ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: 3,627 ಹೆ. ಮೀಸಲು ಅರಣ್ಯ ಘೋಷಣೆ ನೆನೆಗುದಿಗೆ

Published : 13 ಫೆಬ್ರುವರಿ 2024, 7:40 IST
Last Updated : 13 ಫೆಬ್ರುವರಿ 2024, 7:40 IST
ಫಾಲೋ ಮಾಡಿ
Comments
1991ರಲ್ಲೇ ಪ್ರಾಥಮಿಕ ಅಧಿಸೂಚನೆ ವಿವಿಧ ಹಂತಗಳಲ್ಲಿ ಪ್ರಕ್ರಿಯೆಗಳು ಬಂಡೀಪುರಕ್ಕೆ ಹೊಂದಿಕೊಂಡ ಜಾಗ
ಮೀಸಲು ಅರಣ್ಯ ಘೋಷಣೆ ಪ್ರಕ್ರಿಯೆ ನಡೆಯುತ್ತಿದ್ದು ಈಗಿನ ವಸ್ತುಸ್ಥಿತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು
ಸಿ.ಟಿ.ಶಿಲ್ಪಾನಾಗ್‌ ಜಿಲ್ಲಾಧಿಕಾರಿ
ಮೀಸಲು ಅರಣ್ಯವಾಗಿ ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಧಿಸೂಚನೆ ಶೀಘ್ರವಾದರೆ ನಮ್ಮ ಅರಣ್ಯದ ವ್ಯಾಪ್ತಿ ವಿಸ್ತಾರವಾಗಲಿದೆ
ಪಿ.ರಮೇಶ್‌ಕುಮಾರ್‌ ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಬಂಡೀಪುರ ಮಾತ್ರವಲ್ಲ ಜಿಲ್ಲೆಯ ವಿವಿಧ ಕಡೆಗಳಲ್ಲಿ ಗುರುತಿಸಲಾಗಿರುವ ಪ್ರದೇಶಗಳನ್ನು ಶೀಘ್ರವಾಗಿ ಮೀಸಲು ಅರಣ್ಯವಾಗಿ ಘೋಷಿಸಬೇಕು
ಗಿರಿಧರ್‌ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ
ಸಂಘರ್ಷ ತಡೆಯಲು ಅರಣ್ಯ ವಿಸ್ತಾರ ಅಗತ್ಯ
ಬಂಡೀಪುರ ವ್ಯಾಪ್ತಿಯಲ್ಲಿ ಈಗ ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಅವುಗಳಿಗೆ ಆವಾಸದ ಕೊರತೆ ಕಾಡಲು ಆರಂಭಿಸಿದೆ.  ಇತ್ತೀಚೆಗೆ ಎರಡರಿಂದ ನಾಲ್ಕು ವರ್ಷ ವಯಸ್ಸಿನ ಹುಲಿಗಳು ಕೂಡ ಕಾಡಿನಿಂದ ಹೊರಬಂದು ಆವಾಸ ಸ್ಥಾನ ಗುರುತಿಸಿಕೊಳ್ಳಲು ಬೇರೆ ಹುಲಿಗಳೊಂದಿಗೆ ಕಾದಾಡಿ ಮೃತಪಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.   ‘ಅರಣ್ಯದ ವ್ಯಾಪ್ತಿ ವಿಸ್ತರಿಸುವ ಅಗತ್ಯವಿದೆ. ಕಾಡಂಚಿನ ಪ್ರದೇಶಗಳಲ್ಲಿ ಖಾಲಿ ಬಿದ್ದಿರುವ ಕಂದಾಯ ಜಮೀನುಗಳನ್ನು ಗುರುತಿಸಿ ಮೀಸಲು ಅರಣ್ಯವಾಗಿ ಘೋಷಿಸಿದರೆ ವನ್ಯಜೀವಿಗಳಿಗೆ ಅನುಕೂಲವಾಗಲಿದೆ. ಇದರಿಂದ ಮಾನವ ವನ್ಯಜೀವಿ ಸಂಘರ್ಷ ತಡೆಯಬಹುದು’ ಎಂದು ಹೇಳುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ವನ್ಯಪ್ರೇಮಿಗಳು.   ‘2013ರ ಹೈಕೋರ್ಟ್‌ ಆದೇಶ ಪ್ರಕಾರ ಆನೆಗಳ ಆವಾಸಸ್ಥಾನಗಳಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್‌– 4 ಅಡಿ ಗುರುತಿಸಿರುವ ಎಲ್ಲ ಜಮೀನುಗಳನ್ನು ಸೆಕ್ಷನ್‌ 17ರ ಅಡಿ ಅಂತಿಮ ಅಧಿಸೂಚನೆ ಹೊರಡಿಸಲು ಕಂದಾಯ ಇಲಾಖೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಮೀಸಲು ಅರಣ್ಯ ಪ್ರದೇಶ ವಿಸ್ತರಣೆಯಾದರೆ ಮಾನವ– ಸಂಘರ್ಷ ತಡೆಯಲು ಸಹಕಾರಿಯಾಗಲಿದೆ’ ಎಂದು ಬೆಳಗಾವಿಯ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್‌ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT