ಗುಂಡ್ಲುಪೇಟೆ (ಚಾಮರಾಜನಗರ): ‘ರಾಮನ ಮೇಲೆ ನಮಗೂ ಭಕ್ತಿ ಗೌರವವಿದೆ. ಹಾಗೆಂದು ಚುನಾವಣೆಗೆ ರಾಮ ಮಂದಿರವನ್ನು ಬಳಸಿಕೊಳ್ಳಬಾರದು’ ಎಂದು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ಶುಕ್ರವಾರ ಹೇಳಿದರು.

ರಾಮಮಂದಿರ ಉದ್ಘಾಟನೆ ವಿಚಾರವಾಗಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ರಾಮನ ಮೇಲಿನ ಭಕ್ತಿಯನ್ನು ಗುಡಿ ಕಟ್ಟಿ ತೋರಿಸಬೇಕು ಎಂಬುದೇನಿಲ್ಲ. ರಾಮನ ಆದರ್ಶಗಳು ನಮಗೆ ಮುಖ್ಯ. ರಾಮಮಂದಿರ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಅಪೂರ್ಣ ಮಂದಿರವನ್ನು ಉದ್ಘಾಟನೆ ಮಾಡಬಾರದು ಎಂದು ಶಂಕರಾಚಾರ್ಯ ಪೀಠಗಳ ಪೂಜ್ಯರೂ ಹೇಳಿದ್ದಾರೆ. ಆದರೆ ಚುನಾವಣೆಯ ವಿಷಯವಾಗಿ ರಾಮಮಂದಿರ ಬಳಸಿಕೊಳ್ಳಲಾಗುತ್ತಿದೆ’ ಎಂದರು.

ಬಾಬರಿ ಮಸೀದಿ ಮಾದರಿಯಲ್ಲಿ ಭಟ್ಜಳದ ಮಸೀದಿಯನ್ನು ಒಡೆಯುತ್ತೇವೆ ಎಂಬ ಸಂಸದ ಅನಂತಕುಮಾರ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಸಂಸ್ಕಾರ ಇರುವವರು ಹೇಳುವಂತಹ ಮಾತಲ್ಲ ಇದು. ನಾವು ಜಾತ್ಯತೀತವಾಗಿರಬೇಕು. ಒಂದು ಸಮುದಾಯ, ಧರ್ಮವನ್ನು ಗುರಿಮಾಡುವುದು ತಪ್ಪು’ ಎಂದರು.

ಕ್ಷಮೆ ಕೋರುವೆ: ಗುಂಡ್ಲುಪೇಟೆಯಲ್ಲಿ ಕಬ್ಬು ಬೆಳೆಗಾರರ ಸಂಘದವರ ಮನವಿ ಸ್ವೀಕರಿಸುವಾಗ, ರೈತರ ಕುರಿತ ವಿವಾದಾತ್ಮಕ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಶಿವಾನಂದ ಪಾಟೀಲ, ‘ರೈತರು ಬರಗಾಲ ಬರಲೆಂದು ಬಯಸುತ್ತಾರೆಂದು ನಾನು ಹೇಳಿಲ್ಲ, ಮಾಧ್ಯಮಗಳಲ್ಲಿ ಹೇಳಿಕೆಯನ್ನು ತಿರುಚಲಾಗಿದೆ. ನಾನು ರೈತ ವಿರೋಧಿ ಹೇಳಿಕೆ ಕೊಟ್ಟಿಲ್ಲ. ರಾಜ್ಯದ ರೈತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದರು.

‘ಕಬ್ಬಿನ ಹೆಚ್ಚುವರಿ ಹಣ ಬಾಕಿಯನ್ನು ಶೀಘ್ರವೇ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು. ಮಂಡಳಿ ಸಭೆಗೆ ಚಾಮರಾಜನಗರ ರೈತ ಮುಖಂಡರನ್ನು ಸೇರ್ಪಡೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಕಬ್ಬಿನ ಬೆಲೆ ಹೆಚ್ಚಳ ಬಗ್ಗೆ ಮಾತನಾಡುತ್ತಾ, ‘ಕೇಂದ್ರ ಸರ್ಕಾರವನ್ನು ನೀವೇಕೆ ಪ್ರಶ್ನೆ ಮಾಡುವುದಿಲ್ಲ? ದೇಶದ ಪ್ರಧಾನ ಮಂತ್ರಿಯಾಗಿದ್ದ ದೇವೇಗೌಡ ಅವರು ಹೋಗಿ ಮನವಿ ಮಾಡಿದ್ದಕ್ಕೆ ಬೆಲೆಯನ್ನು ₹ 300 ಏರಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರವನ್ನು ನೀವು ಪ್ರಶ್ನೆ ಮಾಡಬೇಕು’ ಎಂದು ರೈತ ಮುಖಂಡರಿಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.