ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಲಿ‌ ಜಮೀನಿನಲ್ಲಿ‌ ಪತನವಾದ ವಾಯುಪಡೆ ಲಘು ವಿಮಾನ: ಆಗಿದ್ದೇನು?

ವಾಯುಪಡೆ ತರಬೇತಿ ವಿಮಾನ ಪತನ, ಇಬ್ಬರು ಪೈಲಟಗಳು ಪಾರು
Published : 1 ಜೂನ್ 2023, 12:36 IST
Last Updated : 1 ಜೂನ್ 2023, 12:36 IST
ಫಾಲೋ ಮಾಡಿ
Comments
ಪೈಲಟ್ ಗಳು ಸುರಕ್ಷಿತ
'ವಿಮಾನ ಬಿದ್ದ ಸ್ಥಳದಿಂದ 500 ಮೀಟರ್ ದೂರದಲ್ಲಿ ಪೈಲಟ್ ಗಳಿಬ್ಬರೂ ಪ್ಯಾರಚೂಟ್ ಮೂಲಕ ಇಳಿದಿದ್ದರು. ಇಬ್ಬರಿಗೂ ಹೆಚ್ಚು ಗಾಯಗಳಾಗಿರಲಿಲ್ಲ. ಹಿರಿಯ ಪೈಲಟ್ ಅವರ ತುಟಿ ಒಡೆದಿತ್ತು. ಆಸ್ಪತ್ರೆಗೆ ಹೋಗೋಣವೇ ಎಂದು ಕೇಳಿದೆವು. 'ಅವರು ಬೇಡ, ನಮ್ಮ ರಕ್ಷಣಾ ತಂಡ ಬರಲಿದೆ' ಎಂದು ಹೇಳಿದರು. ಹತ್ತು‌ನಿಮಿಷಗಳ ಬಳಿಕ ಬೆಂಗಳೂರಿನಿಂದ ವಾಯುಸೇನೆಯ ಮೂರು ಹೆಲಿಕಾಪ್ಟರ್ ಗಳು ಬಂದು ಇಬ್ಬರನ್ನೂ ‌ಕರೆದೊಯ್ದವು' ಎಂದು ಭೋಗಾಪುರ ಗ್ರಾಮ‌ಪಂಚಾಯಿತಿ ಸದಸ್ಯ ಸೋಮಶೇಖರ್ ಕೆಲ್ಲಂಬಳ್ಳಿ ಅವರು ಮಾಹಿತಿ ನೀಡಿದರು.
ಅಗ್ನಿಶಾಮಕದಳ, ಪೊಲೀಸರ ದೌಡು
ವಿಷಯ ಗೊತ್ತಾಗುತ್ತಲೇ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಹೊತ್ತ ಉರಿಯುತ್ತಿದ್ದ ವಿಮಾನದ ಅವಶೇಷಗಳಿಗೆ ನೀರು‌ ಎರಚಿ ಬೆಂಕಿ‌ ನಂದಿಸಿದರು. ವಾಯುಸೇನೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಾಧ್ಯಮಗಳೊಂದಿಗೆ ಮಾತನಾಡಲು‌ ನಿರಾಕರಿಸಿದರು.
ಭಾರಿ ಜನ
ಭೋಗಾಪುರ ಮತ್ತು ಸಪ್ಪಯ್ಯನಪುರ ಜನವಸತಿ ಪ್ರದೇಶಗಳ‌ ನಡುವೆ ಇರುವ ಖಾಲಿ ಜಮೀನಿನಲ್ಲಿ ವಿಮಾನ ಪತನಗೊಂಡ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ. ವಿಮಾನ ಬಿದ್ದಿರುವ ವಿಷಯ ತಿಳಿಯುತ್ತಲೇ ಎರಡು ಊರುಗಳಲ್ಲದೆ, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲಿನ ಊರುಗಳ ಜನರು ಭಾರಿ ಸಂಖ್ಯೆಯಲ್ಲಿ‌ ಸೇರಿದ್ದರು. ಅವರನ್ನು‌ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಅರ್ಧ ಗಂಟೆಯಲ್ಲಿ ಸ್ಥಳದಲ್ಲಿ ವಾಯುಸೇನಾ ಅಧಿಕಾರಿಗಳು
ಘಟನೆ ನಡೆದ ಅರ್ಧಗಂಟೆಯಲ್ಲಿ ವಾಯುಪಡೆಯ ಮೂರು‌ ಹೆಲಿಕಾಪ್ಟರ್ ಗಳು ಘಟನೆ ನಡೆದ ಸ್ಥಳದ ಸಮೀಪ ಬಂದಿಳಿದವು. ವಾಯುಪಡೆಯ ಅಧಿಕಾರಿಗಳು ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ಇಬ್ಬರು ಪೈಲಟ್ ಗಳನ್ನು ಹೆಲಿಕಾಪ್ಟರ್ ನಲ್ಲಿ ಕರೆದೊಯ್ದರು. ಇನ್ನೂ‌ ಕೆಲವು ಅಧಿಕಾರಿಗಳು ವಿಮಾನ‌ ಪತನಗೊಂಡ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT