ಚಾಮರಾಜನಗರ: ಜಿಲ್ಲೆಯ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಗಡಿ ನಿರ್ಣಯ ಕುರಿತ ಅಂತಿಮ ಗೆಜೆಟ್ ಅಧಿಸೂಚನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬುಧವಾರ ಹೊರಡಿಸಿದ್ದು, ಜಿಲ್ಲೆಯಲ್ಲಿ 28 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಾಗೂ 83 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ನಿಗದಿ ಪಡಿಸಲಾಗಿದೆ.

ಜಿಲ್ಲೆಯಲ್ಲಿ ಈ ಹಿಂದೆ 23 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದವು. ಅದೀಗ 28ಕ್ಕೆ ಏರಿದೆ. 89 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿದ್ದವು ಅದು 83ಕ್ಕೆ ಇಳಿದೆ. ಈ ವರ್ಷದ ಜನವರಿ 2ರಂದು ಕ್ಷೇತ್ರ ಸಂಖ್ಯೆ ನಿಗದಿ ಮತ್ತು ಗಡಿ ನಿರ್ಣಯಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಹೊರಡಿಸಲಾಗಿತ್ತು.

ಯಳಂದೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು, ಕೊಳ್ಳೇಗಾಲ ತಾಲ್ಲೂಕಿನಲ್ಲಿ ನಾಲ್ಕು, ಹನೂರು ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ತಲಾ ಆರು ಹಾಗೂ ಚಾಮರಾಜನಗರ ತಾಲ್ಲೂಕಿನಲ್ಲಿ ಒಂಬತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ನಿಗದಿ ಮಾಡಲಾಗಿದೆ.

2021ರಲ್ಲಿ ನಡೆದಿದ್ದ ಕ್ಷೇತ್ರ ಪುನರ್‌ವಿಂಗಡಣೆ ಸಂದರ್ಭದಲ್ಲಿ ಇದು 27ಕ್ಕೆ ಏರಿತ್ತು. ಈಗ ಒಂದು ಕ್ಷೇತ್ರ ಹೆಚ್ಚಾಗಿದೆ.

ತಾ.ಪಂ ಕ್ಷೇತ್ರಗಳು: ಈವರೆಗೆ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ 89 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿದ್ದವು. 2021ರ ಪುನರ್‌ವಿಂಗಡಣೆಯಲ್ಲಿ ಕ್ಷೇತ್ರಗಳ ಸಂಖ್ಯೆ 75ಕ್ಕೆ ಇಳಿದಿತ್ತು. ಈಗ ನಡೆದಿರುವ ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ 83 ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ.

ಯಳಂದೂರು ತಾಲ್ಲೂಕಿನಲ್ಲಿ ಒಂಬತ್ತು, ಕೊಳ್ಳೇಗಾಲದಲ್ಲಿ 13, ಹನೂರು ತಾಲ್ಲೂಕಿಗೆ 17, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕುಗಳಲ್ಲಿ ಕ್ರಮವಾಗಿ 20 ಹಾಗೂ 24 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಗುರುತಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು

ಚಾಮರಾಜನಗರ ತಾಲ್ಲೂಕು: ಸಂತೇಮರಹಳ್ಳಿ, ಮಾದಾಪುರ, ಆಲೂರು, ಚಂದಕವಾಡಿ, ಹರದನಹಳ್ಳಿ, ಅಮಚವಾಡಿ, ಉಡಿಗಾಲ, ಹರವೆ ಮತ್ತು ಹೊಂಗನೂರು

ಗುಂಡ್ಲುಪೇಟೆ ತಾಲ್ಲೂಕು: ಬೇಗೂರು, ಬರಗಿ, ಕಬ್ಬಹಳ್ಳಿ, ತೆರಕಣಾಂಬಿ, ಹಂಗಳ ಮತ್ತು ಬನ್ನೀತಾಳಪುರ

ಹನೂರು ತಾಲ್ಲೂಕು: ಲೊಕ್ಕನಹಳ್ಳಿ, ಬಂಡಳ್ಳಿ, ಕೌದಳ್ಳಿ, ರಾಮಾಪುರ, ಮಾರ್ಟಳ್ಳಿ ಮತ್ತು ಮಹದೇಶ್ವರ ಬೆಟ್ಟ

ಕೊಳ್ಳೇಗಾಲ ತಾಲ್ಲೂಕು: ಕುಂತೂರು, ಸತ್ತೇಗಾಲ, ಪಾಳ್ಯ ಮತ್ತು ಕೊಂಗರಹಳ್ಳಿ,

ಯಳಂದೂರು ತಾಲ್ಲೂಕು: ಅಗರ, ಯಳಂದೂರು ಕಸಬಾ ಮತ್ತು ಕೆಸ್ತೂರು

ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು

ಚಾಮರಾಜನಗರ: ಜನ್ನೂರು, ಉಮ್ಮತ್ತೂರು, ಸಂತೇಮರಹಳ್ಳಿ, ಮಂಗಲ, ಮರಿಯಾಲ, ಕುದೇರು, ಆಲೂರು, ಜ್ಯೋತಿಗೌಡನಪುರ, ದೊಡ್ಡಮೋಳೆ, ನಾಗವಳ್ಳಿ, ಹರದನಹಳ್ಳಿ, ಪುಣಜನೂರು, ವೆಂಕಟಯ್ಯನಛತ್ರ, ಅಮಚವಾಡಿ, ಅರಕಲವಾಡಿ, ಯಾನಗಹಳ್ಳಿ, ನಂಜೇದೇವನಪುರ, ಹೆಗ್ಗೋಠಾರ, ಹರವೆ, ಸಾಗಡೆ, ಮಲೆಯೂರು, ಇರಸವಾಡಿ, ಹೊಂಗನೂರು ಮತ್ತು ಕೆಂಪನಪುರ.

ಗುಂಡ್ಲುಪೇಟೆ: ಬೇಗೂರು, ಹೊರೆಯಾಲ, ರಾಘವಾಪುರ, ಬರಗಿ, ಕೂತನೂರು, ಬೇರಂಬಾಡಿ, ನಿಟ್ರೆ, ಸೋಮಹಳ್ಖಿ, ಕಬ್ಬಹಳ್ಖಿ, ತೆರಕಣಾಂಬಿ, ಕುಂದಕೆರೆ, ಬೊಮ್ಮಲಾಪುರ, ಬಾಚಹಳ್ಳಿ, ಶಿವಪುರ, ಹಂಗಳ, ಕಣ್ಣೇಗಾಲ, ಬನ್ನಿತಾಳಪುರ, ನೇನೆಕಟ್ಟೆ, ಅಣ್ಣೂರು ಮತ್ತು ಕಗ್ಗಳ.

ಕೊಳ್ಳೇಗಾಲ: ಟಗರಪುರ, ಕುಂತೂರು, ಮುಳ್ಳೂರು, ಸಿದ್ದಯ್ಯನಪುರ, ಧನಗೆರೆ, ಸತ್ತೇಗಾಲ, ಕುಣಗಳ್ಳಿ, ಮಧುವನಹಳ್ಳಿ, ಪಾಳ್ಯ, ತೆಳ್ಳನೂರು, ಚಿಕ್ಕಲ್ಲೂರು, ದೊಡ್ಡಿಂದುವಾಡಿ ಮತ್ತು ಕೊಂಗರಹಳ್ಳಿ,

ಹನೂರು: ಲೊಕ್ಕನಹಳ್ಳಿ, ಹುತ್ತೂರು, ಪಿ.ಜಿ.ಪಾಳ್ಯ, ಬಂಡಳ್ಳಿ, ಮಂಗಲ, ಮಣಗಳ್ಳಿ, ಕೌದಳ್ಳಿ, ಶಾಗ್ಯ, ರಾಮಾಪುರ, ಸೂಳೇರಿಪಾಳ್ಯ, ಅಜ್ಜೀಪುರ, ಮಾರ್ಟಳ್ಳಿ, ಹೂಗ್ಯಂ, ಮಿಣ್ಯಂ, ಮಹದೇಶ್ವರಬೆಟ್ಟ, ಪೊನ್ನಾಚಿ ಮತ್ತು ಕುರಟ್ಟಿ ಹೊಸೂರು

ಯಳಂದೂರು: ಅಗರ, ಗೌಡಹಳ್ಳಿ, ಮದ್ದೂರು, ಯರಗಂಬಳ್ಳಿ, ಗುಂಬಳ್ಖಿ, ಯರಿಯೂರು, ಕೆಸ್ತೂರು, ಹೊನ್ನೂರು ಮತ್ತು ಅಂಬಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.