಚಾಲಯಗಳನ್ನು ತಪ್ಪದೇ ಬಳಸಬೇಕು. ಹೊರಗಡೆ ಮಲಮೂತ್ರ ವಿಸರ್ಜನೆ ಮಾಡಬಾರದು. ಇದರಿಂದ ಅಲ್ಲಿ ಸೊಳ್ಳೆಗಳು ಸಂಚರಿಸುತ್ತವೆ. ಅದೇ ಸೊಳ್ಳೆಗಳು ತಮಗೆ ಕಚ್ಚಿದ್ದರೆ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬಿರುತ್ತದೆ ಪಿಡಿಒ ದತ್ತಾತ್ರಿ ಪೂಜಾರಿ ಎಂದು ಹೇಳಿದರು.

ಕಮಲನಗರ ತಾಲ್ಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ‘ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಯಾರ ಬಳಿ ಶೌಚಾಲಯ ವ್ಯವಸ್ಥೆ ಇಲ್ಲವೋ ಅವರು ಸರ್ಕಾರದ ಯೋಜನೆಗಳ ಲಾಭ ಪಡೆದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದರು.

ಆಂದೋಲನದಲ್ಲಿ ಶಾಲಾ ಮಕ್ಕಳಿಗೆ ಹಾಗೂ ಮನೆ ಮನೆಗೆ ತೆರಳಿ ಶೌಚಾಲಯ ಬಳಕೆ, ಸ್ವಚ್ಛತೆಯ ಕುರಿತು ಅರಿವು ಮೂಡಿಸಿದರು.

ಗ್ರಾ.ಪಂ.ಅಧ್ಯಕ್ಷ ತುಳಸಿರಾಮ, ಅಮರ ಕೋಟೆ, ಸಂಯೋಜಕರಾದ ಸಂಪತ್, ಸವಿತಾ ನಾಗೇಶ, ಸಿಬ್ಬಂದಿ ನಾಗರಾಜ, ಸಾಯಿ, ಉತ್ತಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.