ಹುಮನಾಬಾದ್: ಕನ್ನಡದ ಮೊದಲ ಗದ್ಯಗ್ರಂಥ `ವಡ್ಡಾರಾಧನೆ~ ಗ್ರಂಥ ಬ್ರಾಜಿಷ್ಣು ಬರೆದ ವಿಷಯವನ್ನು ಹೈದರಾಬಾದ್ ಕರ್ನಾಟಕ ಜನತೆ ಅಭಿಮಾನದಿಂದ ಹೇಳಿಕೊಳ್ಳಬೇಕು ಎಂದು ಹುಮನಾಬಾದ್ ತಾಲ್ಲೂಕು ತೃತೀಯ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ.ಮಾಣಿಕರಾವ ಧನಾಶ್ರೀ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹಳ್ಳಿಖೇಡ(ಬಿ)ದಲ್ಲಿ ಸೋಮವಾರ ತಮ್ಮ ಸರ್ವಾಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯಕ್ಕೆ ಮೊದಲ ಗದ್ಯಗ್ರಂಥ ನೀಡಿದ ಹಳ್ಳಿಖೇಡ(ಬಿ)ದಲ್ಲಿ ಇಂದು ತಾಲ್ಲೂಕು ಮಟ್ಟದ ಮೂರನೇ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಅಭಿಮಾನ ಮತ್ತು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಗ್ರಂಥ ರಚನೆಯಾದ ಊರು ಮತ್ತು ಕತೃವಿನ ಬಗ್ಗೆ ಇರುವ ಗೊಂದಲಕ್ಕೆ ಡಾ. ಹಂಪಾ ನಾಗರಾಜಯ್ಯ ತಮ್ಮ ಸಂಶೋಧನಾ ಗ್ರಂಥದ ಮೂಲಕ ಸಾಹಿತ್ಯ ಸಾರಸ್ವತ ಲೋಕಕ್ಕೆ ತಿಳಿಸಿಕೊಟ್ಟಿದ್ದಾರೆ. ಹಿರಿಯ ಬರಹಗಾರ ಹಾಗೂ ವಿಮರ್ಶಕ ಡಾ.ಎಂ.ಎಂ.ಕಲ್ಬುರ್ಗಿ ಕೂಡಾ ಕೃತಿಯನ್ನು ಈ ಕುರಿತಾಗಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ವಡ್ಡಾರಾಧನೆ ರಚನೆ ಆದದ್ದು ಹಳ್ಳಿಖೇಡ(ಬಿ) ಗ್ರಾಮದಲ್ಲಿ ಮತ್ತು ಅದನ್ನು ರಚಿಸಿದವರು ಬ್ರಾಜಿಷ್ಣು ಎಂಬುದನ್ನು ಪುಷ್ಠೀಕರಿಸಲು ಹೈದರಾಬಾದ್ ಕರ್ನಾಟಕ ಸಾಹಿತಿಗಳು ಮತ್ತು ಜನಪ್ರತಿನಿಧಿಗಳು ಬಲವಾಗಿ ಸಮರ್ಥಿಸಿಕೊಳ್ಳುವ ಮೂಲಕ ವಾದವಿವಾದಗಳಿಗೆ ಮುಕ್ತಾಯ ಹೇಳಬೇಕಾದ ಅವಶ್ಯಕತೆಯನ್ನು ಅವರು ಒತ್ತಿ ಹೇಳಿದರು.

ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ತಮ್ಮ ನೇತೃತ್ವದಲ್ಲಿ ನಡೆದ ಎರಡನೇ ಈ ಸಮ್ಮೇಳನ ಜಿಲ್ಲಾ ಮಟ್ಟದ ಸಮ್ಮೇಳನಗಳನ್ನು ಮೀರಿಸುವಂತಾಗಿವೆ ಎಂದು ನಾನಲ್ಲ ಇಡೀ ಜಿಲ್ಲೆಯ ಜನ ಹೇಳುತ್ತಿದ್ದಾರೆ. ಸಮ್ಮೇಳನ ಯಶಸ್ವಿಗಾಗಿ ಹಗಲಿರುಳು ಶ್ರಮಿಸಿರುವ ಕಾರ್ಯಕರ್ತರು ಮತ್ತು ದಾನಿಗಳಿಗೆ ಸಲ್ಲುತ್ತದೆ ಎಂದರು.

ಕನ್ನಡ ನಾಡುನುಡಿ ರಕ್ಷಣೆ ವಿಷಯದಲ್ಲಿ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಡಾ.ಬಸವರಾಜ ಡೋಣೂರ ಅವರು ಮಾಡಿರುವ ಆರೋಪವನ್ನು ತಾವು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಕನ್ನಡ ವಿರೋಧಿ ಧೋರಣೆ ಅನುಸರಿಸಿದ ಬೆಳಗಾವಿ ಮಹಾನಗರ ಪಾಲಿಕೆ ಸೂಪರ್‌ಸೀಡ್ ಮಾಡಿದ್ದು ತಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಕನ್ನಡದ ಉಳಿವು ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ವೇದಿಕೆಯ ಮೇಲೆ ಕನ್ನಡದ ಬಗ್ಗೆ ಮಾತನಾಡುವ ವ್ಯಕ್ತಿಗಳು ಹೋರಾಟದಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದರು. ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ದಿ. ಎಸ್.ಬಂಗಾರಪ್ಪ, ರೈತ ಮುಖಂಡ ದಿ.ಬಸವರಾಜ ತಂಬಾಕೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಸವತಿರ್ಥ ವಿದ್ಯಾಪೀಠ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ಗುಂಡಯ್ಯ ತೀರ್ಥ ಸ್ವಾಗತಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ವೀರಂತ ರೆಡ್ಡಿ ಜಂಪಾ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ಆಶಯ ಭಾಷಣ ಮಾಡಿದರು. ಡಾ.ಶಿವಾನಂದ ಮಠಪತಿ ನಿರೂಪಿಸಿದರು. ರಾಜಕುಮಾರ ಅಲ್ಲೂರೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.