ಬೀದರ್: ಮೂರು ದಿನಗಳ ರಾಜ್ಯದ 15ನೇ ಅಂತರ ತೋಟಗಾರಿಕೆ ಕಾಲೇಜುಗಳ ಯುವ ಜನೋತ್ಸವ ‘ಕಲಾಬಿದರಿ ಸಂಗಮ–2024’ಕ್ಕೆ ಗುರುವಾರ ನಗರದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಒಂಬತ್ತು ಕಾಲೇಜುಗಳ ಡೀನ್, ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಜಾನಪದ ಕಲಾವಿದರೂ ಆದ ಚಿತ್ರನಟ ಗುರುರಾಜ ಹೊಸಕೋಟೆ ಅವರು ದೀಪ ಬೆಳಗಿಸಿ, ಡೊಳ್ಳು ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿದರು.

‘ನಾವು ನಾವಾಗಿ ಇರಲು ಪ್ರಯತ್ನಿಸಬೇಕು. ಬೇರೆಯವರಾಗಿ ಇರಬಾರದು. ನಮ್ಮ ಪರಿಶ್ರಮದಿಂದ ನಾವು ಮೇಲೆ ಬರಬೇಕು. ಗೆದ್ದಾಗ ಬೀಗಬಾರದು, ಸೋತಾಗ ಕುಗ್ಗಬಾರದು. ಎಲ್ಲವನ್ನೂ ಸಮನಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದು ತಿಳಿಸಿದರು.

ಜಾನಪದ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಕಲೆ. ನಮಗೆ ಗೊತ್ತಾಗದೇ ಇರುವುದನ್ನು ಪ್ರೀತಿಸುವುದರಲ್ಲಿ ಅರ್ಥವಿಲ್ಲ. ಹೀಗಾಗಿಯೇ ಜಾನಪದ ಜನರ ಮಧ್ಯೆ ಉಳಿದುಕೊಂಡಿದೆ. ಯುವತಲೆಮಾರು ಅದನ್ನು ಇನ್ನಷ್ಟು ಉಳಿಸಿ, ಬೆಳೆಸಬೇಕು ಎಂದು ಹೇಳಿದರು.

ನಾನು ಮೂಲತಃ ಬಾಗಲಕೋಟೆಯ ಮಹಾಲಿಂಗಪುರದವನು. 40 ವರ್ಷಗಳಿಂದ ಬೆಂಗಳೂರಿನಲ್ಲಿರುವೆ. ಆದರೆ, ನಾನು ಬದಲಾಗಿಲ್ಲ. ಮನೆ ಭಾಷೆ, ತಾಯಿ ಭಾಷೆ ಎಂದೂ ಮರೆಯಬಾರದು. ನನ್ನ ಮೂಲ ಬಿಟ್ಟು ಬೇರೆ ಕಡೆಯವನಂತೆ ವರ್ತಿಸಬಾರದು. ನಮ್ಮತನ ಎಂದೂ ಬಿಟ್ಟು ಕೊಡಬಾರದು. ಜಾನಪದವೂ ಹಾಗೆಯೇ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಲಲಿತ ಕಲೆಗಳು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ. ವಿದ್ಯೆಯ ಜೊತೆಗೆ ಸೃಜನಶೀಲ ಚಟುವಟಿಕೆ ಅಗತ್ಯ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅನೇಕ ತಾಂತ್ರಿಕ ವಿಷಯಗಳನ್ನು, ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ. ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗ ಹುಡುಕುತ್ತೇವೆ ಎಂದರು.

ಇಷ್ಟೇ ಅಲ್ಲ, ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗುತ್ತೇವೆ. ಸಾರ್ವಜನಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕಲಿಯುತ್ತೇವೆ. ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಸಾಕಷ್ಟು ಗೊತ್ತಿರದ ಸಂಗತಿಗಳು ಗೊತ್ತಾಗುತ್ತವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ್ ಮಾತನಾಡಿ, ಇಂದಿನ ದಿನಮಾನಗಳಿಗೆ ಅಗತ್ಯವಾದ ಜೀವನಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳು ಕಲಿಸುವುದು ಬಹಳ ಮುಖ್ಯ. ಜೊತೆಗೆ ಸಾಮಾಜಿಕ ಜ್ಞಾನವೂ ಬೇಕು. ಅದಕ್ಕಾಗಿ ಇಂಥ ಯುವಜನೋತ್ಸವ ಸಹಕಾರಿಯಾಗುತ್ತದೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ., ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ವಿಶ್ವನಾಥ ಜಿಳ್ಳೆ, ಅರಭಾವಿ ತೋಟಗಾರಿಕೆ ಕಾಲೇಜಿನ ಡೀನ್ ಮಲ್ಲಿಕಾರ್ಜುನ, ಕೊಪ್ಪಳದ ಮುನಿರಾಬಾದ್ ಕಾಲೇಜಿನ ಡೀನ್ ಡಾ. ತಮ್ಮಯ್ಯ, ಹಣ್ಣು ವಿಜ್ಞಾನಿ ಜೆ.ಎಸ್.ಪಿ. ಸ್ವಾಮಿ, ಬಾಗಲಕೋಟೆ ವಿ.ವಿ. ಡೀನ್ ಬಾಲಾಜಿ ಕುಲಕರ್ಣಿ, ಕೋಲಾರ ಕಾಲೇಜಿನ ಡೀನ್ ಡಾ. ವೆಂಕಟೇಶನ್, ಶಿರಸಿ ಕಾಲೇಜಿನ ಡೀನ್ ಡಾ. ಹಂಚಿನಮನಿ ಹಾಜರಿದ್ದರು.

ಬಾಗಲಕೋಟೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ರಾಮಚಂದ್ರ ನಾಯ್ಕ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಬೀದರ್ ತೋಟಗಾರಿಕೆ ಕಾಲೇಜಿನ ಡೀನ್ ಡಾ.ಎಸ್.ವಿ. ಪಾಟೀಲ ಸ್ವಾಗತಿಸಿದರು. ಪ್ರೊ. ಪ್ರಸನ್ನ, ಪ್ರೊ. ಶಶಿಕಲಾ ನಿರೂಪಿಸಿದರೆ, ಪ್ರೊ. ವಿಜಯಮಹಾಂತೇಶ ವಂದಿಸಿದರು.

ಸಂದೇಶ ಸಾರಿದ ಮೆರವಣಿಗೆ

ಯುವಜನೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಚನ್ನಬಸವ ಪಟ್ಟದ್ದೇವರು ರಂಗಮಂದಿರದ ವರೆಗೆ ಮೆರವಣಿಗೆ ನಡೆಯಿತು. ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ್ ಮೆರವಣಿಗೆಗೆ ಚಾಲನೆ ನೀಡಿದರು.

ಬಸವಣ್ಣ, ಅಕ್ಕಮಹಾದೇವಿ ಹಾಗೂ ಇತರೆ ಶಿವಶರಣರ ವೇಷಧಾರಿಗಳು, ಯಕ್ಷಗಾನ ಕಲಾವಿದರ ಪೋಷಾಕು ತೊಟ್ಟು ವಿದ್ಯಾರ್ಥಿಗಳು ಗಮನ ಸೆಳೆದರು. ಇನ್ನೂ, ಶಿವಶರಣರ ವಚನಗಳು, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತ ಜಾಗೃತಿ ಮೂಡಿಸಿದರು. ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ನಲಿದಾಡಿದರು. ಮೈಮರೆತು ಹೆಜ್ಜೆ ಹಾಕಿದರು.

ಪ್ರತಿ ಕಾಲೇಜಿನ 25 ವಿದ್ಯಾರ್ಥಿಗಳು

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಒಂಬತ್ತು ಕಾಲೇಜುಗಳ ತಲಾ 25 ವಿದ್ಯಾರ್ಥಿಗಳು ಹಾಗೂ ಅವರೊಂದಿಗೆ 7ರಿಂದ 8 ಜನ ಕಲಾವಿದರು ಯುವಜನೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಮೂರು ದಿನಗಳ ಅವಧಿಯಲ್ಲಿ ಒಟ್ಟು 18 ವಿವಿಧ ಸ್ಪರ್ಧೆಗಳು ನಡೆಯಲಿವೆ. ನಾಟಕ, ಸಮೂಹ ನೃತ್ಯ, ಏಕಪಾತ್ರಭಿನಯ, ಮೂಕಾಭಿನಯ, ಸಂಗೀತ, ಜಾನಪದ ಸಂಗೀತ ಹಾಗೂ ನೃತ್ಯ, ಚಿತ್ರಕಲೆ, ಪೋಸ್ಟರ್ ತಯಾರಿಕೆ, ರಂಗೋಲಿ ಬಿಡಿಸುವುದು, ಸಾಹಿತ್ಯಿಕ ಚಟುವಟಿಕೆಗಳು ಸೇರಿವೆ.

ಮೊದಲ ದಿನ ಏಕ ವ್ಯಕ್ತಿ ಗಾಯನ, ಜಾನಪದ ಹಾಡು, ಸಮೂಹ ದೇಶಭಕ್ತಿ ಗೀತಗಾಯನ ಸ್ಪರ್ಧೆಗಳು ನಡೆದವು.

ಮೆರವಣಿಗೆಯಲ್ಲಿ ಕೊಪ್ಪಳ ಪ್ರಥಮ

ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆದ ಕೊಪ್ಪಳದ ಮುನಿರಾಬಾದ್ ತೋಟಗಾರಿಕೆ ಕಾಲೇಜಿನ ತಂಡಕ್ಕೆ ಪ್ರಥಮ ಬಹುಮಾನ ಸಂದಿದೆ.

ಶಿರಸಿ, ಬೆಂಗಳೂರು, ದೇವಿಹೊಸೂರ ಮತ್ತು ಕೋಲಾರ ಕಾಲೇಜಿನ ತಂಡಗಳು ಕ್ರಮವಾಗಿ ನಂತರದ ಸ್ಥಾನಗಳು ಪಡೆದಿವೆ.

ಇನ್ನು, ರಸಪ್ರಶ್ನೆಯ ಮೊದಲ ಸುತ್ತಿನಲ್ಲಿ ಬಾಗಲಕೋಟೆ ಪ್ರಥಮ, ಅರಭಾವಿ, ಬೀದರ್ ಹಾಗೂ ಕೊಪ್ಪಳ ಕಾಲೇಜು ತಂಡ ನಮತರದ ಸ್ಥಾನ ಗಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.